'ಇದು ಗೆಲುವಿನ ಆರಂಭ, ಮೂರು ವರ್ಷದಲ್ಲಿ ಇಡೀ ದಕ್ಷಿಣ ಭಾರತ ಕೇಸರಿಮಯ'

Published : Nov 25, 2020, 06:19 PM IST
'ಇದು ಗೆಲುವಿನ ಆರಂಭ, ಮೂರು ವರ್ಷದಲ್ಲಿ ಇಡೀ ದಕ್ಷಿಣ ಭಾರತ ಕೇಸರಿಮಯ'

ಸಾರಾಂಶ

ಹೈದರಾಬಾದ್ ನಲ್ಲಿ ತೇಜಸ್ವಿ ಸೂರ್ಯ ಸುತ್ತಾಟ/ ಮುಂದಿನ  2-3  ವರ್ಷದಲ್ಲಿ ದಕ್ಷಿಣ ಭಾರತ ಸಂಪೂರ್ಣ ಕೇಸರಿಮಯವಾಗಲಿದೆ/ ಕೆಸಿಆರ್ ಮತ್ತು ಓವೈಸಿ ವಿರುದ್ಧ ಗುಡುಗಿದ ಸೂರ್ಯ/ ನಮ್ಮ ಬದಲಾವಣೆ ಹೋರಾಟ ನಿರಂತರ

ಹೈದರಾಬಾದ್(ನ. 25) ಮುಂದಿನ  2-3  ವರ್ಷದಲ್ಲಿ ದಕ್ಷಿಣ ಭಾರತ ಸಂಪೂರ್ಣ ಕೇಸರಿಮಯವಾಗಲಿದೆ ಎಂದು ಬಿಜೆಪಿ ಯುವಮೋರ್ಚಾ  ಅಧ್ಯಕ್ಷ ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಹೈದರಾಬಾದ್ ನ ಮುಸ್ಸಿಪಲ್ ಕಾರ್ಪೋರೇಶನ್ ಗೆಲುವಿನೊಂದಿಗೆ ಬಿಜೆಪಿ ಅಭಿಯಾನ ಆರಂಭವಾಗಲಿದೆ.  ತಮಿಳು ನಾಡು ಮತ್ತು ಕೇರಳದಲ್ಲಿಯೂ ಜಯ ಸಿಗಲಿದೆ ಎಂದಿದ್ದಾರೆ.

ಹೈದರಾಬಾದ್ ನಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ಸೂರ್ಯ,  ಬದಲಾವಣೆಗಾಗಿ ನಮ್ಮ ಹೋರಾಟ ಎಂದು ಹೇಳಿದ್ದಾರೆ.

ಹೈದರಾಬಾದ್ ಹೆಸರನ್ನು ಬಸಲಿಸಿದ ತೇಜಸ್ವಿ; ಭಾಗ್ಯನಗರ

ಹೈದರಾಬಾದ್ ಮುನ್ಸಿಪಲ್ ಗೆಲುವು ಮುಂದಿನ ತೆಲಂಗಾಣ ವಿಧಾನಸಭೆ ಚುನಾವಣೆ ಗೆಲುವಿನ ವೇದಿಕೆಯಾಗಲಿದೆ.  ತೆಲಂಗಾಣದ ಚಂದ್ರಶೇಖರ್ ರಾವ್ ಅವರ ಟಿಆರ್ ಎಸ್  ಮತ್ತು ಓವೈಸಿಯ ಎಐಎಂಐಎಂ ಒಂದೆ ನಾಣ್ಯದ ಎರಡು ಮುಖಗಳು ಎಂದು ಟೀಕಿಸಿದರು.

ಕೆಸಿಆರ್ ಹೈದ್ರಾಬಾದನ್ನು ಟರ್ಕಿಯ ರಾಜಧಾನಿ ಇಸ್ತಾಂಬುಲ್ ಮಾಡಲು ಹೊರಟಿದ್ದಾರೆ.  ಇನ್ನೊಂದುಕಡೆ ಎಐಎಂಐಎಂ ಹೈದರಾಬಾದ್ ನ್ನು ಪಾಕಿಸ್ತಾನದ ಹೈದರಾಬಾದ್ ಮಾಡಲು ಹೊರಟಿದೆ. ಓವೈಸಿ ಜಿನ್ನಾರ ಮತ್ತೊಂದು ಅವತಾರ ಎಂದು ದಾಳಿ ಮಾಡಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ
ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ