ಮೊನ್ನೇ ಅಷ್ಟೇ ಬಿಜೆಪಿ ಸೇರಿದ್ದ ಮಾಜಿ IPS ಅಣ್ಣಾಮಲೈ ವಿರುದ್ಧ ಕೇಸ್ ಬುಕ್

By Suvarna News  |  First Published Aug 28, 2020, 7:04 PM IST

ಮೂರು ದಿನಗಳ ಹಿಂದಷ್ಟೇ ಬಿಜೆಪಿಗೆ ಸೇರಿದ್ದ ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ಹಾಗೂ ಕೆಲ ಪಕ್ಷದ ಕಾರ್ಯಕರ್ತರ ವಿರುದ್ಧ ಕೇಸ್ ಬುಕ್ ಆಗಿದೆ.


ಚೆನ್ನೈ, (ಆ.28):  ಮೊನ್ನೇ ಅಷ್ಟೇ ಬಿಜೆಪಿ ಸೇರಿರುವ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಾಗಿದೆ. 

ಕೊರೋನಾ ವೈರಸ್ ಭೀತಿ ನಡುವೆಯೂ ಮಾರ್ಗಸೂಚಿ ಉಲ್ಲಂಘಿಸಿ ಸಭೆ ನಡೆಸಿದ ಕಾರಣದಿಂದ ಕೊಯಂಬತ್ತೂರು ನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Latest Videos

undefined

IPS ಹುದ್ದೆ ಬಿಟ್ಟು ಅಣ್ಣಾಮಲೈ ಬಿಜೆಪಿ ಸೇರಿರುವ ಹಿಂದೆ ಕರ್ನಾಟಕದ ಲೀಡರ್: ಯಾರದು..?

ಬಿಜೆಪಿ ಸೇರಿದ ಬಳಿಕ ವಿಕೆಕೆ ಮೆನನ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿಗೆ ಗುರುವಾರ ಅಣ್ಣಾಮಲೈ ಭೇಟಿ ನೀಡಿದ್ದರು. ಬಹಳಷ್ಟು ಕಾರ್ಯಕರ್ತರು ಕಚೇರಿಯಲ್ಲಿ ಸೇರಿ ಅವರನ್ನು ಸ್ವಾಗತಿಸಿದ್ದರು.

 ಕೋವಿಡ್ 19 ಹರಡದಂತೆ ಇರುವ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಕಚೇರಿಯಲ್ಲಿ ಬಹಳಷ್ಟು ಜನರು ಸೇರಿದ್ದರು. ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಅಣ್ಣಾಮಲೈ ವಾಹನದಿಂದಲೇ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು.

ಈ ಹಿನ್ನೆಲೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್ ಸುಗನ್ಯಾ ನೀಡಿದ ದೂರಿನ ಆಧಾರದ ಮೇಲೆ, ಕತ್ತೂರು ಪೊಲೀಸರು ಕೆ.ಅಣ್ಣಾಮಲೈ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ನಂದಕುಮಾರ್, ಬಿಜೆಪಿ ರಾಜ್ಯ ಮಟ್ಟದ ನಾಯಕರಾದ ಜಿಕೆಎಸ್ ಸೆಲ್ವಕುಮಾರ್, ಎಸ್.ಆರ್.ಸೇಕರ್ ಮತ್ತು ಕನಗಸಬಪತಿ ಮತ್ತು ಇತರ ಕೆಲವು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ನಾನೇಕೆ ಬಿಜೆಪಿ ಸೇರಿದೆ? ಅಣ್ಣಾಮಲೈ ಬಾಯಲ್ಲೇ ಕೇಳಿ ಕಾರಣ..

"

click me!