ಉಪ ಚುನಾವಣೆಗೆ ಡೇಟ್‌ ಫಿಕ್ಸ್?: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ

Published : Feb 26, 2021, 12:53 PM ISTUpdated : Feb 26, 2021, 12:58 PM IST
ಉಪ ಚುನಾವಣೆಗೆ ಡೇಟ್‌ ಫಿಕ್ಸ್?: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ

ಸಾರಾಂಶ

ಬೆಳಗಾವಿ ಲೋಕಸಭಾ, ಮಸ್ಕಿ, ಬಸವಕಲ್ಯಾಣ ಹಾಗೂ ಸಿಂದಗಿ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ| ನಾಲ್ಕೂ ಕ್ಷೇತ್ರಗಳ ಉಪಚುನಾವಣೆಯ ದಿನಾಂಕ ಕೂಡ ಇಂದೇ ಪ್ರಕಟವಾಗುವ ಸಾಧ್ಯತೆ| ಬಜೆಟ್ ಅಧಿವೇಶನ ಮೊಟಕು ಸಾಧ್ಯತೆ| ಟಿಕೆಟ್‌ ಆಕಾಂಕ್ಷಿಗಳ ವಲಯದಲ್ಲಿಯೂ ಹೆಚ್ಚಿದ ಕುತೂಹಲ| 

ಬೆಂಗಳೂರು(ಫೆ.26):  ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೇರಿಯಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪಂಚ ರಾಜ್ಯಗಳ ಚುನಾವಣಾ ದಿನಾಂಕ ಇಂದು(ಶುಕ್ರವಾರ) ಘೋಷಣೆಯಾಗುವ ಸಾಧ್ಯತೆ ಇದೆ. ಇದರ ಜೊತೆಗೆ ರಾಜ್ಯದಲ್ಲೂ ಕೂಡ ಬೆಳಗಾವಿ ಲೋಕಸಭಾ, ರಾಯಚೂರು ಜಿಲ್ಲೆಯ ಮಸ್ಕಿ, ಬೀದರ್‌ ಜಿಲ್ಲೆಯ ಬಸವಕಲ್ಯಾಣ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭೆ ಕ್ಷೇತ್ರಗಳಿಗೂ ಕೂಡ ಉಪಚುನಾವಣೆ ನಡೆಯಲಿದೆ. ಈ ನಾಲ್ಕೂ ಕ್ಷೇತ್ರಗಳ ಉಪಚುನಾವಣೆಯ ದಿನಾಂಕ ಕೂಡ ಇಂದೇ ಪ್ರಕಟವಾಗುವ ಸಾಧ್ಯತೆ ಇದೆ. 

ರಾಜ್ಯದ ಉಪಚುನಾವಣೆ ಘೋಷಣೆಗೆ ಕ್ಷಣಗಣನೆ ಇರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಸಂಚಲನ ತೀವ್ರ ಸಂಚಲನ ಮೂಡಿಸಿದೆ. ಟಿಕೆಟ್‌ ಆಕಾಂಕ್ಷಿಗಳ ವಲಯದಲ್ಲಿಯೂ ಕೂಡ ಕುತೂಹಲ ಹೆಚ್ಚಾಗಿದೆ. ಟಿಕೆಟ್ ಬಯಸಿರುವ ಆಕಾಂಕ್ಷಿಗಳು ಬೆಂಗಳೂರಿನತ್ತ ದೌಡಾಯಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಟಿಕೆಟ್‌ ಪಡೆಯಲು ರಾಜ್ಯ ನಾಯಕರ ಮೂಲಕ ಲಾಭಿ ಶುರುವಾಗಿದೆ.

ಬಜೆಟ್ ಅಧಿವೇಶನ ಮೊಟಕು ಸಾಧ್ಯತೆ

ಉಪಚುನಾವಣೆ ಘೋಷಣೆಗೆ ಕ್ಷಣಗಣನೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಬಜೆಟ್ ಅಧಿವೇಶನ ಮೊಟಕುಗೊಳ್ಳುವ ಸಾಧ್ಯತೆ ಇದೆ. ಮಾರ್ಚ್ ಅಂತ್ಯದವರೆಗೂ ಅಧಿವೇಶನ ನಿಗದಿಯಾಗಿದೆ. ಹೀಗಾಗಿ ಅಧಿವೇಶನ ಎರಡೇ ವಾರಕ್ಕೆ ಸೀಮಿತವಾಗುವ ಸಾಧ್ಯತೆ ಇದೆ. ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ ಬೆನ್ನಲ್ಲೇ ಅಧಿವೇಶನದ ಮೊಟಕಿನ ಬಗ್ಗೆ ಸಮಾಲೋಚನೆ ನಡೆಯಲಿದೆ. ಈ ಸಂಬಂಧ ಮಾ.4 ರಂದು ಸ್ಪಷ್ಟ ತಿರ್ಮಾನವಾಗುವ ಸಾಧ್ಯತೆ ಇದೆ. 

ಕೇರಳ, ಪ. ಬಂಗಾಳ ಸೇರಿ ಪಂಚ ರಾಜ್ಯ ಚುನಾವಣೆಗೆ ದಿನಾಂಕ ಘೋಷಣೆ ಸಾಧ್ಯತೆ!

ನಾಲ್ಕೂ ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ 

ಬೆಳಗಾವಿ

- ಶೆಟ್ಟರ್ ಸೊಸೆ ಶ್ರದ್ಧಾ
- ರಮೇಶ್ ಕತ್ತಿ
- ಭಾರತಿ ಮುಗ್ಧಂ
- ಪ್ರಮೋದ್ ಮುತಾಲಿಕ್
- ಪ್ರಭಾಕರ್ ಕೋರೆ
- ಮಹಾಂತೇಶ ಕವಟಗಿಮಠ

ಕಾಂಗ್ರೆಸ್ ಆಕಾಂಕ್ಷಿಗಳು: 

ಸತೀಶ್ ಜಾರಕಿಹೊಳಿ‌,
ಲಕ್ಷ್ಮೀ ಹೆಬ್ಬಾಳಕರ್.
ಚನ್ನರಾಜ್ ಹಟ್ಟಿಹೊಳಿ(ಲಕ್ಷ್ಮೀ ಹೆಬ್ಬಾಳಕರ್ ಸಹೋದರ)

ಮಸ್ಕಿ

- ಪ್ರತಾಪ್ ಗೌಡ ಪಾಟೀಲ್
ಕಾಂಗ್ರೆಸ್ ಆಕಾಂಕ್ಷಿ.
ಬಸವರಾಜ್ ತುರವಿಹಾಳ್

ಬಸವಕಲ್ಯಾಣ: 

- ಎಂ ಜಿ ಮೂಳ್ಹೆ
- ಶರಣು ಸಲಗಾರ್
- ಭಗವಂತ ಖೂಬಾ

ಕಾಂಗ್ರೆಸ್  ಆಕಾಂಕ್ಷಿಗಳು:

- ಮಲ್ಲಮ್ಮ ನಾರಾಯಣ ರಾವ್.
- ವಿಜಯ ಸಿಂಗ್..

ಸಿಂದಗಿ

- ಲಕ್ಷ್ಮಣ ಸವದಿ
- ರಮೇಶ್ ಭೂಸನೂರ

ಕಾಂಗ್ರೆಸ್ ಆಕಾಂಕ್ಷಿಗಳು: 

ರವಿಕಾಂತ ಪಾಟೀಲ್
ಅಶೋಕ್ ಮನಗೂಳಿ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್