ತಾಲೂಕಿನ ಜಾವಗಲ್ ಹೋಬಳಿಯ ಕರಗುಂದ ಗ್ರಾಮ ಪಂಚಾಯಿತಿಯ ವಡೇರಹಳ್ಳಿ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಅರಸೀಕೆರೆ (ನ.09): ತಾಲೂಕಿನ ಜಾವಗಲ್ ಹೋಬಳಿಯ ಕರಗುಂದ ಗ್ರಾಮ ಪಂಚಾಯಿತಿಯ ವಡೇರಹಳ್ಳಿ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಬರ ಅಧ್ಯಯನ ನಡೆಸಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ತಮ್ಮ ತಂಡದೊಂದಿಗೆ ತಾಲೂಕಿನ ಬರ ಅಧ್ಯಯನ ಪ್ರವಾಸ ನಡೆಸಿದ ಅವರು ರೈತರ ಹೊಲಗಳಿಗೆ ತೆರಳಿ ಬೆಳೆ ಹಾನಿ ಪರಿಶೀಲಿಸಿ ಮಾತನಾಡಿ, ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ರಾಜ್ಯ ಸರ್ಕಾರ ತಮ್ಮ ಕಚ್ಚಾಟವನ್ನು ಮುಂದು ಮಾಡಿ ರೈತರನ್ನು ಮರೆತ್ತಿದ್ದಾರೆ.
ಮೊನ್ನೆ ತಾನೆ ಕೇಂದ್ರ ಬರ ವೀಕ್ಷಣೆ ತಂಡ ರಾಜ್ಯದಲ್ಲಿ ಪ್ರವಾಸ ಮಾಡಿದರು. ಅವರಿಗೆ ಸರಿಯಾದ ಮಾಹಿತಿ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು. ರಾಜಕಾರಣಿಗಳು ಎಲ್ಲ ಸಂದರ್ಭಗಳಲ್ಲಿ ರಾಜಕೀಯ ದೊಂಬರಾಟ ಆಡುತ್ತಾರೆ. ಯಾವುದೇ ಸಮಸ್ಯೆಗಳು ಎದುರಾದರೂ ತಮ್ಮ ರಾಜಕೀಯ ಲಾಭಕ್ಕೆ ಬಳಸುತ್ತಾರೆ. ಆದರೆ ನಮ್ಮ ಬರ ಪರಿಹಾರ ತಂಡ ಬಂದಿರುವುದು ಲಾಭಕ್ಕೂ ಅಲ್ಲ ಪ್ರಚಾರಕ್ಕೆ ಅಲ್ಲ ರೈತರ ಸಮಸ್ಯೆಗಳನ್ನು ಅರಿತು ಎಲ್ಲಿಗೆ ತಲುಪಿಸಬೇಕು ಅಲ್ಲಿಗೆ ತಲುಪಿಸುವ ಕೆಲಸವನ್ನು ಮಾಡುತ್ತದೆ ಎಂದರು.
undefined
ಸಿದ್ಧರಾಮಯ್ಯಗೆ ವೇದಿಕೆಗಳಲ್ಲಿ ಮಾತ್ರ ರೈತರ ಬಗ್ಗೆ ಕನಿಕರ: ಡಿ.ವಿ.ಸದಾನಂದ ಗೌಡ ಆರೋಪ
ಸರ್ಕಾರದಿಂದ ಬೆಳೆ ಹಾನಿ ಕೊಡಿಸುವ ಭರವಸೆ ನೀಡಿದರು. ತಾಲೂಕಿನ ಕಲ್ಯಾಡಿ ಇನ್ನಿತರ ಗ್ರಾಮಗಳಲ್ಲಿ ರೈತರ ಜಮೀನಿಗೆ ತೆರಳಿ, ಬೆಳೆ ಸ್ಥಿತಿ ಅವಲೋಕಿಸಿದರು. ಅಧ್ಯಯನ ಮಾಡಿ ನಾವು ಇದೇ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ಪರಿಹಾರಕ್ಕೆ ಮನವಿ ಸಲ್ಲಿಸುತ್ತೇವೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಸಹ ಅವರಿಗೆ ವರದಿಯನ್ನು ಸಲ್ಲಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು. ಬರ ನಿರ್ವಹಣೆ ಮಾಡುವಲ್ಲಿ, ರೈತರ ಕಷ್ಟಕ್ಕೆ ಸ್ಪಂದಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದಲ್ಲಿ ಬೆಳೆ ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಸಾಲ ಮಾಡಿದ್ದ ರೈತ ತಲೆಮೇಲೆ ಕೈ ಹೊತ್ತಿದ್ದಾರೆ.
ಈ ಭಾಗದಲ್ಲಿ ಮೆಕ್ಕೆಜೋಳ ರಾಗಿ, ತೊಗರಿ ಇನ್ನಿತರ ಬೆಳೆಗಳು ಸಂಪೂರ್ಣವಾಗಿ ಹಾಳಾಗಿದ್ದು ರೈತ ಬೆಳೆದರೂ ಬೆಳೆ ಕಳೆದುಕೊಂಡು ಜಾನುವಾರುಗಳಿಗೆ ಮೇವು ಇಲ್ಲದೆ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಆದರೆ ಇಲ್ಲಿವರೆಗೆ ರಾಜ್ಯದ ಯಾವುದೇ ಮಂತ್ರಿಗಳು ರೈತರ ಜಮೀನಿಗೆ ಬಂದು ಮಾಡಿಲ್ಲ ಬರ ಪರಿಹಾರ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್, ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಹಾಸನ ಮಾಜಿ ಶಾಸಕ ಪ್ರೀತಂ ಜೆ.ಗೌಡ, ಅರಸೀಕೆರೆ ಬಿಜೆಪಿ ಮುಖಂಡರಾದ ಜಿ.ವಿ.ಟಿ.ಬಸವರಾಜು, ಅಣ್ಣಾಯ್ಕನಳ್ಳಿ ವಿಜಯಕುಮಾರ್, ಕಲ್ಯಾಡಿ ಬಸವರಾಜು, ಅಡಗೂರು ಆನಂದ್ ಇದ್ದರು.
ಅಳಲು ತೋಡಿಕೊಂಡ ರೈತರು: ಬರದಿಂದ ತತ್ತರಿಸಿರುವ ರೈತರ ಸಮಸ್ಯೆಗಳನ್ನು ತಿಳಿಯಲು ರಾಜ್ಯಾದ್ಯಂತ ಡಿ.ವಿ.ಸದಾನಂದಗೌಡರ ತಂಡ ಪ್ರವಾಸ ಮಾಡುತ್ತಿದೆ. ಇಂದು ತಾಲೂಕಿನ ವಡೇರಹಳ್ಳಿಯಲ್ಲಿ ನೂರಾರು ರೈತರು ಸೇರಿದ್ದರು. ಮಳೆ ಇಲ್ಲದೆ ಬೆಳೆ ಬಂದಿಲ್ಲ ಹಸುಗಳಿಗೆ ಹಾಕಲು ಮೇವಿಗೂ ಕೂಡ ಬರ ಬಂದಿದೆ. ಅವುಗಳಿಗೆ ನೀರು ಹಾಕಲು ಹಗಲು ಹೊತ್ತಿನಲ್ಲಿ ಕರೆಂಟ್ ಇರಲ್ಲ. ಮಧ್ಯರಾತ್ರಿಯಲ್ಲಿ ಕೊಡುತ್ತಾರೆ, ಇಲ್ಲಿ ಆನೆ ಚಿರತೆ ಕರಡಿ ಹಾವಳಿ ಇದೆ, ಪ್ರಾಣ ಭಯದಲ್ಲಿ ನಾವು ಕೆಲಸ ಮಾಡಬೇಕಾದಂತ ಸ್ಥಿತಿ ಇದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಎಚ್.ಡಿ.ರೇವಣ್ಣ ಕಂಡರೆ ಮೊದಲಿನಿಂದಲೂ ಪ್ರೀತಿ: ಸಿಎಂ ಸಿದ್ದರಾಮಯ್ಯ
70 ರಷ್ಟು ಮಳೆ ಕಡಿಮೆ: ಹವಾಮಾನ ತಜ್ಞರ ಪ್ರಕಾರ ಜೂನ್ ಜುಲೈನಲ್ಲಿ ಹಾಸನ ಜಿಲ್ಲೆಯಲ್ಲಿ ಮಳೆಯಾಗಿಲ್ಲ. ಆಗಸ್ಟ್ ತಿಂಗಳಲ್ಲಿ ಆಗಬೇಕಾಗಿದ್ದ ಮಳೆಯಲ್ಲಿ ಶೇಕಡ 70 ರಷ್ಟು ಮಳೆ ಕಡಿಮೆ ಬಂದಿದೆ. ಇದು 120 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಕಡಿಮೆ ಎಂದು ಅವರು ವರದಿ ನೀಡಿದ್ದಾರೆ. ಹೊಲದಲ್ಲಿ ಬೆವರು ಸುರಿಸಿ ದೇಶಕ್ಕೆ ಅನ್ನನೀಡುವ ಅನ್ನದಾತರಿಗೆ ಇಂದು ಅನ್ನವಿಲ್ಲದ ಪರಿಸ್ಥಿತಿ ಎದುರಾಗಿದೆ. ರೈತರ ನೆರವಿಗೆ ಬರಬೇಕಾದ ಸರ್ಕಾರ ಪುಕ್ಕಟೆ ಯೋಜನೆಯ ಗುಂಗಿನಲ್ಲಿ ಎಲ್ಲವನ್ನು ಮರೆತಿದೆ. ಹೆಣ್ಣು ಮಕ್ಕಳು ಬಗ್ಗಿನಲ್ಲಿ ಓಡಾಡುತ್ತಿರುವುದನ್ನೇ ದೊಡ್ಡ ಸಂಗತಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಛೇಡಿಸಿದರು.