ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಇಡಿ ವರದಿ ಸುಳ್ಳು ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ. ಇಡಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಅಣತಿಯಂತೆ ಕೆಲಸ ಮಾಡುತ್ತಿದೆ ಮತ್ತು ಸಿದ್ದರಾಮಯ್ಯ ಅವರ ಮೇಲೆ ಸುಳ್ಳು ಆರೋಪ ಹೊರಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಮೈಸೂರು (ಜ.31): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ನಿನ್ನೆ ಜಾರಿ ನಿರ್ದೇಶನಾಲಯ (ಇ.ಡಿ) ಇಲಾಖೆ 104 ಪುಟದ ವರದಿಯನ್ನ ಎಡಿಜಿಪಿ ಲೋಕಾಯುಕ್ತಗೆ ನೀಡಲಾಗಿದೆ. ಇಡಿ ಇಲಾಖೆ ಸುಳ್ಳು ವರದಿಯನ್ನ ನೀಡಲಾಗಿದೆ. ಇಡಿ ಬಿಜೆಪಿ, ಆರ್ ಎಸ್ಎಸ್ ಅಣತೆಯಂತೆ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಸತ್ಯಾ ಸತ್ಯತೆಗಳನ್ನ ಜನರಿಗೆ ತಿಳಿಸಬೇಕಿದೆ. ನಿನ್ನೆ ಇಡಿ ಇಲಾಖೆ 104 ಪುಟದ ವರದಿಯನ್ನ ಎಡಿಜಿಪಿ ಲೋಕಾಯುಕ್ತಗೆ ನೀಡಲಾಗಿದೆ. ಈ ರಿಪೋರ್ಟ್ ನಲ್ಲಿ ಕೆಲವೇ ಕೆಲವು ಮಾಧ್ಯಮಕ್ಕೆ ನೀಡಲಾಗಿದೆ. ಇಡಿ ಇಲಾಖೆ ಸುಳ್ಳು ವರದಿಯನ್ನ ನೀಡಲಾಗಿದೆ. ಇಡಿ ಬಿಜೆಪಿ, ಆರ್ ಎಸ್ಎಸ್ ಅಣತೆಯಂತೆ ಕೆಲಸ ಮಾಡುತ್ತಿದೆ. ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆ. ಮುಡಾ ವಿಚಾರದಲ್ಲಿ ಸಿಎಂ ಪತ್ನಿ ಪಡೆದಿರುವ ಸೈಟ್ ಗಳ ಬಗ್ಗೆ ತನಿಖೆ ಮಾಡಲು ಲೋಕಾಯುಕ್ತಗೆ ನ್ಯಾಯಾಲಯ ನೀಡಿದೆ ಎಂದು ತಿಳಿಸಿದರು.
ಈಗಾಗಲೇ ಲೋಕಾಯುಕ್ತ ಕೂಡ ವರದಿ ಸಲ್ಲಿಸಿದೆ. ತನಿಖಾ ಸಂಸ್ಥೆ ತನಿಖೆ ಮಾಡುವ ವೇಳೆ ಇಡಿ ಮದ್ಯಸ್ತಿಕೆ ವಹಿಸಿದೆ. ಮನಿ ಲಾಂಡ್ರಿಗ್ ಆಗಿದ್ರೆ ಇಡಿ ತನಿಖೆ ಮಾಡಬೇಕು. ಇಡಿ ಗೆ ತನಿಖೆ ಮಾಡುವಂತೆ ಯಾರು ಮನವಿ ಮಾಡಿಲ್ಲ. ಸ್ನೇಹಮಯಿ ಕೃಷ್ಣ ನೀಡಿರುವ ದೂರಿನ ಮೇರೆಗೆ ಎಫ್ಐಆರ್ ದಾಖಲು ಮಾಡಿಕೊಂಡು ತನಿಖೆ ಮಾಡುತ್ತಿದೆ. ಇದರಲ್ಲೇ ಗೊತ್ತಾಗುತ್ತದೆ ಇಡಿ ಅಧಿಕಾರಿಗಳು ಲೋಕಾಯುಕ್ತ ಮೇಲೆ ಪ್ರಭಾವ ಬೀರಲು ಮುಂದಾಗಿದೆ ಎಂಬುದು. ಜನಸಾಮಾನ್ಯರಿಗೆ ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ ಎಂದು ಬಿಂಬಿಸುವ ಕೆಲಸ ಇಡಿ ಮಾಡುತ್ತಿದೆ ಎಂದರು.
ಇದನ್ನೂ ಓದಿ: ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ: ವಿಜಯೇಂದ್ರ ಏಕಪಕ್ಷೀಯ ನಿರ್ಧಾರಕ್ಕೆ ನವೀನ್ ಕಿರಣ್ ಟೀಕೆ
ನೀವು 1095ರಲ್ಲಿ ನಿವೇಶನ ಅಕ್ರಮ ಆಗಿರೋದರ ಬಗ್ಗೆ ದಾಖಲೆ ನೀಡಿದ್ದೀರಾ. ಇದನ್ನ ನಾವು ಸ್ವಾಗತ ಮಾಡುತ್ತೇವೆ. ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಮನಿ ಲಾಂಡ್ರಿಗ್‌ನಲ್ಲಿ ಭಾಗಿಯಾಗಿರೋ ಬಗ್ಗೆ ಎಲ್ಲಾದರೂ ದಾಖಲೆ ನೀಡಿದ್ದೀರಾ ಎಂದು ಇಡಿ ಅಧಿಕಾರಿಗಳಿಗೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಪ್ರಶ್ನೆ ಮಾಡಿದರು.
ಡಿನೋಟಿಫೈ ಮಾಡಿದ್ದು 1997ರಲ್ಲಿ. ಆ ವೇಳೆ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದರು. ಹೀಗಾಗಿ ನೀವು ಸಿದ್ದರಾಮಯ್ಯ ಪ್ರಭಾವ ಬೀರಿದ್ದೀರಾ ಎಂದು ಹೇಳಿದ್ದಿರಾ. ಡಿನೋಟಿಫೈ ವೇಳೆ ತಪ್ಪಾಗಿದ್ರೆ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಿ. ಈ ಪ್ರಕರಣದಲ್ಲಿ ಇಡಿ ಹಸಿ ಸುಳ್ಳು ಹೇಳುತ್ತಿದೆ. 2004ರ ಚಿತ್ರವನ್ನ ಸ್ಯಾಟ ಲೈಟ್ ನಲ್ಲಿ ನೋಡಿದ್ದೀರಾ. ಅದನ್ನು ನೋಡಲು ಸಾಧ್ಯ ಇದೆಯಾ. 2004ರಲ್ಲಿ ಡೆವಲಪ್ಮೆಂಟ್ ಆಗಿತ್ತು ಎಂದು ಹೇಳ್ತಿದೀರಾ. 1997 ರಲ್ಲಿ ಡಿನೋಟಿಫೈ ಆಗಿರೋದು ಮುಡಾಗೆ ಸೇರಲು ಹೇಗೆ ಸಾಧ್ಯ. ನಾವು ಈ ಸೈಟ್ ಗೆ 56 ಕೋಟಿ ಕೊಡಿ ಎಲ್ಲೂ ಕೇಳಿದ್ದೆವು. ಸಿದ್ದರಾಮಯ್ಯಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಇಡಿ ಈ ರೀತಿ ತನಿಖೆಯ ಹಾದಿ ತಪ್ಪಿಸುತ್ತಿದೆ. ಸಿಬಿಐಗೆ ಪ್ರಕರಣ ನೀಡುವ ನಿರ್ಧಾರಕ್ಕೆ ನ್ಯಾಯಾಲಯ ಬರಲಿ ಎಂಬ ಉದ್ದೇಶ ಇದರಲ್ಲಿದೆ ಎಂದು ಇಡಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಆರೋಪ ಮಾಡಿದರು.