ಡಿಕೆಶಿ ಸಿಬಿಐ ಕೇಸ್ ವಾಪಸ್, ಇವರೆಲ್ಲಾ ಸಂವಿಧಾನ ಉಳಿಸುವ ಕಾನೂನು ರಕ್ಷಕರಾ?: ಎಚ್‌ಡಿಕೆ

By Kannadaprabha NewsFirst Published Nov 25, 2023, 1:00 AM IST
Highlights

ಕಾಂಗ್ರೆಸ್ ಸರ್ಕಾರವು ಡಿ.ಕೆ.ಶಿವಕುಮಾರ್ ಮೇಲೆ ಇದ್ದ ಪ್ರಕರಣ ವಾಪಸ್ ಪಡೆದಿರುವುದನ್ನು ನೋಡಿದರೇ ಇವರೆಲ್ಲಾ ಸಂವಿಧಾನ ಉಳಿಸುವ ಕಾನೂನು ರಕ್ಷಕರಾ..? ಎನ್ನುವ ಅನುಮಾನ ಮೂಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು. 

ಹಾಸನ (ನ.25): ಕಾಂಗ್ರೆಸ್ ಸರ್ಕಾರವು ಡಿ.ಕೆ. ಶಿವಕುಮಾರ್ ಮೇಲೆ ಇದ್ದ ಪ್ರಕರಣ ವಾಪಸ್ ಪಡೆದಿರುವುದನ್ನು ನೋಡಿದರೇ ಇವರೆಲ್ಲಾ ಸಂವಿಧಾನ ಉಳಿಸುವ ಕಾನೂನು ರಕ್ಷಕರಾ..? ಎನ್ನುವ ಅನುಮಾನ ಮೂಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು. ನಗರದ ರಿಂಗ್ ರಸ್ತೆ, ಜಯನಗರ ಬಳಿ ಶುಕ್ರವಾರ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡುತ್ತಾ, ಈ ಸರ್ಕಾರಕ್ಕೆ ಕನಿಷ್ಟ ತಿಳುವಳಿಕೆ ಅನ್ನೋದು ಇದ್ದಿದ್ದರೆ ಈ ರೀತಿ ನಡೆದುಕೊಳ್ಳುತ್ತಿರಲಿಲ್ಲ. ಇವರೆಲ್ಲಾ ಸಂವಿಧಾನವನ್ನ ಉಳಿಸುತ್ತಾರಾ..? ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನ ಗಮನಿಸುತ್ತಿದ್ದೇನೆ. 

ಹಲವಾರು ಬಾರಿ ಹೇಳಿದ್ದು, ಚುನಾವಣೆಯ ಸಂದರ್ಭದಲ್ಲೂ ಸಂವಿಧಾನದ ವ್ಯವಸ್ಥೆ ಉಳಿಯಬೇಕು ಎಂದಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಬೇಕು ಅನ್ನೋದನ್ನ ಪದೇ ಪದೇ ಹೇಳಿದ್ದನ್ನ ಗಮನಿಸಿದ್ದೇನೆ. ಇವತ್ತಿನ ಅವರ ತೀರ್ಮಾನ ಸಂವಿಧಾನವನ್ನು ಎಷ್ಟರ ಮಟ್ಟಿಗೆ ಉಳಿಸುತ್ತಾರೆ ಮತ್ತು ದೇಶದ ಕಾನೂನಿನ ವ್ಯವಸ್ಥೆಗಳ ಬಗ್ಗೆ ಎಷ್ಟು ಗೌರವ ಇಟ್ಟುಕೊಂಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಇಡೀ ಕ್ಯಾಬಿನೆಟ್ ಶಿವಕುಮಾರ್ ಅವರ ಪಾದದಡಿ ಇದೆ ಎಂದ ಅವರು, ಈ ದೇಶದ ಕಾನೂನು ವ್ಯವಸ್ಥೆಯನ್ನು ಅವರ ಪಾದದಡಿ ತೆಗೆದುಕೊಂಡು ಹೋಗೋ ಕೆಲಸ ಮಾಡಿದ್ದಾರೆ. 

Latest Videos

ಸಮಾಜ ಒಡೆಯುವುದು ಕಾಂಗ್ರೆಸ್ ಸರ್ಕಾರದ ಉದ್ದೇಶ: ಎಚ್.ಡಿ.ಕುಮಾರಸ್ವಾಮಿ

ಯಾವುದಾದರೂ ಒಂದು ಉತ್ತಮವಾದ ಕೆಲಸ ಮಾಡುವುದಕ್ಕಾಗಿ ಈ ರೀತಿಯ ತೀರ್ಮಾನ ಮಾಡಿದ್ದರೆ ಅಭಿನಂದಿಸಬಹುದಾಗಿತ್ತು. ಇಲ್ಲ ಯಾವುದಾದರೂ ದ್ವೇಷಕ್ಕಾಗಿ ಹಿಂದೆ ಇರೋ ಸರ್ಕಾರದಲ್ಲಾಗಿರೋ ತೀರ್ಮಾನವೇ ಇದು. ಹಿಂದೆ ಇದ್ದ ಸರ್ಕಾರದ ತನಿಖಾ ಸಂಸ್ಥೆಗಳು ತನಿಖೆಯನ್ನು ಮುಂದುವರೆಸೋ ನಿಟ್ಟಿನಲ್ಲಿ ಅವತ್ತಿನ ಸರ್ಕಾರದ ಅನುಮತಿಯನ್ನ ಕೋರಿದ್ದರು. ಆ ಸಂದರ್ಭದಲ್ಲಿ ತನಿಖೆಯ ವ್ಯವಸ್ಥೆಯಲ್ಲಿರುವ ಕೆಲವು ಸೆಕ್ಷನ್‌ಗಳ ಆಧಾರದ ಮೇಲೆ ಅವತ್ತಿನ ಸರ್ಕಾರ ತೀರ್ಮಾನವನ್ನ ಕೊಟ್ಟರು. ಈಗಾಗಲೇ ಈ ತೀರ್ಮಾನದ ವಿರುದ್ಧ ಈಗಿರೋ ಡಿಸಿಎಂ ಆಗ ಶಾಸಕರು. ಅವರು ಶಾಸಕರಿದ್ದಾಗ ಡಾಕ್ಯುಮೆಂಟ್ ಕೇಳಿ, ಶಾಸಕರು ಲೆಟರ್ ಹೆಡ್ ನಲ್ಲಿ ಪತ್ರ ಬರೆದಿರೋದೆಲ್ಲಾ ಇದೆ ಎಂದರು.

ಅವರು ರಾಜ್ಯದ ಜನತೆಯ ಪರವಾಗಿ ಕೆಲಸ ಮಾಡೋದಕ್ಕಿಂತ ಹೆಚ್ಚಾಗಿ ಅವರ ವೈಯಕ್ತಿಕವಾದ ಈ ಸಮಸ್ಯೆಗಳಿದೆಯಲ್ಲಾ ಅದಕ್ಕೇ ಉಪಯೋಗ ಮಾಡಿರೋದು ಜಾಸ್ತಿ ಎಂದು ಕುಟುಕಿದರು. ಆ ಲೆಟರ್ ಹೆಡ್‌ಗಳನ್ನ ಮೈನಿಂಗ್ ಕೆಲಸ ಮಾಡೋದಕ್ಕೆ, ಗ್ಯಾನೈಟ್ ಕೆಲಸ ಮಾಡೋದಕ್ಕೆ, ಕಾನೂನು ಮೀರಿ ಮಾಡಿರೋ ಸಂಪಾದನೆಗಳನ್ನ ರಕ್ಷಿಸಿಕೊಳ್ಳೋದಕ್ಕೆ ಯಾವ್ಯಾವ ರೀತಿ ಆ ಸ್ಥಾನಮಾನಗಳನ್ನ ಉಪಯೋಗಿಸಿಕೊಂಡಿದ್ದಾರೆ. ಇದನ್ನೆಲ್ಲಾ ಈಗ ಚರ್ಚೆ ಮಾಡೋದಕ್ಕೆ ಹೋಗಲ್ಲ. ಈಗಾಗಲೇ ಹಲವಾರು ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪುಗಳಿವೆ. ಈ ರೀತಿ ತನಿಖೆಗಳಿದ್ದಾಗ, ಇದಕ್ಕೆ ಕ್ಯಾಬಿನೆಟ್ ನಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. 

ಎಚ್‌ಡಿಕೆ ಹೇಳಿದಂತೆ ಕೀಳುಮಟ್ಟಕ್ಕೆ ಇಳಿದಿದ್ರೆ ರಾಜಕೀಯ ನಿವೃತ್ತಿ: ಡಿ.ಕೆ.ಶಿವಕುಮಾರ್‌

ಸಿದ್ದರಾಮಯ್ಯನವರು ಪಾಪ ಹಲವಾರು ವಕೀಲ ವೃತ್ತಿ ಮಾಡೋ ಯುವಕರಿಗೆ ಉಪನ್ಯಾಸ ಮಾಡಿರೋ ಉಪನ್ಯಾಸಕರು ಅವರು. ಅವರ ಕ್ಯಾಬಿನೆಟ್‌ನಲ್ಲಿ ಇಂತಹ ಒಂದು ತೀರ್ಮಾನ ಮಾಡಿದ್ದಾರೆ. ಬಹಳ ಮೇಧಾವಿಗಳಿದ್ದಾರೆ ಅವರು. ಈ ತೀರ್ಮಾನ ಮಾಡಿರುವ ಅವರು ಎಷ್ಟರ ಮಟ್ಟಿಗೆ ಕಾನೂನು ರಕ್ಷಕರು? ಮುಂದೆ ಇದು ಏನೇನ್ ಆಗುತ್ತೆ ನೋಡೋಣ ಎಂದ ವ್ಯಂಗ್ಯವಾಡಿದರು. ಇದು ಹೆಚ್ಚು ಕಡಿಮೆ ೧೦ ವರ್ಷಗಳು ಕಳೆದಿದೆ. ಹಳೆ ವರದಿ ಇಟ್ಟುಕೊಂಡು ಏನು ಮಾಡುತ್ತೀರಿ ಬಹಳ ಹಳೆಯಾದಗಿದೆ ಎಂದು ಹೇಳಿದರು. ಇದೆ ವೇಳೆ ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್, ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್, ಜಿಲ್ಲಾ ಮಾಧ್ಯಮ ವಕ್ತಾರ ಹೊಂಗೆರೆ ರಘು, ಇತರರು ಉಪಸ್ಥಿತರಿದ್ದರು.

click me!