ಶಾಲೆಗಳಿಗೆ ಬಾಂಬ್‌ ಬೆದರಿಕೆ - ವೀಕ್‌ ಲೀಡರ್‌ ಶಿಪ್‌ ಕಾರಣ: ಗೋವಿಂದ ಕಾರಜೋಳ

By Kannadaprabha News  |  First Published Dec 2, 2023, 5:05 PM IST

ಬೆಂಗಳೂರಿನಲ್ಲಿ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದು ವೀಕ್‌ ಲೀಡರ್‌ಶಿಪ್‌ ಕಾರಣವೆಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. 


ಧಾರವಾಡ (ಡಿ.02): ಬೆಂಗಳೂರಿನಲ್ಲಿ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದು ವೀಕ್‌ ಲೀಡರ್‌ಶಿಪ್‌ ಕಾರಣವೆಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಧಾರವಾಡದಲ್ಲ  ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಶಕ್ತ ನಾಯಕತ್ವದ ಕೊರತೆಯಿಂದ ರಾಜ್ಯದಲ್ಲಿ ಆಗಾಗ ಇಂತಹ ಘಟನೆಗಳು ನಡೆಯುತ್ತಿವೆ. ಏಕಕಾಲಕ್ಕೆ ಇಷ್ಟೊಂದು ಶಾಲೆಗಳಿಗೆ ಬೆದರಿಕೆ ಕರೆ ಬರುತ್ತದೆ ಎಂದರೆ ಏನು? ಜನರನ್ನು ಭಯದ ವಾತಾವರಣದಲ್ಲಿಟ್ಟು ಆಡಳಿತ ಮಾಡುವ ಹುನ್ನಾರ ಇದು. ಯಾವ ಕಾರಣಕ್ಕೂ ಅಂತಹ ದೇಶದ್ರೋಹಿಗಳನ್ನು ಬಿಡಬಾರದು. ಅಂಥವರನ್ನು ಮಟ್ಟ ಹಾಕಬೇಕು. 

ಇಷ್ಟೊತ್ತಿಗಾಗಲೇ ಅಪರಾಧಿಗಳನ್ನು ಬಂಧಿಸಿ ತರಬೇಕಿತ್ತು. ಆಡಳಿತದಲ್ಲಿ ಹಿಡಿತ ಇಲ್ಲ ಎಂಬ ಅನುಮಾನ ಬರುತ್ತಿದೆ ಎಂದರು. ಪಂಚರಾಜ್ಯ ಚುನಾವಣೆ ಫಲಿತಾಂಶ ವಿಚಾರವಾಗಿ ಮಾತನಾಡಿದ ಕಾರಜೋಳ ಅವರು, ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮಟ್ಟಿಗೆ ಬೆಳೆದಿಲ್ಲ. ಕಳೆದ ಸಲ ಎರಡು ಕ್ಷೇತ್ರದಲ್ಲಿದ್ದೆವು. ಈ ಸಲ ಐದಕ್ಕಿಂತ ಹೆಚ್ಚಾಗಬಹುದೆಂಬ ನಿರೀಕ್ಷೆ ಇದೆ. ಆದರೆ, ನಮ್ಮ ಮತ ಬ್ಯಾಂಕ್ ಹೆಚ್ಚಳ ಆಗಿದೆ. ಇದು ಲೋಕಸಭೆಯಲ್ಲಿ ನಮಗೆ ಹೆಚ್ಚು ಅನುಕೂಲ ಆಗಲಿದೆ. ಕಾಂಗ್ರೆಸ್ ಕರ್ನಾಟಕದ ಮೋಸದಾಟವನ್ನೇ ತೆಲಂಗಾಣದಲ್ಲಿ ಮುಂದುವರಿಸಿದೆ. 

Tap to resize

Latest Videos

ಪಂಚರಾಜ್ಯಗಳ ಶಾಸಕರ ರಕ್ಷಿಸಿ ಇಡುವಂತಹ ಸ್ಥಿತಿ ಬರಲ್ಲ: ಡಿಕೆಶಿ

ಹೀಗಾಗಿ ನಾವು ತೆಲಂಗಾಣದಲ್ಲಿ ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ. ಅಲ್ಲಿ ನಮ್ಮ ಪೈಪೋಟಿಯೂ ಇಲ್ಲ. ನಾವು ಮೂರನೇ ಸ್ಥಾನಕ್ಕೆ ಬರುತ್ತೇವೆ ಎಂದರು. ಇನ್ನು ಛತ್ತಿಸ್‌ಗಡ್‌ನಲ್ಲಿ ಪ್ರಬಲ ಪೈಪೋಟಿ ಇದೆ. ನಾವು ಅಧಿಕಾರಕ್ಕೆ ಬರುವ ಲಕ್ಷಣಗಳಿವೆ. ಪಂಚರಾಜ್ಯದ ಫಲಿತಾಂಶ ಲೋಕಸಭೆ ದಿಕ್ಸೂಚಿ ಎನ್ನಲಾಗದು ಎಂದರು.ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಬಗ್ಗೆ ಯತ್ನಾಳ ಅಸಮಾಧಾನ ವಿಚಾರವಾಗಿ ಅದು ಮುಗಿದು ಹೋದ ಅಧ್ಯಾಯ. ಅದರ ಬಗ್ಗೆ ಮಾತನಾಡಲಾರೆ. ರಾಜ್ಯಾಧ್ಯಕ್ಷರನ್ನು ನಾವೆಲ್ಲ ಬೆಂಬಲಿಸಬೇಕು. ಬಿಜೆಪಿ ಅಧಿಕಾರಕ್ಕೆ ತರಲು ಮತ್ತೆ ಎಲ್ಲರೂ ಶ್ರಮಿಸೋಣ ಅಂತಷ್ಟೇ ಹೇಳುವೆ ಅಂದರು.

ಯೋಧರ ಸೇವೆ ನಿಜಕ್ಕೂ ಅನನ್ಯವಾದುದು: ಲೋಕಾಪುರ ಪಟ್ಟಣದ ಹಣಮಂತ ಬರಗಿ ಸೇನೆಯಲ್ಲಿ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವ-ಗ್ರಾಮಕ್ಕೆ ಶುಕ್ರವಾರ ಮರಳಿದರು. ಅವರನ್ನು ಊರಿನ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು. ನಿವೃತ್ತ ಯೋಧ ಹಣಮಂತ ಬರಗಿ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಿಹಿ ಹಂಚಿದರು. ಭಾರತ ಮಾತಾಕೀ ಜೈ ಎಂಬ ಜೈಕಾರ ಮುಗಿಲುಮುಟ್ಟಿತ್ತು.

ಜಗದೀಶ್ ಶೆಟ್ಟರ್ ಡಿಎನ್‌ಎ ಸಂಘ ಪರಿವಾರದ್ದೇ ಹೊರತು ಕಾಂಗ್ರೆಸ್‌ನದ್ದಲ್ಲ: ಸಿ.ಟಿ.ರವಿ

೨೦೦೪ರಲ್ಲಿ ಮಂಗಳೂರಲ್ಲಿ ನಡೆದ ರ‍್ಯಾಲಿಯಲ್ಲಿ ಆಯ್ಕೆ ಆಗಿದ್ದ ಹಣಮಂತ ಸಿಕಂದ್ರಾಬಾದ್‌, ನಾಗಾಲ್ಯಾಂಡ, ಓಡಿಶಾ, ಲಡಾಖ, ಉತ್ತರಪ್ರದೇಶ ವಿವಿಧೆಡೆ ಸೇವೆ ನಿರ್ವಹಿಸಿದ್ದಾರೆ. ಸೇನೆಯಲ್ಲಿ ಹವಾಲ್ದಾರ್‌ ಆಗಿ ಪದೊನ್ನತಿ ಹೊಂದಿ ೨೮-೧೨-೨೦೨೩ರಂದು ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ. ಮೆರವಣಿಗೆ ವೇಳೆ ಸುಭಾಸ ಸೊರಗಾಂವಿ, ಈರಣ್ಣ ಪಾಟೀಲ, ಶಿವಾನಂದ ಉದಪುಡಿ, ಭೀಮನಗೌಡ ಪಾಟೀಲ, ಪ್ರದೀಪಕುಮಾರ ಪಾಟೀಲ, ವೆಂಕಟೇಶ ಸೊರಗಾಂವಿ, ಲೋಕೇಶ ಸೊರಗಾಂವಿ, ಸಿದ್ದು ತಿರಕನ್ನವರ, ಸಂಜು ದೇಸಾಯಿ, ಗೋಪಾಲ ಸಣ್ಣರಾಯಪ್ಪನವರ, ಸಂಜು ಗಿರಿಸಾಗರ, ಗುರುದತ್ತ ಆಕಾಡೆಮಿ ಸದಸ್ಯರು ಹಾಗು ಕುಟುಂಬಸ್ಥರು, ಗ್ರಾಮಸ್ಥರು ಇದ್ದರು.

click me!