ಉದ್ಧವ್ ಸರ್ಕಾರಕ್ಕೆ ದೊಡ್ಡ ಮುಜುಗರ, ದೋಸ್ತಿಗಳ ವಿರುದ್ಧವೇ ಪವಾರ್ ಗುಟುರು!

By Suvarna News  |  First Published Sep 9, 2020, 5:34 PM IST

ನಟಿ ಕಂಗನಾ ಕಚೇರಿ ನೆಲಸಮ/ ಮಹಾಸರ್ಕಾರದ ಕ್ರಮ ಸರಿ ಇಲ್ಲ ಎಂದ ಶರದ್ ಪವಾರ್/  ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬರಲು ಶರದ್  ಪವಾರ್ ಮುಂಚೂಣಿಯಲ್ಲಿದ್ದವರು


ಮುಂಬೈ (ಸೆ. 09)   ಬಾಲಿವುಡ್ ನಟಿ ಕಂಗನಾ ರಾಣಾವತ್ ಸೇರಿದ್ದ ಕಟ್ಟಡದ ಒಂದು ಭಾಗವನ್ನು ಮಹಾರಾಷ್ಟ್ರ ಸರ್ಕಾರ ನೆಲಸಮ ಮಾಡಿದೆ. ಆದರೆ ಇದೇ ವಿಚಾರವನ್ನು ಎನ್‌ಸೊಪಿ ನಾಯುಕ ಶರದ್ ಪವಾರ್ ಪ್ರಶ್ನೆ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್ ಮತ್ತು ಎನ್ ಸಿಪಿ ಒಟ್ಟಾಗಿ ಸರ್ಕಾರ ರಚನೆ ಮಾಡಲು ಪವಾರ್ ಪಾತ್ರ ಬಹಳ ದೊಡ್ಡದು. ಇದೀಗ್ ಪವಾರ್ ಸಿಎಂ ಉದ್ಧವ್ ಠಾಕ್ರೆ ವಿರುದ್ಧವೇ ಮಾತನಾಡಿದ್ದಾರೆ. ಇನ್ನು ಮುಂದೆ ಇದು ಯಾಔ ರಾಜಕಾರಣದ ತಿರುವು ಪಡೆದುಕೊಳ್ಳುತ್ತದೆ ಎಂದುದನ್ನು ಕಾದು ನೋಡಬೇಕಿದೆ.

Tap to resize

Latest Videos

undefined

ಕಂಗನಾಳ ಕಚೇರಿ ಮೇಲೆ ಬುಲ್ಡೋಜರ್ ಹತ್ತಿಸಿದ ಸರ್ಕಾರ

ಕಂಗನಾ ರಣಾವತ್ ಕಟ್ಟಡದವನ್ನು ಮಾತ್ರ ಯಾಕೆ ನೆಲಸಮ ಮಾಡಲಾಗಿದೆ? ಮುಂಬೈನಲ್ಲಿ ಅಕ್ರಮ ಕಟ್ಟಡಗಳು ಸಾಕಷ್ಟಿದ್ದು ಎಲ್ಲದರ ಮೇಲೆ ಕ್ರಮ ಯಾಕಿಲ್ಲ? ಜನರು ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಮಾಡಲು ನಾವೇ ಆಹಾರ ಮಾಡಿಕೊಟ್ಟಂತಾಗಿದೆ ಎಂದು ಪವಾರ್ ಹೇಳಿದ್ದಾರೆ.

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಕಂಗನಾ ಇಡೀ ಬಾಲಿವುಡ್ ಮಾಫಿಯಾ ಮತ್ತು ಮಹಾ ಸರ್ಕಾರವನ್ನೇ ಎದುರು ಹಾಕಿಕೊಂಡು ಮಾತನಾಡುತ್ತಿದ್ದಾರೆ. ಕೇಂದ್ರ ಸರ್ಕಾರವೇ ಮುಂದಾಗಿ ಕಂಗನಾಗೆ ಭದ್ರತೆ ಒದಗಿಸಿತ್ತು. ಶಿವಸೇನೆ ನಾಯಕ ಮತ್ತು ಕಂಗನಾ ನಡುವೆ ಜಟಾಪಟಿಯೂ ನಡೆದಿತ್ತು. 

click me!