ಬಳ್ಳಾರಿ ಮಹಾನಗರ ಪಾಲಿಕೆಗೆ ಕೇವಲ 24 ವರ್ಷದ ಯುವತಿ ಡಿ.ತ್ರಿವೇಣಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಉಪ ಮೇಯರ್ ಆಗಿ ಬಿ.ಜಾನಕಿ ಅವಿರೋಧ ಆಯ್ಕೆಯಾಗಿದ್ದಾರೆ.
ಬಳ್ಳಾರಿ (ಮಾ.29): ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ಕೆಲವೇ ಕ್ಷಣಗಳಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಗೆ ಕೇವಲ 24 ವರ್ಷದ ಯುವತಿ ಡಿ.ತ್ರಿವೇಣಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಉಪ ಮೇಯರ್ ಆಗಿ ಬಿ.ಜಾನಕಿ ಅವಿರೋಧ ಆಯ್ಕೆಯಾಗಿದ್ದಾರೆ. ರಾಜ್ಯದ ಕಿರಿಯ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾಳೆ.
ಹಲವು ದಿನಗಳಿಂದ ಕುತೂಹಲ ಕೆರಳಿಸಿದ್ದ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಒಟ್ಟು 44 ಸದಸ್ಯರಿದ್ದು, ಬಹುಮತ ಪಡೆಯಲು 23 ಮತಗಳನ್ನು ಪಡೆಯುವುದು ಅನಿವಾರ್ಯ ಆಗಿತ್ತು. ಆದರೆ, ಕಾಂಗ್ರೆಸ್‌ನ 28 ಸದಸ್ಯರಿದ್ದು, ಎಲ್ಲರ ಮತಗಲೂ ಡಿ. ತ್ರಿವೇಣಿ ಅವರಿಗೆ ಬಿದ್ದಿವೆ. ಇನ್ನು ಬಿಜೆಪಿಯಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗೆ ಕೇವಲ 16 ಮತಗಳು ಬಿದ್ದಿವೆ. ಈ ಮೂಲಕ ಹೆಚ್ಚು ಮತಗಳನ್ನು ಪಡೆದ ತ್ರಿವೇಣಿ ಈಗ ಮೇಯರ್ ಆಗಿ ಆಯ್ಕೆಯಾಗಿದ್ದಾಳೆ.
undefined
ಖರ್ಗೆ ತವರಿಂದಲೇ ವಿಜಯ ದುಂದುಭಿ: ಪ್ರಧಾನಿ ಮೋದಿ
ಪರಿಶಿಷ್ಟ ಜಾತಿಗೆ ಮೇಯರ್ ಸ್ಥಾನ ಮೀಸಲು:
ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಜಾತಿ (SC) ಹಾಗೂ ಉಪ ಮೇಯರ್ ಸ್ಥಾನಕ್ಕೆ ಪರಿಶಿಷ್ಟ ಪಂಗಡ (ST) ಮೀಸಲು ಘೋಷಣೆಯಾಗಿತ್ತು. ಮೇಯರ್, ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಪೈಪೋಟಿಯೇ ಹೆಚ್ಚಾಗಿತ್ತು. ಮುಖ್ಯವಾಗಿ ಕಾಂಗ್ರೆಸ್ ಸದಸ್ಯರೇ ಅತ್ಯಧಿಕವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸುವುದು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಬಳ್ಳಾರಿ ಶಾಸಕ ಬಿ. ನಾಗೇಂದ್ರ ಸೇರಿ ಹಲವು ನಾಯಕರು ಮಹಾನಗರ ಪಾಲಿಕೆಯ ಬಳಿಯೇ ಮೊಕ್ಕಾಂ ಹೂಡಿದ್ದರು. ಅದರಲ್ಲಿ ಈಗ ತ್ರಿವೇಣಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮೇಯರ್ 6 ಆಕಾಂಕ್ಷಿಗಳು ಪೈಪೋಟಿ:
ಇನ್ನು ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ನಿಂದ ಮೇಯರ್ ಆಗುವುದು ಖಚಿತವಿದ್ದರೂ, ಒಟ್ಟು 6 ಮಂದಿ (ಉಮಾದೇವಿ, ಶಿವರಾಜ್, ತ್ರೀವೇಣಿ, ಕುಬೇರ, ಮಿಂಚು ಶ್ರೀನಿವಾಸ್ ಹಾಗೂ ಶ್ವೇತಾ) ಮೇಯರ್ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಇನ್ನು ಮಹಾನಗರದಲ್ಲಿ 39 ವಾರ್ಡ್‌ಗಳ ಪೈಕಿ 21 ಕಾಂಗ್ರೆಸ್, 13 ಬಿಜೆಪಿ ಹಾಗೂ 5 ಜನ ಪಕ್ಷೇತರರ ಸದಸ್ಯರಿದ್ದಾರೆ. ಐವರು ಪಕ್ಷೇತರ ಸದಸ್ಯರು ಕಾಂಗ್ರೆಸ್ ಸೇರ್ಪಡೆ ಹಿನ್ನಲೆ ಕಾಂಗ್ರೆಸ್ ಬಹುಮತ ಸ್ಪಷ್ಟವಾಗಿತ್ತು. 26 ಸದಸ್ಯರ ಬಲ ಹೊಂದಿರೋ ಕಾಂಗ್ರೆಸ್‌ಗೆ ಮೇಯರ್ ಸ್ಥಾನ ಬಹುತೇಕ ಫಿಕ್ಸ್ ಎನ್ನುವಂತಾಗಿತ್ತು. ಇನ್ನು ಉಪ ಮೇಯರ್ ಸ್ಥಾನಕ್ಕೆ 3 ಜನ (ಶಶಿಕಲಾ ಜಗನ್ನಾಥ, ಜಾನಕಿ, ರತ್ನಮ್ಮ) ಪಾಲಿಕೆ ಸದಸ್ಯರ ಮಧ್ಯೆ ಪೈಪೋಟಿ ಏರ್ಪಟ್ಟಿತ್ತು.
18 ಕಡೆ ಚೆಕ್‌ಪೋಸ್ಟ್ ನಿರ್ಮಾಣ: 700 ರೌಡಿಶೀಟರ್‌ಗಳಿಗೆ ಎಚ್ಚರಿಕೆ: ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ 18 ಕಡೆ ಚೆಕ್ ಪೋಸ್ಟ್ ಗಳನ್ನು ಮಾಡಲಾಗಿದೆ. 11 ಅಂತರ್ ರಾಜ್ಯ ಮತ್ತು 5 ಅಂತರ್ ಜಿಲ್ಲಾ ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಈವರೆಗೂ 19 ಪ್ರಕರಣಗಳ ದಾಖಲಾಗಿದ್ದು 6 ಲಕ್ಷ ರೂ. ನಗದು ಸೀಜ್ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ಬಂಧನ ಮಾಡಲಾಗಿದೆ. ಮೂರು ಸಾವಿರ ಸೀರೆ ಸೀಜ್ ಮಾಡಲಾಗಿದೆ (15ಲಕ್ಷ ಮೌಲ್ಯ). ಜೊತೆಗೆ, 5 ಲಕ್ಷ ಮೌಲ್ಯದ 5 ಕೆಜಿ. ಗಾಂಜಾ. ಆರು ಲೀಟರ್ ಲಿಕ್ಕರ್ ಸೀಜ್ ಮಾಡಲಾಗಿದೆ. ಗಾಂಜಾ ಪೆಡ್ಲರ್ ದೌಲಾ ಎನ್ನುವ ಸೇರಿದ ಗಾಂಜಾ ಜಪ್ತಿ ಮಾಡಲಾಗಿದೆ ದೌಲಾ ನಾಪತ್ತೆಯಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ 700ಕ್ಕೂ ಅಧಿಕ ರೌಡಿ ಶೀಟರ್ ಇದ್ದಾರೆ ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ. ಕೆಲವರನ್ನು ಗಡಿಪಾರು ಮಾಡೋ ಬಗ್ಗೆ ಪ್ಲಾನ್ ಮಾಡಲಾಗ್ತಿದೆ.