
ಚಿಕ್ಕಬಳ್ಳಾಪುರ(ಜ.31): ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆ ವೇಳೆ ಸಂಸದ ಡಾ ಕೆ. ಸುಧಾಕರ್ ಅವರನ್ನು ವಿಶ್ವಾಸಕ್ಕೆ ಪಡೆಯದೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರವರು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್‌ಪರ ನಿಂತ ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಅಸಮಾಧಾನ ಹೊರಹಾಕಿದರು.
ನಗರದ ಸಂಸದರ ಗೃಹ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ, ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ ಸಂದೀಪರೆಡ್ಡಿ ಆಯ್ಕೆ ವಿಚಾರವಾಗಿ ಜಿಲ್ಲೆಯ ಯಾವ ನಾಯಕರೊಂದಿಗೂ ರಾಜ್ಯಾಧ್ಯಕ್ಷರು ಚರ್ಚೆ ನಡೆಸಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಸಾಧ್ಯವಾಗೋದಿಲ್ಲ. ಹತ್ತು ವರ್ಷಗಳ ಹಿಂದೆಐದಾರು ಸಾವಿರ ಮತಗಳನ್ನ ಪಡೆಯುತ್ತಿದ್ದ ಸ್ಥಿತಿ ಪಕ್ಷಕ್ಕೆ ಮತ್ತೆ ಬರಲಿದೆ ಎಂದರು.
ಸಿದ್ದರಾಮಯ್ಯ ಪ್ರಾಮಾಣಿಕ ವ್ಯಕ್ತಿ, ಅವರು ತಪ್ಪು ಮಾಡಿಲ್ಲ: ಶಾಸಕ ಪ್ರದೀಪ್ ಈಶ್ವರ್
ಜಿಲ್ಲೆಯಲ್ಲಿ ಬಿಜೆಪಿ ಕಟ್ಟಿದ್ದು ಡಾ.ಸುಧಾಕರ್ :
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ 2018 ರಮುಂಚೆ ಎಲ್ಲಿತ್ತು, 2018 ರ ಚುನಾವಣೆಯಲ್ಲಿ ಬಿಜೆಪಿಪಡೆದ ಮತಗಳು 5300, 2024 ರಸಂಸದರ ಚುನಾವಣೆಯಲ್ಲಿ ಬಿಜೆಪಿ ಪಡೆದ ಮತ 91000. ಇದು ಯಾರ ಶ್ರಮ ಎಂಬುದನ್ನು ಯೋಚಿಸಿ. ಜಿಲ್ಲಾಧ್ಯಕ್ಷರ ಘೋಷಣೆ ಸಭೆಗೆ ನಮಗೆ ಆಹ್ವಾನ ಕೊಡಲಿಲ್ಲ. ತರಾತುರಿಯಲ್ಲಿ ಆದೇಶ ಪಾಲಿಸಲು ನಮ್ಮನ್ನ ಬಿಟ್ಟು ಘೋಷಣೆ ಮಾಡಿದ್ದಾರೆ ಎಂದರು.
ಮರಳುಕುಂಟೆ ಕೃಷ್ಣಮೂರ್ತಿ ಮಾತನಾಡಿ, ಚಿಕ್ಕಬಳ್ಳಾಪುರಜಿಲ್ಲಾಧ್ಯಕ್ಷರನೇಮಕಮಾಡಿರುವುದು ಬೇಸರಸಂಗತಿ. ದಕ್ಷಿಣ ಕರ್ನಾಟಕದ ಬಿಜೆಪಿ ಭಾವುಟ ಹಾರಿಸಿದ ಏಕೈಕ ನಾಯಕ ಸುಧಾಕರ್, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಲ್ಲಿ ಸುಧಾಕರ್ ಕೊಡುಗೆ ಅಪಾರವಾಗಿದೆ. ಜಿಲ್ಲಾಧ್ಯಕ್ಷರ ವಿಚಾರವಾಗಿ ಸಂಸದರ ಸಹಮತ ಇರುವವವರಿಗೆ ಅಧ್ಯಕ್ಷ ಸ್ಥಾನ ಕೊಡಿ ಅಂತ ಹೇಳಿದ್ದೆವು. ಆದರೆ ಸಂಸದರ ಗಮನಕ್ಕೆ ತರದೆ ಜಿಲ್ಲಾಧ್ಯಕ್ಷರ ನೇಮಕ ಮಾಡೋದು ಸರೀನಾ ಎಂದು ಪ್ರಶ್ನಿಸಿದರು.
ರಾಜ್ಯಾಧ್ಯಕ್ಷರು ಮಾಜಿ ಯಡಿಯೂರಪ್ಪನವರ ಸಲಹೆಗಳನ್ನೂ ಧಿಕ್ಕರಿಸಿ ಏಕ ಚಕ್ರಾದಿಪತ್ಯ ಅಧಿಕಾರ ನಡೆಸುತ್ತಿದ್ದಾರೆ. ಸುಧಾಕರ್ ಅವರ ಮೇಲೆ ಹೈಕಮಾಂಡ್ ನಾಯಕರಿಗೆ ವಿಶ್ವಾಸ ಇದೆ.ಹೋದ್ರೆ ಕಾಂಗ್ರೆಸ್ ಗೆ ಹೋಗಿ ಅಂತಎಸ್‌ಆರ್ ವಿಶ್ವನಾಥ್ ಹೇಳಿದ್ದಾರೆ. ಲೋಕಸಭಾ ಚುನಾವಣಾ ಸಮಯದಲ್ಲಿ ಎಸ್‌ಆರ್ ವಿಶ್ವನಾಥ್ ಏನ್ಮಾಡಿದ್ರು ಅಂತ ಎಲ್ಲರಿಗೂ ಗೊತ್ತಿದೆ. ಅವರಿಂದ ಅಥವಾ ಪ್ರೀತಂಗೌಡ ಕೈಯಲ್ಲಿ ನಾವು ಬುದ್ದಿ ಹೇಳಿಸಿಕೊಳ್ಳಬೇಕಿಲ್ಲ. ಪಕ್ಷ ಯಾವ ರೀತಿ ಕಟ್ಟಬೇಕು ಅಂತ ನಮಗೆ ಗೊತ್ತಿದೆ ಎಂದರು.
ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಿ: ಬಿಜೆಪಿ ಮುಂದೆ ಅಧಿಕಾರಕ್ಕೆ ಬರಬೇಕಾದರೆ ವಿಜಯೇಂದ್ರ ಏಕಪಕ್ಷೀಯ ನಿರ್ಧಾರ ಕೈಬಿಡಬೇಕು. ಹಿಂಬಾಲಕರ ಮಾತು ಕೇಳಿದರೆ ಪಕ್ಷ ಕಟ್ಟಲು ಆಗಲ್ಲ. ನೇಮಕಾತಿ ಆದೇಶ ಪುನರ್‌ಪರಿಶೀಲನೆ ಮಾಡಬೇಕು. ಈಗಲೂ ಕಾಲ ಮಿಂಚಿಲ್ಲ ಈಗಲಾದರೂ ಅಧ್ಯಕ್ಷರ ಬದಲಾವಣೆ ಮಾಡಿ ಎಂದು ಒತ್ತಾಯಿಸಿದರು.
ಕುಮಾರಸ್ವಾಮಿ ಚನ್ನಪಟ್ಟಣ ಸೋಲಿನಿಂದ ಬೇಸತ್ತಿದ್ದಾರೆ: ಸಚಿವ ಕೃಷ್ಣ ಬೈರೇಗೌಡ
ಖಾದಿಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಜಿಲ್ಲಾಧ್ಯಕ್ಷ ಸಂದೀಪ್ ರೆಡ್ಡಿ ನೇಮಕಕ್ಕೆ ನಮ್ಮ ವಿರೋಧ ಇದೆ. ರಾಜ್ಯದಲ್ಲಿ ವಿಜಯೇಂದ್ರ ಅವರನ್ನ ಅರ್ಧ ಬಿಜೆಪಿಯೇ ಟೀಕೆ ಮಾಡುತ್ತಿದೆ. ಡಾ.ಕೆ.ಸುಧಾಕರ್‌ಬಿಜೆಪಿಗೆ ಹೋಗಿಲ್ಲ ಅಂದಿದ್ದರೆ ಯಡಿಯೂರಪ್ಪ ನವರು ಸಿಎಂ ಆಗ್ತಿರಲಿಲ್ಲ. ಯಡಿಯೂರಪ್ಪ ಹೇಗೆ ಸುಧಾಕರ್‌ಗೆ ಸಹಕಾರ ನೀಡಿದ್ರು ಅದನ್ನ ತಿಳಿದುಕೊಳ್ಳಿ ಎಂದರು.
ಸುದ್ದಿಗೋಷ್ಟಿಯಲ್ಲಿ ನಗರಸಭಾದ್ಯಕ್ಷ ಗಜೇಂದ್ರ, ಉಪಾಧ್ಯಕ್ಷ ಜೆ.ನಾಗರಾಜ್, ಜಯಕು ಮಾರ್, ಕಣಜೇನಹಳ್ಳಿ ಆನಂದ್, ಜೀಯಾ ಉಲ್ಲಾ, ಎಸ್ ಆರ್‌ಎಸ್ ದೇವರಾಜ್, ವಕ್ಕಲಿಗರ ಸಂಘದ ರಾಜ್ಯ ಕಾರ್ಯದರ್ಶಿ ಕೋನಪ್ಪರೆಡ್ಡಿ, ಅರುಣ್ ಚನ್ನಕೃಷ್ಣಾರೆಡ್ಡಿ, ರಾಮಚಂದ್ರರೆಡ್ಡಿ, ಜಿ.ಆರ್. ಶ್ರೀನಿವಾಸ್, ಚಂದ್ರಶೇಖರ್, ಮತ್ತಿತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.