ಮೈತ್ರಿಕೂಟ ಟೀಕಿಸುವ ಭರದಲ್ಲಿ ರಾಯಚೂರಿನಲ್ಲಿ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ನಾಲಿಗೆ ಹರಿಬಿಟ್ಟಿದ್ದಾರೆ. ಪಪ್ಪು ಪ್ರಧಾನಿ ಅಭ್ಯರ್ಥಿ ಅಂದ್ರೆ ಮಮತಾ ಬ್ಯಾನರ್ಜಿ ವೆಸ್ಟ್ ಬೆಂಗಾಲ್ ನಿಂದ ಚಪ್ಪಲಿ ಎಸೀತಾಳೆ ಎಂದು ಹೇಳಿ ಯಡವಟ್ಟು ಮಾಡಿಕೊಂಡಿದ್ದಾರೆ.
ರಾಯಚೂರು (ಏ.12): ಮೈತ್ರಿಕೂಟ ಟೀಕಿಸುವ ಭರದಲ್ಲಿ ರಾಯಚೂರಿನಲ್ಲಿ ಬಿಜೆಪಿ ಶಾಸಕ ಹಾಗೂ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ನಾಲಿಗೆ ಹರಿಬಿಟ್ಟಿದ್ದಾರೆ. ಪಪ್ಪು ಪ್ರಧಾನಿ ಅಭ್ಯರ್ಥಿ ಅಂದ್ರೆ ಮಮತಾ ಬ್ಯಾನರ್ಜಿ ವೆಸ್ಟ್ ಬೆಂಗಾಲ್ ನಿಂದ ಚಪ್ಪಲಿ ಎಸೀತಾಳೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಹೇಳಿ ಯಡವಟ್ಟು ಮಾಡಿಕೊಂಡಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿ ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಡವಟ್ಟು ಮಾಡಿಕೊಂಡಿದ್ದು, ಅವರು(ಕಾಂಗ್ರೆಸ್) ಗೆಲ್ತಿರೋ ಸ್ಥಾನ ಬರೀ 37, ಅವರ ಪ್ರಧಾನಿ ಮಂತ್ರಿ ಅಭ್ಯರ್ಥಿ ಯಾರಪ್ಪ? ಪಪ್ಪು ಪ್ರಧಾನಿ ಅಂದ್ರೆ ಮಮತಾ ಬ್ಯಾರ್ನಜಿ ಸುಮ್ಮನಿರ್ತಾಳಾ. 37 ಸ್ಥಾನ ತಗೊಂಡು ಪಪ್ಪು ಪ್ರಧಾನಿ ಅಂದ್ರೆ ವೆಸ್ಟ್ ಬೆಂಗಾಲ್ ನಿಂದ ಮಮತಾ ಬ್ಯಾನರ್ಜಿ ಚಪ್ಪಲಿ ಎಸೀತಾಳೆ. ಲಾಲು ಪ್ರಸಾದ್ ಯಾದವ್ ಸುಮ್ಮನಿರ್ತಾನಾ? ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದಾರೆ.
ನನಗೆ ಇಷ್ಟು ಸೀಟು ಬೇಕು ನಿನಗಿಷ್ಟು ಸೀಟು ಬೇಕು ಅನ್ನೋರು. ಮುಂದೆ ಅಧಿಕಾರ ಸಿಗುತ್ತೆ ಅಂದ್ರೆ ಓಬ್ಬರ ಕೂದಲು ಹಿಡಿದುಕೊಂಡು ಒಬ್ಬರು ಜಗಳ ಆಡ್ತಾರೆ. ಇಂಥ ಸರ್ಕಾರ ಬೇಕಾ? ಇಲ್ಲ ಜಗತ್ ಪ್ರಸಿದ್ಧ ಪ್ರಧಾನಿ ಬೇಕಾ ಯೋಚನೆ ಮಾಡಿ ಎಂದ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಹೇಳಿದ್ದಾರೆ.