ರಾಹುಲ್‌, ಫಿರೋಜ್‌ ಗಾಂಧಿ ಜಾತಿ ಯಾವುದು?: ಈಶ್ವರಪ್ಪ ವಾಗ್ದಾಳಿ

By Govindaraj SFirst Published Feb 14, 2024, 10:43 PM IST
Highlights

ರಾಹುಲ್‌ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಿ ಮೋದಿಯವರ ಜಾತಿ ಯಾವುದೇಂದು ತಿಳಿದುಕೊಳ್ಳಲಿ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು. 

ಶಿವಮೊಗ್ಗ (ಫೆ.14): ರಾಹುಲ್‌ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಿ ಮೋದಿಯವರ ಜಾತಿ ಯಾವುದೇಂದು ತಿಳಿದುಕೊಳ್ಳಲಿ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1994 ಗುಜರಾತ್ ನಲ್ಲಿ ಕಾಂಗ್ರೆಸ್ ಸರ್ಕಾರ ನರೇಂದ್ರ ಮೋದಿ ಅವರ ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸಿತ್ತು. ಈ ಮಾಹಿತಿ ಇಲ್ಲದ ಅಜ್ಞಾನಿ ರಾಹುಲ್ ಗಾಂಧಿ ನರೇಂದ್ರ ಮೋದಿಯವರು ಹಿಂದುಳಿದ ವರ್ಗಕ್ಕೆ ಸೇರಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ ನವರಿಗೆ ಎಷ್ಟು ಬೈದ್ರು ಮಾನ ಮರ್ಯಾದೆ ಇಲ್ಲ. ಇನ್ನೂ ಯಾವ ಯಾವ ಪದದಲ್ಲಿ ಬೈಯಬೇಕೋ ಗೊತ್ತಿಲ್ಲ. 

ಗೊತ್ತಿಲ್ಲದಿದ್ದರೆ ಗೊತ್ತಿದ್ದವರ ಬಳಿ ಕೇಳಿಕೊಳ್ಳುತ್ತಾರೆ. ಆದರೆ, ರಾಹುಲ್ ಗಾಂಧಿ ಎಲ್ ಕೆಜಿ ವಿದ್ಯಾರ್ಥಿಗೂ ಕಡೆ ಎಂದು ಚಾಟಿ ಬೀಸಿದರು. ನರೇಂದ್ರ ಮೋದಿ ಅವರನ್ನು ನಾವು ಯಾರು ಒಬಿಸಿ ನಾಯಕ ಅಂತಾ ಅಂದುಕೊಂಡಿಲ್ಲ. ನರೇಂದ್ರ ಮೋದಿ ಒಬ್ಬ ಹಿಂದೂ ನಾಯಕ. ನರೇಂದ್ರ ಮೋದಿ ಅವರ ಜಾತಿ ಓಬಿಸಿ ಅಲ್ಲ ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂರಿಸಿಕೊಂಡು ಪಾಠ ಮಾಡಲಿ ಎಂದು ಹರಿಹಾಯ್ದರು.

ದೇಶದ ವಿಚಾರವಾಗಿ ನೂರು ನೋಟಿಸ್ ಬಂದರೂ ತಲೆಕೆಡಿಸಿಕೊಳ್ಳಲ್ಲ: ಕೆ.ಎಸ್.ಈಶ್ವರಪ್ಪ ಕಿಡಿ

ನಾನು ರಾಹುಲ್ ಗಾಂಧಿ ಯಾವ ಜಾತಿ ಎಂದು ನೇರವಾಗಿ ಕೇಳುತ್ತೇನೆ. ಯಾಕೆಂದರೆ ಜನ ಮಿಶ್ರತಳಿ, ಬೆರಕೆ ಎಂದೆಲ್ಲ ಕರೆಯುತ್ತಿದ್ದಾರೆ. ರಾಹುಲ್ ಗಾಂಧಿ ನಿಮ್ಮ ತಾಯಿ ಸೋನಿಯಾ ಗಾಂಧಿ, ನಿಮ್ಮಪ್ಪ ರಾಜೀವ್ ಗಾಂಧಿ ನಿಮ್ಮ ಅಜ್ಜ ಫಿರೋಜ್ ಖಾನ್ ಅವರ ಜಾತಿ ಯಾವುದು ಎಂದು ತಿರುಗೇಟು ನೀಡಿದರು. ರಾಹುಲ್‌ ಗಾಂಧಿ ಒಬಿಸಿ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ನರೇಂದ್ರ ಮೋದಿ ಅವರಿಗೆ ಅಪಮಾನ‌‌ ಮಾಡಿದ್ರೆ ನಿಮಗೆ ಇಡಿ ದೇಶ ಕ್ಷಮಿಸಲ್ಲ. ನಿಮಗೆ ಗೌರವ ಸಿಗಬೇಕು ಅಂದ್ರೆ ಕ್ಷಮೆ ಕೇಳಬೇಕು. ಮಾತನಾಡಬೇಕಾದರೆ ಮೈಮೇಲೆ ಎಚ್ಚರ ಇಟ್ಟುಕೊಂಡು ಮಾತನಾಡಬೇಕು ಎಂದು ಗುಡುಗಿದರು.

ನೋಟಿಸ್ ಬಂದರೂ ತಲೆಕೆಡಿಸಿಕೊಳ್ಳಲ್ಲ: ದೇಶದ ವಿಭಜನೆ ಮಾಡಿ ಎಂಬುದಾಗಿ ದ್ರೇಶದ್ರೋಹದ ಹೇಳಿಕೆ ಕೊಡುವವರ ವಿರುದ್ಧ ಕಾಂಗ್ರೆಸ್‌ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ರಾಷ್ಟ್ರದ್ರೋಹಿ ಹೇಳಿಕೆ ನೀಡುವವರಿಗೆ ಗುಂಡಿಟ್ಟು ಕೊಲ್ಲುವ ಕಾನೂನು ತರಬೇಕು ಎಂದು ಹೇಳಿದ ನನಗೆ ನೋಟಿಸ್ ಬಂದಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅನುದಾನ ಕೊಡಲಿಲ್ಲ ಎಂಬ ಕಾರಣಕ್ಕೆ ದೇಶ ವಿಭಜನೆ ಬಗ್ಗೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್‌ಗೆ ಈವರೆಗೆ ಯಾವುದೇ ನೋಟಿಸ್ ನೀಡಲಾಗಿಲ್ಲ. 

ರಾಷ್ಟ್ರದ್ರೋಹಿ ಹೇಳಿಕೆ: ಈಶ್ವರಪ್ಪನವರ ಮಾತಿಗೆ ಅಪಾರ್ಥ ಕಲ್ಪಿಸಲಾಗುತ್ತಿದೆ: ಬಿ.ಎಸ್‌.ಯಡಿಯೂರಪ್ಪ

ಅವರ ವಿರುದ್ಧ ಯಾವುದೇ ಕೇಸ್ ದಾಖಲಾಗಿಲ್ಲ. ಸುರೇಶ್ ಅವರಿಗೆ ಗುಂಡಿಕ್ಕಿ ಕೊಲ್ಲಿ ಎಂದು ನಾನೆಲ್ಲೂ ಹೇಳಿಲ್ಲ. ದೇಶದ್ರೋಹಿಗಳನ್ನು ಮಾತ್ರ ಗುಂಡಿಕ್ಕಿ ಕೊಲ್ಲಿ ಎಂದು ಹೇಳಿದ್ದೇನೆ. ದೇಶದ್ರೋಹದ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದು ಪ್ರಧಾನಿ ಮೋದಿಗೆ ನಾನು ಒತ್ತಾಯಿಸಿದ್ದೆ. ಅದಕ್ಕಾಗಿ ಈಗ ನೋಟಿಸ್‌ ಬಂದಿದೆ. ದೇಶದ ವಿಚಾರವಾಗಿ, ದೇಶಭಕ್ತಿಗಾಗಿ ಇಂತಹ ನೂರು ನೋಟಿಸ್ ಬಂದರೂ ನಾನೂ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಎಲ್ಲ ಕೇಸ್‌ಗಳಲ್ಲೂ ಕ್ಲೀನ್ ಚಿಟ್‌ ಸಿಕ್ಕಿದೆ. ಇದರಲ್ಲಿಯೂ ಸಿಗುವ ವಿಶ್ವಾಸವಿದೆ ಎಂದರು.

click me!