ದೇಶದ ಹಿತ ಹಾಗೂ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಮೂರನೆಯ ಬಾರಿಗೆ ಪ್ರಧಾನಿಯಾಗುವುದು ಅತ್ಯಗತ್ಯ. ಅವರ ಕೈ ಬಲಪಡಿಸಲು ಪ್ರಹ್ಲಾದ ಜೋಶಿ ಅವರನ್ನು ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸುವುದು ನಮ್ಮೆಲ್ಲರ ಹೊಣೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ (ಮಾ.23): ದೇಶದ ಹಿತ ಹಾಗೂ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಮೂರನೆಯ ಬಾರಿಗೆ ಪ್ರಧಾನಿಯಾಗುವುದು ಅತ್ಯಗತ್ಯ. ಅವರ ಕೈ ಬಲಪಡಿಸಲು ಪ್ರಹ್ಲಾದ ಜೋಶಿ ಅವರನ್ನು ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲಿಸುವುದು ನಮ್ಮೆಲ್ಲರ ಹೊಣೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಖಾಸಗಿ ಹೊಟೇಲ್‌ನಲ್ಲಿ ನಡೆದ ಶಿಗ್ಗಾಂವಿ-ಸವಣೂರು ಕ್ಷೇತ್ರದ ಬಿಜೆಪಿ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
ಅದಕ್ಕಾಗಿ ಇಂದಿನಿಂದಲೇ ಪ್ರತಿಗ್ರಾಮ, ಕೇರಿ, ಬೂತ್‌ಗಳಲ್ಲಿ ಮತಬೇಟೆ ಕಾರ್ಯ ಆರಂಭಿಸಬೇಕು ಎಂದ ಅವರು, 10 ವರ್ಷಗಳಲ್ಲಿ ಪ್ರಧಾನಿ ಮೋದಿ ದೇಶದಲ್ಲಿ ಅಗಾಧ ಬದಲಾವಣೆ ತಂದಿದ್ದಾರೆ. ತಾಂತ್ರಿಕತೆ, ಆರ್ಥಿಕತೆ, ಉದ್ಯಮ, ಉದ್ಯೋಗ ದೃಷ್ಟಿಯಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಸೂರು ನೀಡಬೇಕು ಎನ್ನುವ ಅವರ ಕನಸು ನನಸಾಗಲು ಮತ್ತೊಮ್ಮೆ ಪ್ರಧಾನಿ ಆಗುವುದು ಅನಿವಾರ್ಯವಿದೆ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಜನರ ಜೀವನ ಮಟ್ಟಸುಧಾರಣೆಯಾಗಿದೆ. 25 ಕೋಟಿಗೂ ಹೆಚ್ಚು ಜನ ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಅದಕ್ಕಾಗಿ ನೀವು ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಮತದಾನ ದೂರವಿದೆ ಎಂದು ನಿರ್ಲಕ್ಷ್ಯ ಮಾಡದೇ ಇಂದಿನಿಂದಲೇ ಬೂತ್ ಮಟ್ಟದಲ್ಲಿ ಎಲ್ಲ ಸಮಾಜದ ಜನರನ್ನು ಸಂಪರ್ಕಿಸಿ ಡೇಟಾ ಸಂಗ್ರಹಿಸಿ ಕಾಲ್ ಸೆಂಟರ್‌ಗೆ ಅಪ್ಲೋಡ್ ಮಾಡಿ, ನಾವು ಕಾಲ್ ಸೆಂಟರ್‌ನಿಂದ ಅವರಿಗೆ ಮನವಿ ಮಾಡುವ ಕೆಲಸ ಮಾಡುತ್ತೇವೆ ಎಂದು ಪಕ್ಷದ ಪ್ರಮುಖರಿಗೆ ತಿಳಿಸಿದರು.
Rameshawaram Cafe Blast Case: ಚೆನ್ನೈ ಅಂಗಡಿಯಲ್ಲಿ ಕ್ಯಾಪ್ ಖರೀದಿಸಿದ್ದ ಕೆಫೆ ಬಾಂಬರ್
ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ಶಶಿಧರ ಯಲಿಗಾರ, ಡಾ. ಶೋಭಾ ನಿಸ್ಸೀಮಗೌಡ್ರ, ಎಂ.ಎನ್. ವೆಂಕೋಜಿ, ಶಿವಾನಂದ ಮ್ಯಾಗೇರಿ, ಸುಭಾಸ ಚವ್ಹಾಣ, ಫಕ್ಕೀರಪ್ಪ ಕುಂದೂರು ಮಾತನಾಡಿದರು. ಸಭೆಯಲ್ಲಿ ಶಿವಪ್ರಸಾದ ಸುರಗಿಮಠ, ಗಂಗಾಧರ ಬಾಣದ, ದೇವಣ್ಣ ಚಾಕಲಬ್ಬಿ, ಜಿಪಂ ಮಾಜಿ ಅಧ್ಯಕ್ಷ ಮಲ್ಲೇಶಪ್ಪ ಹರಿಜನ, ಡಾ.ಶೋಭಾ ನಿಸ್ಸಿಮಗೌಡರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.