ವಯನಾಡು ಲೋಕಸಭಾ ಉಪ ಚುನಾವಣೆ: ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ನಿಷೇಧ ವಾಪಾಸ್?

By Suvarna News  |  First Published Nov 12, 2024, 9:08 PM IST

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಸ್ಪರ್ಧೆಯಿಂದ ಕೇರಳದ ವಯನಾಡು ಲೋಕಸಭಾ ಉಪ ಚುನಾವಣೆ ಕಾವು ಪಡೆದಿದೆ. ಈ ಚುನಾವಣೆಯಲ್ಲಿ ಬಹುತೇಕ ಕರ್ನಾಟಕ ರಸ್ತೆಯದ್ದೆ ಕೇರಳದ ಚುನಾವಣೆ ರಾಜಕೀಯ ವಿಷಯವಾಗಿದೆ


ವರದಿ - ಪುಟ್ಟರಾಜು. ಆರ್. ಸಿ.  ಏಷಿಯಾನೆಟ್  ಸುವರ್ಣ  ನ್ಯೂಸ್ ,  ಚಾಮರಾಜನಗರ.

ಚಾಮರಾಜನಗರ (ನ.12): ವಯನಾಡು  ಲೋಕಸಭಾ ಉಪ ಚುನಾವಣೆ ಪ್ರಚಾರದ ವೇಳೆ ಡಿಸಿಎಂ ಡಿಕೆಶಿ ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ನಿರ್ಬಂಧ ವಾಪಾಸ್ ಪಡೆಯುವ ಬಗ್ಗೆ ಸಿಎಂ ಜೊತೆಗೆ ಚರ್ಚಿಸಿ ನಿರ್ಧಾರ ಮಾಡ್ತೀವಿ ಎಂಬ ಮಾತುಗಳನ್ನಾಡಿದ್ದಾರೆ. ಇದಕ್ಕೆ ಪರಿಸರವಾದಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ಗಾಂಧಿ ಕುಟುಂಬದ ಓಲೈಕೆಗಾಗಿ ಪ್ರಾಣಿಗಳಿಗೆ ಕುತ್ತು ತರುವ ನಿರ್ಧಾರ ಬೇಡ ಎಂಬ ಎಚ್ಚರಿಕೆ ಕೊಟ್ಟಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

Latest Videos

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಸ್ಪರ್ಧೆಯಿಂದ ಕೇರಳದ ವಯನಾಡು ಲೋಕಸಭಾ ಉಪ ಚುನಾವಣೆ ಕಾವು ಪಡೆದಿದೆ. ಈ ಚುನಾವಣೆಯಲ್ಲಿ ಬಹುತೇಕ ಕರ್ನಾಟಕ ರಸ್ತೆಯದ್ದೆ ಕೇರಳದ ಚುನಾವಣೆ ರಾಜಕೀಯ ವಿಷಯವಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ  ತಾಲೂಕಿನ  ಬಂಡೀಪುರ  ಹುಲಿ ಸಂರಕ್ಷಿತಾರಣ್ಯದಲ್ಲಿ  ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ಕರ್ನಾಟಕ ಸರ್ಕಾರ ರಾತ್ರಿ ಸಂಚಾರವನ್ನು ನಿಷೇಧ ಮಾಡಲಾಗಿತ್ತು. ಆದರೆ ಕೇರಳ ಸರ್ಕಾರ 2009 ರಿಂದಲೂ ಕೂಡ ರಾತ್ರಿ ಸಂಚಾರ ನಿರ್ಬಂಧ ತೆರವು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿದೆ. ಇದೀಗಾ ಕೇರಳ ಸರ್ಕಾರದ ಧ್ವನಿಗೆ ಈ ಚುನಾವಣೆಯಲ್ಲಿ ಪ್ರಿಯಾಂಕಾ ವಾದ್ರಾ ಹಾಗೂ ರಾಹುಲ್ ಗಾಂಧಿ ಕೂಡ ಧ್ವನಿಗೂಡಿಸಿದ್ದಾರೆ. ವಯನಾಡ್ ನ ಪಡಿಂಜರೆತಾರಾದಲ್ಲಿ ನಡೆದ ಪ್ರಚಾರದ ವೇಳೆ ಭಾಗವಹಿಸಿದ್ದ ಡಿಸಿಎಂ ಡಿಕೆಶಿ ಬಂಡೀಪುರ ರಾತ್ರಿ ಸಂಚಾರ ನಿರ್ಬಂಧ ತೆರವು ಮಾಡುವ ಬಗ್ಗೆ ಮಾತನಾಡಿದ್ದಾರೆ. ಇದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ರೈತರನ್ನ ಎದುರು ಹಾಕಿಕೊಂಡ್ರೆ ನಿಮ್ಮ ಸರ್ಕಾರ ಉಳಿಯಲ್ಲ : ಸಿಎಂ ಸಿದ್ದರಾಮಯ್ಯಗೆ ವಿ ಕೋಡಿಹಳ್ಳಿ ಮತ್ತೆ ವಾರ್ನ್

ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳು, ಆನೆಗಳು, ಚಿರತೆಗಳು ಸೇರಿದಂತೆ ಅಸಂಖ್ಯಾತ ಪ್ರಾಣಿ ಪಕ್ಷಿಗಳ ಆವಾಸಸ್ಥಾನ ಬಂಡೀಪುರ. ಈ ಬಂಡೀಪುರ ಅರಣ್ಯ ಮಾರ್ಗವಾಗಿ ಕೇರಳ ಹಾಗು ತಮಿಳುನಾಡು ರಾಜ್ಯಗಳಿಗೆ ಎರಡು ರಾಷ್ಟ್ರೀಯ ಹೆದ್ದಾರಿಗಳಿವೆ. ಈ ಹೆದ್ದಾರಿಗಳಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅದರಲ್ಲು ರಾತ್ರಿವೇಳೆ ವಾಹನ ಸಂಚಾರ  ವನ್ಯಜೀವಿಗಳ ಪ್ರಾಣಕ್ಕೆ ಕಂಟಕವಾಗಿತ್ತು. ಅರಣ್ಯದೊಳಗೆ ರಸ್ತೆ ದಾಟುವಾಗ ವಾಹನಗಳಿಗೆ ಸಿಲುಕಿ  ಎಷ್ಟೋ ವನ್ಯಜೀವಿಗಳು ಸಾವನ್ನಪ್ಪಿವೆ. ಜೊತೆಗೆ ವಾಹನಗಳ ಕರ್ಕಶ ಶಬ್ಧ ಕಾಡು ಪ್ರಾಣಿಗಳ ಸ್ವಚ್ಛಂದ ವಿಹಾರಕ್ಕೆ ಅಡ್ಡಿಯಾಗಿತ್ತು. ಹಿನ್ನೆಲೆಯಲ್ಲಿ 2009 ರಿಂದ ಬಂಡೀಪುರ ಮಾರ್ಗವಾಗಿ ರಾತ್ರಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಆದರೆ ಇದರಿಂದ  ತನ್ನ ವಾಣಿಜ್ಯ ವಹಿವಾಟುಗಳಿಗೆ ತೊಂದರೆಯಾಗುತ್ತದೆ ಎಂದು ಕೇರಳ ಸರ್ಕಾರ  ರಾತ್ರಿ ವಾಹನ ಸಂಚಾರ ನಿರ್ಬಂಧ ತೆರವುಗೊಳಿಸುವಂತೆ ಕರ್ನಾಟಕದ ಮೇಲೆ ಒತ್ತಡ ಹೇರುತ್ತಲೆ ಬಂದಿದೆ. ಜೊತೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಇನ್ನೂ  ರಾತ್ರಿ ಸಂಚಾರದಿಂದ   ಪ್ರಾಣಿಗಳ  ಪ್ರಾಣಕ್ಕೆ  ಕುತ್ತು  ಬರುತ್ತೆ,  ಅಪಘಾತ   ಪ್ರಕರಣ  ಹಾಗೂ  ಟಿಂಬರ್  ಮಾಫಿಯಾದಂತಹ  ವಿಚಾರಗಳು  ಹೆಚ್ಚುತ್ತೆ  ಅನ್ನೋ ನಿಟ್ಟಿನಲ್ಲಿ ಈಗಾಗ್ಲೇ  ಬಂಡೀಪುರದಲ್ಲಿ ರಾತ್ರಿ ಸಂಚಾರವನ್ನು ನಿರ್ಬಂಧ ಮಾಡಲಾಗಿದೆ. ರಾತ್ರಿ 9 ಗಂಟೆಯಿಂದ  ಬೆಳಗ್ಗೆ 6 ರವರೆಗೂ ತುರ್ತು ಸೇವೆ ವಾಹನಗಳು ಬಿಟ್ಟು ಉಳಿದೆಲ್ಲ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ಆದ್ರೆ ಡಿಸಿಎಂ ಡಿಕೆಶಿ ಓಲೈಕೆ ರಾಜಕಾರಣ ಮಾಡ್ತಿದ್ದಾರೆ ಅಂತಾ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಕೂಡ ರಾತ್ರಿ ಸಂಚಾರಕ್ಕೆ ಅವಕಾಶ ಕೊಡಬಾರದು. ಅವಕಾಶ ಮಾಡಿಕೊಟ್ಟರೆ ಗಡಿಯನ್ನು ಬಂದ್ ಮಾಡಿ ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟಿದ್ದಾರೆ.

'ಮಿಸ್ಟರ್ ಸಿದ್ದರಾಮಯ್ಯ ರೈತರ ಭೂಮಿ ವಾಪಸ್ ಕೊಟ್ರೆ ಸರಿ ಇಲ್ಲದಿದ್ರೆ.., ಸಿಎಂಗೆ ಡೆಡ್‌ಲೈನ್ ಕೊಟ್ಟ ಕೋಡಿಹಳ್ಳಿ ಚಂದ್ರಶೇಖರ್!

ಒಟ್ನಲ್ಲಿ  ಬಂಡೀಪುರ  ರಾತ್ರಿ  ಸಂಚಾರ  ನಿರ್ಬಂಧ ತೆರವು ಆಗುತ್ತಾ ಅನ್ನೋ ವಿಚಾರ ವಿವಾದ ರೂಪ ಪಡೆದಿದೆ. ಯಾವುದೇ ಕಾರಣಕ್ಕೂ ಕೂಡ ರಾತ್ರಿ ಸಂಚಾರ ನಿರ್ಬಂಧ ತೆರವು ಮಾಡದಂತೆ ಸಂಸದ ಯದುವೀರ್ ಹಾಗೂ ಪರಿಸರವಾದಿಗಳು ಆಗ್ರಹಿಸಿದ್ದಾರೆ.  ರಾಜ್ಯ ಸರ್ಕಾರ ಕೇರಳ ಸರ್ಕಾರ ಹಾಗು ಗಾಂಧಿ ಕುಟುಂಬದ ಲಾಬಿಗೆ ಮಣಿಯುತ್ತಾ ಅಥವಾ ರಾತ್ರಿ ಸಂಚಾರ ನಿರ್ಬಂಧ ಮುಂದುವರೆಯುತ್ತಾ ಅನ್ನೋದ್ನ ಕಾದುನೋಡಬೇಕಾಗಿದೆ..

click me!