ಪ್ರಜಾಪ್ರಭುತ್ವದಲ್ಲಿ ಮಾತನಾಡಲು ಎಲ್ಲರಿಗೂ ಸ್ವಾತಂತ್ರ್ಯ ಇದೆ: ಸಚಿವ ಕೃಷ್ಣ ಬೈರೇಗೌಡ

Kannadaprabha News   | Kannada Prabha
Published : Jun 27, 2025, 08:04 PM IST
Krishna byregowda

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತಾಡಲು ಸ್ವಾತಂತ್ರವಿದೆ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೆಯೋ ಗೊತ್ತಿಲ್ಲ. ಇರುವಷ್ಟು ದಿನ ಜನರಿಗೆ ಒಳ್ಳೆಯದಾಗುವ ಕೆಲಸ ಮಾಡೋಣ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಚಿಕ್ಕಮಗಳೂರು (ಜೂ.27): ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮಾತಾಡಲು ಸ್ವಾತಂತ್ರವಿದೆ. ಎಷ್ಟು ದಿನ ಅಧಿಕಾರದಲ್ಲಿ ಇರುತ್ತೇವೆಯೋ ಗೊತ್ತಿಲ್ಲ. ಇರುವಷ್ಟು ದಿನ ಜನರಿಗೆ ಒಳ್ಳೆಯದಾಗುವ ಕೆಲಸ ಮಾಡೋಣ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು, ಈ ವೇಳೆ ಸೆಪ್ಟೆಂಬರ್ ಬಳಿಕ ಸರ್ಕಾರದಲ್ಲಿ ಬದಲಾವಣೆ ಆಗಲಿದೆ ಎಂಬ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಕೆ.ಎನ್‌.ರಾಜಣ್ಣ ಅವರು ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಿನಿಮಾ ರೀತಿ ಸ್ಕ್ರಿಪ್ಟ್ ಇರುವುದಿಲ್ಲ. ಇಲ್ಲಿ ಏಳು-ಬೀಳು, ಎಡರು-ತೊಡರು ಇದ್ದೇ ಇರುತ್ತದೆ. ಅದರ ಮಧ್ಯೆಯೂ ಕೆಲಸ ಮಾಡುವುದಕ್ಕಾಗಿ ಜನ ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ ಎಂದರು. ಯಾವ ಬದಲಾವಣೆ ಆಗುತ್ತದೆಯೋ ನನಗೆ ಗೊತ್ತಿಲ್ಲ. ಆದರೆ, ಕಂದಾಯ ಇಲಾಖೆಯಲ್ಲಿ ಯಾವ ಬದಲಾವಣೆ ಮಾಡಬೇಕು ಎನ್ನುವುದು ಗೊತ್ತಿದೆ. ಇಲ್ಲಿ ಏನೇನು ಬದಲಾವಣೆ ಮಾಡಬೇಕು ಎಂದು ಸಿಎಂ ಹಾಗೂ ಪಕ್ಷ ಹೇಳಿದೆ ಎಂದು ತಿಳಿಸಿದರು.

ಕಂದಾಯ ಗ್ರಾಮಗಳ ರಚನೆಗೆ ಪ್ರಮುಖ ಆದ್ಯತೆ: ದಾಖಲೆ ಇಲ್ಲದೇ ಜನವಸತಿ ಪ್ರದೇಶದಲ್ಲಿ ವಾಸಿಸುವವರಿಗೆ ಗ್ರಾಮಗಳನ್ನು ರಚಿಸುವ ಮೂಲಕ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಕೆಲಸವನ್ನು ತ್ವರಿಗತಗಿತಯಲ್ಲಿ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಸೂಚಿಸಿದ್ದಾರೆ. ನಗರದ ಜಿಲ್ಲಾಡಳಿತ ಭವನದಲ್ಲಿ ಕಂದಾಯ ಹಾಗೂ ಭೂ ಮಾಪನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕರ್ನಾಟಕ ಭೂ ಕಂದಾಯ ಕಾಯ್ದೆಯನ್ವಯ ಜನವಸತಿ ಪ್ರದೇಶದಲ್ಲಿ ವಾಸಿಸುತ್ತಿದ್ದರೂ ವಾರಸುದಾರಿಕೆ ಇಲ್ಲದವರಿಗೆ ಗ್ರಾಮಗಳ ವಿಸ್ತರಣೆ, ಕಂದಾಯ ಗ್ರಾಮ, ಬಡಾವಣೆಯಾಗಿ ವಿಸ್ತರಿಸುವ ಮೂಲಕ ಮೂಲ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಕೆಲಸ ರಾಜ್ಯದಲ್ಲಿ ನಡೆಯುತ್ತಿದೆ ಎಂದರು.

ಕಂದಾಯ ಗ್ರಾಮಗಳ ರಚನೆ, ಹಕ್ಕುಪತ್ರ ವಿತರಣೆಯಲ್ಲಿ ವಿಳಂಬ ಸಲ್ಲದು. ಜೂನ್‌ನಿಂದಲೇ ಹಳೆ ಕಂದಾಯ ದಾಖಲೆಗಳು ಅಂಗೈನಲ್ಲಿ ಸಿಗಲಿವೆ. ದಾವಣಗೆರೆ ಜಿಲ್ಲೆಯಲ್ಲಿ 1836 ಹಕ್ಕುಪತ್ರಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಲ್ಲಿ 1784 ಇ-ಸ್ವತತಿಗೆ ಹೋಗಿವೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಈ ದಾಖಲೆ ನೋಂದಾಯಿಸಲು 1349 ಅರ್ಜಿಗಳನ್ನು ಕಳಿಸಲಾಗಿದೆ ಎಂದರು.

ಭೂ ದಾಖಲೆಗಳ ದುರಸ್ತಿಗೆ ಸೂಚನೆ: ದರಖಾಸ್ತು ಪೋಡಿ ಅಭಿಯಾನ ಚಾಲ್ತಿಯಲ್ಲಿದ್ದು ಅನುಬಂಧ-1 ರಲ್ಲಿ 331 ಪ್ರಕರಣಗಳಲ್ಲಿ 2002 ಬ್ಲಾಕ್‍ಗಳನ್ನು ದುರಸ್ಥಿಗೆ ಆಯ್ಕೆ ಮಾಡಿಕೊಂಡು, ಅದರಲ್ಲಿ 231 ಪ್ರಕರಣಗಳಲ್ಲಿ 1229 ಬ್ಲಾಕ್ ಅಳತೆ ಮಾಡಲಾಗಿದೆ. ಆದರೆ 62 ಪ್ರಕರಣಗಳಲ್ಲಿ 214 ಬ್ಲಾಕ್‍ ಮೇಲು ಸಹಿಯಾಗಿವೆ. ಇದರಲ್ಲಿ 40 ಪ್ರಕರಣಗಳಲ್ಲಿ 137 ಬ್ಲಾಕ್‍ಗಳಲ್ಲಿ ಮಾತ್ರ ಪಹಣಿ ಇಂಡೀಕರಣವಾಗಿದೆ. ಇನ್ನೂ 77 ಬ್ಲಾಕ್‍ ಇಂಡೀಕರಣಕ್ಕೆ ಬಾಕಿ ಇವೆ. 56 ಪ್ರಕರಣದಲ್ಲಿ 321 ಬ್ಲಾಕ್‍ ದುರಸ್ಥಿಗೆ ಬಾಕಿ ಇವೆ. 100 ಪ್ರಕರಣಗಳಲ್ಲಿ 773 ಬ್ಲಾಕ್‍ ಅಳತೆಗೆ ಬಾಕಿ ಇವೆ. ಭೂ ದಾಖಲೆಳು ಮತ್ತು ತಹಸೀಲ್ದಾರರು ಸರಿಯಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!