ಉಪಚುನಾವಣೆ: ಚಿಕ್ಕಬಳ್ಳಾಪುರ JDS ಅಭ್ಯರ್ಥಿ ನಾಮಪತ್ರ ರಿಜೆಕ್ಟ್

By Web DeskFirst Published Nov 19, 2019, 3:26 PM IST
Highlights

ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ ಕೊನೆಯಾಗಿದ್ದು, ಇಂದು (ಮಂಗಳವಾರ) ನಾಮಪತ್ರ ಪರಿಶೀಲನೆ ನಡೆದಿದೆ. ಇದರ ಮಧ್ಯೆ ಚಿಕ್ಕಬಳ್ಳಾಪುರ ಜೆಡಿಎಸ್ ಅಭ್ಯರ್ಥಿಯ ಉಮೇದುವಾರಿಕೆ ತಿರಸ್ಕೃತವಾಗಿದೆ.

ಚಿಕ್ಕಬಳ್ಳಾಪುರ, (ನ.19): ಚಿಕ್ಕಬಳ್ಳಾಪುರ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ ಅವರ ನಾಮಪತ್ರ ತಿರಸ್ಕೃತವಾಗಿದೆ.

ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದ ನಿನ್ನೆ (ಸೋಮವಾರ) ಜೆಡಿಎಸ್‌ನಿಂದ ರಾಧಕೃಷ್ಣ ಹಾಗೂ ಕೆ.ಪಿ.ಬಚ್ಚೇಗೌಡ ಉಮೇದುವಾರಿಕೆ ಸಲ್ಲಿಸಿದ್ದರು.

ಆದ್ರೆ, ಇಂದು (ಮಂಗಳವಾರ) ನಡೆದ ನಾಮಪತ್ರ ಪರಿಶೀಲನೆ ನಡೆದಿದ್ದು, ಜೆಡಿಎಸ್‌ನ ಕೆ.ಪಿ.ಬಚ್ಚೇಗೌಡ ಅವರ ನಾಮಿನೇಷನ್ ತಿರಸ್ಕೃತವಾಗಿದೆ.

ರಾತ್ರೋರಾತ್ರಿ ಚಿಕ್ಕಬಳ್ಳಾಪುರ JDS ಅಭ್ಯರ್ಥಿ ಬದಲಾವಣೆ: ಏನಿದು ಗೌಡ್ರ ತಂತ್ರ..?

ಜೆಡಿಎಸ್‌ನ ಒಂದೇ ಬಿ-ಫಾರಂನಲ್ಲಿ ರಾಧಕೃಷ್ಣ ಹಾಗೂಕೆ.ಪಿ.ಬಚ್ಚೇಗೌಡ ಇಬ್ಬರೂ ನಾಮಪತ್ರಸಲ್ಲಿಸಿದ್ದು, 2ನೇ ಅಭ್ಯರ್ಥಿಯಾಗಿದ್ದ ಬಚ್ಚೇಗೌಡರ ಉಮೇದುವಾರಿಕೆಯನ್ನು ಚುನಾವಣಾಧಿಕಾರಿಗಳು ರಿಜೆಕ್ಟ್ ಮಾಡಿದ್ದಾರೆ.

ಈ ಮೂಲಕ ಚಿಕ್ಕಬಳ್ಳಾಒಉರದ ಜೆಡಿಎಸ್‌ ಅಭ್ಯರ್ಥಿ ರಾಧಕೃಷ್ಣ ಅಂತಿಮವಾಗಿ ಕಣದಲ್ಲಿ ಉಳಿದುಕೊಂಡರು. ಅಂದಹಾಗೆ ರಾಧಾಕೃಷ್ಣ ಬೇರೆ ಯಾರೂ ಅಲ್ಲ. ಶಾಸಕಿ ಅನಿತಾ ಕುಮಾರಸ್ವಾಮಿ ಸೋದರಿಯ ಪತಿ. ಇವರು ಮೂಲತಃ ಶಿಡ್ಲಘಟ್ಟದ ನಾಗಮಂಗಲ ನಿವಾಸಿಯಾಗಿದ್ದಾರೆ.

ನಾಮಪತ್ರ ಭರಾಟೆ ಅಂತ್ಯ, ಯಾರು ಯಾವ ಕಣಕ್ಕೆ ನಾಮಿನೇಷನ್? 15 ಕ್ಷೇತ್ರಗಳ ಸಂಪೂರ್ಣ ವಿವರ

ಜೆಡಿಎಸ್‌ ಪ್ರಕಟಿಸಿದ್ದ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೊದಲು ಕೆ.ಪಿ.ಬಚ್ಚೇಗೌಡರನ್ನು ಅಂತಿಮಗೊಳಿಸಿತ್ತು. ಆದ್ರೆ, ಬದಲಾದ ರಾಜಕೀಯ ವಿದ್ಯಾಮಾನದಿಂದ ಕೊನೆಗಳಿಗೆಯಲ್ಲಿ ಜೆಡಿಎಸ್, ರಾಧಕೃಷ್ಣ  ಅವರನ್ನು ಅಖಾಡಕ್ಕಿಳಿಸಿತ್ತು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

ನವೆಂಬರ್ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!