ಚುನಾವಣಾ ಆಯೋಗದಿಂದ ಮತ್ತೊಂದು ಘೋಷಣೆ, 4 ರಾಜ್ಯಗಳ ಉಪಚುನಾವಣೆ ದಿನಾಂಕ ಪ್ರಕಟ!

By Suvarna News  |  First Published Mar 29, 2023, 4:04 PM IST

ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಇದರ ಜೊತೆಗೆ ಚುನಾವಣಾ ಆಯೋಗ 4 ರಾಜ್ಯಗಳ ಉಪ ಚುನಾವಣಾ ದಿನಾಂಕವನ್ನು ಘೋಷಿಸಿದೆ. ಈ ಕುರಿತ ವಿವರ ಇಲ್ಲಿವೆ.


ನವದೆಹಲಿ(ಮಾ.29): ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಮೇ.10 ರಂದ ಒಂದು ಹಂತದಲ್ಲಿ ಚುನಾವಣೆ ನಡೆಯಲಿದೆ. ಇನ್ನು ಮೇ.13 ರಂದು ಫಲಿತಾಂಶ ಘೋಷಣೆಯಾಗಲಿದೆ. ಚುನಾವಣಾ ಆಯೋಗ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕ ಪ್ರಕಟಿಸಿದೆ. ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ಚುನಾವಣಾ ಚಟುವಟಿಕೆ ಗರಿಗೆದರಿದೆ. ಇತ್ತ ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ಆಯೋಗ, 4 ರಾಜ್ಯಗಳ ಉಪ ಚುನಾವಣೆ ದಿನಾಂಕವನ್ನು ಘೋಷಿಸಲಾಗಿದೆ. ಉತ್ತರ ಪ್ರದೇಶ, ಒಡಿಶಾ, ಪಂಜಾಬ್ ಹಾಗೂ ಮೆಘಾಲಯದ ಉಪ ಚುನಾವಣೆ ದಿನಾಂಕವೂ ಘೋಷಣೆಯಾಗಿದೆ. ಈ ಉಪ ಚುನಾವಣೆ ಕೂಡ ಮೇ. 10 ರಂದು ನಡೆಯಲಿದೆ. ಮೇ.13ಕ್ಕೆ ಫಲಿತಾಂಶ ಹೊರಬೀಳಲಿದೆ.

ಜಲಂಧರ್ ಲೋಕಸಭಾ ಸ್ಥಾನ, ಪಂಜಾಬ್‌ನ ಜಾರ್ಸುಗುಡಾ-7 ವಿಧಾನಸಭಾ ಸ್ಥಾನ, ಒಡಿಶಾದ 395- ಛಾನ್ಬೇ, ಉತ್ತರ ಪ್ರದೇಶದ ಸೌರ್ 34 ಹಾಗೂ ಮೆಘಾಲಯದ ಶಿಲ್ಲಾಂಗ್ 23 ವಿಧಾನಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಕರ್ನಾಟಕದ ವಿಧಾನಸಭಾ ಚುನಾವಣೆ ದಿನದಂದೇ ಈ ಉಪಚುನಾವಣೆ ನಡಯಲಿದೆ ಎಂದು ಚುನಾವಣಾ ಆಯೋಗ ಮುಖ್ಯಸ್ಥ ರಾಜೀವ್ ಕುಮಾರ್ ಹೇಳಿದ್ದಾರೆ.

Tap to resize

Latest Videos

Karnataka Elections 2023: ಪ್ರತಿಪಕ್ಷಗಳ ಮನವಿ ಒಪ್ಪಿದ ಆಯೋಗ, ರಾಜ್ಯದಲ್ಲಿ ಒಂದೇ ಹಂತದಲ್ಲಿ 'ಮೇ'ಗಾ ಎಲೆಕ್ಷನ್‌!

ಉಪ ಚುನಾವಣಾ ವಿವರವನ್ನು ಸುದ್ದಿಗೋಷ್ಠಿಯಲ್ಲಿ ರಾಜೀವ್ ಕುಮಾರ್ ನೀಡಿದ್ದಾರೆ. ಉಪ ಚುನಾವಣೆಗೆ ಎಪ್ರಿಲ್ 13 ರಂದು ಗಜೆಟ್ ನೋಟಿಫಿಕೇಶ್ ಹೊರಡಿಸಲಾಗುತ್ತದೆ. ಎಪ್ರಿಲ್ 20ಕ್ಕೆ ನಾಮ ಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಇನ್ನು ಎಪ್ರಿಲ್ 21 ರಂದು ನಾಮಪತ್ರ ಪರಿಶೀಲನೆಗೆ ಕೊನೆಯ ದಿನವಾಗಿದೆ. ಎಪ್ರಿಲ್ 24 ನಾಪ ಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.ಮೇ.10 ರಂದ ಉಪಚುನಾವಣೆ ನಡೆದರೆ, ಮೇ. 13ಕ್ಕೆ ಫಲಿತಾಂಶ ಘೋಷಣೆಯಾಗಲಿದೆ.

ಚುನಾವಣಾ ಕಾವು ಜೋರಾಗಿದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯಾದರೆ, ಉತ್ತರ ಪ್ರದೇಶ, ಪಂಜಾಬ್, ಮೆಘಾಲಯ ಹಾಗೂ ಒಡಿಶಾದಲ್ಲಿ ಉಪ ಚುನಾವಣೆ ಕಾವು ಶುರುವಾಗಿದೆ. ನೀತಿ ಸಂಹಿತಿ ಜಾರಿಯಾಗಿದೆ. ಇತ್ತ ಪೊಲೀಸರು ಕರ್ನಾಟಕದ ಹಲವು ಭಾಗದಲ್ಲಿ ನಾಕಾಬಂಧಿ ಹಾಕಿದ್ದಾರೆ. ಎಲ್ಲರ ತಪಾಸಣೆ ಮಾಡುತ್ತಿದ್ದಾರೆ.

Karnataka Elections 2023: ನೀತಿ ಸಂಹಿತೆ ಜಾರಿ ಬೆನ್ನಲ್ಲಿಯೇ ಶಿವಮೊಗ್ಗದಲ್ಲಿ 4 ಲಕ್ಷ ರೂಪಾಯಿ ವಶ!

ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಅನ್ನೋ ಆರೋಪ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಪದೇ ಪದೇ ಮಾಡುತ್ತಿದೆ. ಹೀಗಾಗಿ ಈ ಬಾರಿ ಚುನಾವಣಾ ಆಯೋಗ ಮತ್ತಷ್ಟು ಕಟ್ಟು ನಿಟ್ಟಾಗಿ ಹಾಗೂ ಯಾವುದೇ ಅಡೆತಡೆ ಇಲ್ಲದೆ ಚುನಾವಣೆ ನಡೆಸಲು ನಿರ್ಧರಿಸಿದೆ.ಆರೋಪಗಳಿಗೆ ಉತ್ತರಿಸಿರುವ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್, ಯಾರ ಒತ್ತಡ ಇಲ್ಲ ಸ್ವತಂತ್ರವಾಗಿ ಆಯೋಗ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
 

click me!