ಸಿಬಿಐ ವಿಚಾರಣೆ ಅಂತ್ಯ: ವಡೋದರಾದತ್ತ ಡಿಕೆ ಶಿವಕುಮಾರ್...!

By Suvarna NewsFirst Published Nov 25, 2020, 6:14 PM IST
Highlights

ಆದಾಯಕ್ಕೂ ಮೀರಿ ಆಸ್ತಿಗಳಿಕೆ ಆರೋಪ ಸಂಬಂಧ ಸಿಬಿಐ ವಿಚಾರಣೆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ವಡೋದರಾದತ್ತ ಪ್ರಯಾಣ ಬೆಳೆಸಿದ್ದಾರೆ.

ಬೆಂಗಳೂರು, (ನ.25): ಆದಾಯಕ್ಕೂ ಮೀರಿ ಆಸ್ತಿಗಳಿಕೆ ಆರೋಪ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು (ಬುಧವಾರ) ಸಿಬಿಐ ವಿಚಾರಣೆಗೆ ಹಾಜರಾಗಿದ್ರು.

ಬೆಂಗಳೂರಿನ ಸಿಬಿಐ ಕಚೇರಿ ಹೋಗಿದ್ದ ಡಿಕೆ ಶಿವಕುಮಾರ್ ಅವರು ಒಂದೇ ಗಂಟೆ ಕಾಲ ವಿಚಾರಣೆ ಎದುರಿಸಿ ಹೊರ ಬಂದಿದ್ದು, ವಡೋದರಾದತ್ತ ಮುಖ ಮಾಡಿದ್ದಾರೆ.

ಸಿಬಿಐ ಕಚೇರಿಗೆ ತೆರಳುವ ಮುನ್ನ ಅಜ್ಜಯ್ಯನ ದರ್ಶನ ಪಡೆದ ಡಿಕೆಶಿ

ವಡೋದರಾದಲ್ಲಿ ನಡೆಯಲಿರುವ ಕಾಂಗ್ರೆಸ್  ನಾಯಕ ಅಹ್ಮದ್ ಪಟೇಲ್​ರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಹಾಗಾಗಿ ಹೋಗಲು ಅವಕಾಶ ಕೊಡಿ ಎಂದ ಸಿಬಿಐ ಅಧಿಕಾರಿಗಳಿಗೆ ಡಿಕೆಶಿ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸಿದ ಸಿಬಿಐ ಅಧಿಕಾರಿಗಳು ಡಿಕೆಶಿಯನ್ನು ಒಂದು ತಾಸು ಮಾತ್ರವೇ ವಿಚಾರಣೆ ನಡೆಸಿ ಕಳುಸಿದರು. ಇನ್ನು ಮತ್ತೆ ವಿಚಾರಣೆಗೆ ಬರಬೇಕೆಂದು ಹೇಳಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ವಡೋದರಾದಿಂದ ಗೋವಾಕ್ಕೆ
ಹೌದು...ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಹ್ಮದ್ ಪಟೇಲ್ ನಿಧನರಾಗಿದ್ದು, ಅವರ ಗುರುವಾರ ಅಂತ್ಯ ರಾಗಿದ್ದಾರೆ. ಅಹ್ಮದ್ ಪಟೇಲ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಬಳಿಕ ಅಲ್ಲಿಂದ ನೇರವಾಗಿ ಗೋವಾಗೆ ಪ್ರಯಾಣ ಬೆಳೆಸಲಿದ್ದಾರೆ.

ಗುರುವಾರ ಗೋವಾದಲ್ಲಿ ನಡೆಯಲಿರುವ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಗನ ಮದುವೆಯಲ್ಲಿ ಭಾಗಿಯಾಗಲಿದ್ದಾರೆ.

click me!