'ಅಸ್ಸಾಂನ ಬಿಜೆಪಿ ಸಿಎಂ ಅಭ್ಯರ್ಥಿಯಾಗ್ತಾರೆ ಮಾಜಿ CJI ಗೊಗೋಯ್!'

By Suvarna NewsFirst Published Aug 23, 2020, 8:48 AM IST
Highlights

ಅಸ್ಸಾಂ ಮುಖ್ಯಮಂತ್ರಿಯಾಗ್ತಾರಾ ಮಾಜಿ ಸಿಜೆಐ ರಂಜನ್ ಗೊಗೋಯ್| ಮುಂದಿನ ವರ್ಷ ಅಸ್ಸಾಂನಲ್ಲಿ ನಡೆಯಲಿದೆ ವಿಧಾನಸಭಾ ಚುನಾವಣೆ| ಮಾಜಿ ಸಿಎಂ ತರುಣ್ ಗೊಗೋಯ್ ಮಾತು

ಡಿಸ್ಪುರ್(ಆ.23): ಮಾಜಿ ಚೀಫ್‌ ಜಸ್ಟೀಸ್ ರಂಜನ್ ಗೊಗೋಯ್ ಅಸ್ಸಾಂನ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಬಹುದುದೆಂದು ಇಲ್ಲಿನ ಮಾಜಿ ಮುಖ್ಯಮಂತ್ರಿ ಹಾಗೂ ದಿಗ್ಗಜ ಕಾಂಗ್ರೆಸ್ ನಾಯಕ ತರುಣ್ ಗೊಗೋಯ್ ಹೇಳಿದ್ದಾರೆ. ಅಸ್ಸಾಂನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ಇದೆ. 

ಹಲವು ಪ್ರಮುಖ ಕೇಸ್ ಇತ್ಯರ್ಥಗೊಳಿಸಿದ್ದ ರಂಜನ್ ಗೊಗೋಯ್​ ರಾಜ್ಯಸಭೆಗೆ ಎಂಟ್ರಿ..!

ಈ ಸಂಬಂಧ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ತರುಣ್ ಗೊಗೋಯ್ 'ರಂಜನ್ ಗೊಗೋಯ್ ಹೆಸರು ಬಿಜೆಪಿಯ ಮುಖ್ಯಮಮತ್ರಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಇದೆ ಎಂಬ ಮಾಹಿತಿ ನನಗೆ ಸಿಕ್ಕಿದೆ. ಅವರನ್ನು ಅಸ್ಸಾಂನ ಮುಂದಿನ ಮುಖ್ಯಮಂತ್ರಿಯಾಗಿಯಾಗಿ ಬಿಂಬಿಸಲಾಗುತ್ತದೆ ಎಂದು ನನಗನಿಸುತ್ತದೆ' ಎಂದಿದ್ದಾರೆ. ಇನ್ನು ಮಾಜಿ CJI ರಾಜ್ಯಸಭೆಗೆ ಪ್ರವೇಶಿಸಲು ತಯಾರಿದ್ದಾರೆಂದರೆ ಅವರು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ತಯಾರಾಗುತ್ತಾರೆಂಬುವುದು ನನ್ನ ಅಭಿಪ್ರಾಯ ಎಂದಿದ್ದಾರೆ.

ನಿವೃತ್ತರಾದ ಮೂರೇ ದಿನದಲ್ಲಿ ಸರ್ಕಾರಿ ಬಂಗಲೆಗೆ ಗೊಗೊಯ್ ಗುಡ್ ಬೈ!

ಇಷ್ಟೇ ಅಲ್ಲದೇ 'ಎಲ್ಲವೂ ರಾಜಕೀಯ. ಅಯೋಧ್ಯೆ ರಾಮ ಮಂದಿರ ಪ್ರಕರಣದ ತೀರ್ಪಿನಿಂದ ಬಿಜೆಪಿಗೆ ಗೊಗೋಯ್‌ ವಿಚಾರದಲ್ಲಿ ಖುಷಿಯಾಗಿತ್ತು. ಹೀಗಿರುವಾಗಲೇ ರಾಜ್ಯಸಭೆ  ಪ್ರವೇಶಿಸಿ ಅವರು ನಿಧಾನವಾಗಿ ರಾಜಕೀಯಕ್ಕೆ ಪ್ರವೇಶಿಸಿದರು. ಅವರು ರಾಜ್ಯಸಭೆ ಸದಸ್ಯತ್ವವನ್ನು ಯಾಕೆ ನಿರಾಕರಿಸಲಿಲ್ಲ? ಅವರು ಸಲೀಸಾಗಿ ಮಾನವ ಹಕ್ಕುಗಳ ಆಯೋಗ ಅಥವಾ ಇತರ ಅಧಿಕಾರಿ ಸಂಘಟನೆಯ ಚೇರ್ಮನ್ ಆಗಬಹುದಿತ್ತು. ಆದರೆ ಅವರಿಗೆ ರಾಜಕೀಯದತ್ತ ಒಲವಿದೆ. ಹೀಗಾಗೇ ಅವರು ರಾಜ್ಯಸಭೆ ಸದಸ್ಯತ್ವ ಒಪ್ಪಿಕೊಂಡರು ಎಂದಿದ್ದಾರೆ.

click me!