ಕಾಂಗ್ರೆಸ್ ಪುರಸಭೆ ಸದಸ್ಯನಿಗೆ 'ಫಟಾರ್' ಅಂತ ಏಟು ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್!

By Sathish Kumar KH  |  First Published May 5, 2024, 2:07 PM IST

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚುನಾವಣಾ ಪ್ರಚಾರಕ್ಕೆ ಸವಣೂರಿಗೆ ತೆರಳಿದ್ದ ವೇಳೆ ಪುರಸಭೆ ಸದಸ್ಯ ಹೆಗಲ ಮೇಲೆ ಕೈ ಹಾಕಿದ್ದಾನೆಂದು ಅವರ ಮೇಲೆ ಹಲ್ಲೆ ಮಾಡಿದ್ದಾರೆ.


ಹಾವೇರಿ (ಮೇ 05): ರಾಜ್ಯಾದ್ಯಂತ ಲೋಕಸಭಾ ಚುನಾವಣೆ ಕಾವು ಹೆಚ್ಚಾಗೊದ್ದು, ಪ್ರಚಾರ ಕಾರ್ಯಕ್ಕೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೆಗಲ ಮೇಲೆ ಕೈ ಹಾಕಿದ ಪುರಸಭೆ ಸದಸ್ಯನಿಗೆ 'ಫಟಾರ್' ಎಂದು ಬಾರಿಸಿದ್ದಾರೆ. ನಂತರ, ಡಿಸಿಎಂ ಅಂಗ ರಕ್ಷಕರು ಹಾಗೂ ಭದ್ರತಾ ಪೊಲೀಸರು ಕಾರ್ಯಕರ್ತನನ್ನು ಹಿಂದಕ್ಕೆ ಕಳುಹಿಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಪರವಾಗಿ ಪ್ರಚಾರ ಕಾರ್ಯಕ್ಕೆ ತೆರಳಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಸ್ವಾಗತಿಸಲು ನೂರಾರು ಕಾರ್ಯಕರ್ತರು ಕಾಯುತ್ತಿದ್ದರು. ಈ ವೇಳೆ ಕಾಂಗ್ರೆಸ್ ಪರವಾಗಿ ಹಾಗೂ ಡಿಕೆಶಿ ಪರವಾಗಿ ಘೋಷಣೆ ಕೂಗುತ್ತಿದ್ದ ಕೈ ಕಾರ್ಯಕರ್ತರಿರುವ ಸ್ಥಳಕ್ಕೆ ಆಗಮಿಸಿದ ಡಿ.ಕೆ. ಶಿವಕುಮಾರ್ ಕಾರಿನಿಂದ ಇಳಿದು ಕೆಳಗೆ ಬಂದಿದ್ದಾರೆ. ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಹಳದಿ ಶರ್ಟ್‌ ಧರಿಸಿದ ಸ್ಥಳೀಯ ಕಾಂಗ್ರೆಸ್ ನಾಯಕ ಹಾಗೂ ಸವಣೂರು ಪಟ್ಟಣ ಪುರಸಭೆ ಸದಸ್ಯ ಅಲ್ಲಾವುದ್ದೀನ್ ಮನಿಯಾರ್‌ ಅವರು ಡಿ.ಕೆ. ಶಿವಕುಮಾರ್ ಅವರ ಹೆಗಲ ಮೇಲೆ ಕೈ ಹಾಕಿದ್ದಾರೆ. ಆಗ ಅಲ್ಲಾವುದ್ದೀನನನ್ನು ಗುರಾಯಿಸಿ ನೋಡಿದ ಡಿ.ಕೆ.ಶಿವಕುಮಾರ್ ಅವರು ಫಟಾರ್ ಎಂದು ಏಟು ಕೊಟ್ಟಿದ್ದಾರೆ.

Tap to resize

Latest Videos

ಜನರ ಕೈಗೆ ಮೋದಿ ಸರ್ಕಾರದ ಚೊಂಬು: ಡಿ.ಕೆ. ಶಿವಕುಮಾರ್‌

ಈ ಘಟನೆಯು ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಶನಿವಾರ ರಾತ್ರಿ ವೇಳೆ ನಡೆದಿದೆ. ಕೈ ಅಭ್ಯರ್ಥಿ ‌ವಿನೋದ ಅಸೂಟಿ ಪರ ಪ್ರಚಾರಕ್ಕೆ ಬಂದಿದ್ದ ವೇಳೆ ಪುರಸಭೆ ಸದಸ್ಯ ಅಲ್ಲಾವುದ್ದೀನ್ ಮನಿಯಾರ್ ಅವರಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕಾರ್ಯಕರ್ತರಿಂದ ರಕ್ಷಣೆಯಾಗಲೆಂದು ಹಿಂದೆ ಕೈ ಅಡ್ಡ ಹಿಡಿದಿದ್ದಾರೆ. ಆಗ ಕಾರ್ಯಕರ್ತರ ನೂಕಾಟ ಹಾಗೂ ತಳ್ಳಾಟದಲ್ಲಿ ಪುರಸಭೆ ಸದಸ್ಯನ ಕೈ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೆಗಲ ಮೇಲೆ ಹೋಗಿದೆ. ಕೂಡಲೇ ಇದನ್ನು ಗಮನಿಸಿ ಒಂದು ಏಟು ಕೊಟ್ಟಿದ್ದಾರೆ. ಕೂಡಲೇ ಅಲ್ಲಿದ್ದ ಪೊಲೀಸರು ಪುರಸಭೆ ಸದಸ್ಯನಿಗೆ ಮತ್ತೊಂದೆರಡು ಏಟು ಕೊಟ್ಟು ಹಿಂದಕ್ಕೆ ತಳ್ಳಿದ್ದಾರೆ.

ಬುಸ್ ಬುಸ್ ನಾಗಪ್ಪ ಎಲ್ಲಿದ್ದೀಯಪ್ಪಾ..? ಬಿಸಿಲಿನ ತಾಪ ತಾಳಲಾರದೇ ನಿನ್ ಸ್ಕೂಟರ್ ಸೀಟ್ ಕೆಳಗೆ ಕೂತಿದ್ದೀನಪ್ಪಾ..

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ: ಹಾವೇರಿ ಜಿಲ್ಲೆ ಸವಣೂರಿನಲ್ಲಿ ನಡೆದ ಹಲ್ಲೆಯ ವಿಡಿಯೋ ಈಗ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೆಲವರು ಡಿ.ಕೆ. ಶಿವಕುಮಾರ್ ಅವರ ಮೇಲೆ ಆಕ್ರೋಶ ಹೊರ ಹಾಕಿದರೆ, ಇನ್ನು ಕೆಲವರು ಅವರನ್ನು ಸಪೋರ್ಟ್ ಮಾಡಿದ್ದಾರೆ. ರಾಜಕೀಯ ವ್ಯಕ್ತಿಗಳು, ಹಿರಿಯ ನಾಯಕರು ಹಾಗೂ ಉಪ ಮುಖ್ಯಮಂತ್ರಿ ಎಂಬ ಗೌರವ ಇಲ್ಲದೇ ಕೈ ಹಾಕಿ ಉಡಾಫೆ ವರ್ತನೆ ತೋರಿದ ವ್ಯಕ್ತಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

click me!