Gift Politics: ರಮೇಶ್ ಜಾರಕಿಹೊಳಿ‌ ಆಪ್ತ ನಾಗೇಶ್ ಮನ್ನೋಳಕರ್‌ಗೆ ಮತ್ತೊಂದು ಶಾಕ್

By Ravi Janekal  |  First Published Mar 20, 2023, 10:53 AM IST

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಗಿಫ್ಟ್ ಪಾಲಿಟಿಕ್ಸ್ ಜೋರಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಕುಕ್ಕರ್ ಹಂಚಿದ್ದಾಯ್ತು,  ಮಾಜಿ ಶಾಸಕ ಸಂಜಯ್ ಪಾಟೀಲ್ ತಟ್ಟೆ ಹಂಚಿ ಸುದ್ದಿಯಾದರು. ಇದೀಗ ರಮೇಶ್  ಜಾರಕಿಹೊಳಿ‌ ಆಪ್ತ ನಾಗೇಶ್ ಮನ್ನೋಳಕರ್‌ ಮತದಾರರಿಗೆ ಗಿಫ್ಟ್ ಹಂಚಿ ಸುದ್ದಿಯಾಗಿದ್ದಾರೆ.


ಬೆಳಗಾವಿ (ಮಾ.20) : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಗಿಫ್ಟ್ ಪಾಲಿಟಿಕ್ಸ್ ಜೋರಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಕುಕ್ಕರ್ ಹಂಚಿದ್ದಾಯ್ತು,  ಮಾಜಿ ಶಾಸಕ ಸಂಜಯ್ ಪಾಟೀಲ್ ತಟ್ಟೆ ಹಂಚಿ ಸುದ್ದಿಯಾದರು. ಇದೀಗ ರಮೇಶ್  ಜಾರಕಿಹೊಳಿ‌ ಆಪ್ತ ನಾಗೇಶ್ ಮನ್ನೋಳಕರ್‌ ಮತದಾರರಿಗೆ ಗಿಫ್ಟ್ ಹಂಚಿ ಸುದ್ದಿಯಾಗಿದ್ದಾರೆ.

ಹೌದು ರಮೇಶ್ ಜಾರಕಿಹೊಳಿ(Ramesh jarkiholi) ಆಪ್ತನಾಗಿರುವ ನಾಗೇಶ್ ಮುನ್ನೋಳಕರ್(Nagesh munnolkar) ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar)ಕ್ಷೇತ್ರದಲ್ಲಿ ಹಂಚಲು ತಂದಿದ್ದ ಲಂಚ್ ಬಾಕ್ಸ್ ಗಳನ್ನು ಕಾರ್ಯಕರ್ತರ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಮಾಹಿತಿ ಪಡೆದು ಚುನಾವಣಾಧಿಕಾರಿಗಳು ದಾಳಿ ನಡೆಸಿ  ಜಪ್ತಿ ಮಾಡುವ ಮೂಲಕ ಜಾರಕಿಹೊಳಿ ಆಪ್ತನಿಗೆ ಶಾಕ್ ಕೊಟ್ಟಿದ್ದಾರೆ.

Tap to resize

Latest Videos

Party Roundsಜಾರಕಿಹೊಳಿ vs ಸವದಿ ಟಿಕೆಟ್ ಕಿತ್ತಾಟ, ಚುನಾವಣೆ ಹೊತ್ತಲ್ಲಿ ಬಿಜೆಪಿಗೆ ತಲೆನೋವು!

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುದ್ರೆಮನಿ ಗ್ರಾಮ(Kudremane village)ದಲ್ಲಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ ಟಿಫನ್ ಬಾಕ್ಸ್‌ಗಳು. ಮಾಹಿತಿ ತಿಳಿದು ಚುನಾವಣಾಧಿಕಾರಿ ಬೆಳಗಾವಿ ಡಿಸಿನಿತೇಶ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿ ಟಿಫಿನ್ ಬಾಕ್ಸ್ ಗಳನ್ನು ಜಪ್ತಿ ಮಾಡಿದ್ದಾರೆ. ಸುಮಾರು 400ಕ್ಕೂ ಅಧಿಕ ಲಂಚ್ ಬಾಕ್ಸ್ ಗಳನ್ನು ಸಂಗ್ರಹಿಟ್ಟಿದ್ದರು. ಲಂಚ್ ಬಾಕ್ ಮೇಲೆ ರಮೇಶ್ ಜಾರಕಿಹೊಳಿ ಆಪ್ತ, ಬಿಜೆಪಿ ಟಿಕೆಟ್ ಆಕಾಂಕ್ಷಿ ನಾಗೇಶ್ ಮನ್ನೋಳ್ಕರ್ ಭಾವಚಿತ್ರ ಅಂಟಿಸಲಾಗಿದೆ. ಇತ್ತೀಚೆಗೆ ಬಾಡೂಟ ಆಯೋಜನೆ ಹಿನ್ನೆಲೆ ನಾಗೇಶ್ ಮನ್ನೋಳಕರ್ ಸೇರಿ ಇಬ್ಬರ ವಿರುದ್ಧ ಕೇಸ್ ದಾಖಲಾಗಿತ್ತು. ಇದೀಗ ಮತ್ತೊಮ್ಮೆ ಮತದಾರರಿಗೆ ಲಂಚ್ ಬಾಕ್ಸ್ ಹಂಚುವ ಮೂಲಕ ಚುನಾವಣಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿರುವ ನಾಗೇಶ್ ಮುನ್ನೋಳ್ಕರ್.

 

ಅಥಣಿ ಟಿಕೆಟ್ ವಿಚಾರದಲ್ಲಿ ಲಕ್ಷ್ಮಣ್ ಸೈಲೆಂಟ್ ರಮೇಶ ವೈಲೆಂಟ್!, ಸವದಿ ಮೌನಕ್ಕೆ ಜಾರಿರುವ ಒಳ ಮರ್ಮವೇನು?

ನೀತಿ ಸಂಹಿತೆ ಉಲ್ಲಂಘನೆ ಅಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

click me!