ರಾಜ್ಯವು ಬರಗಾಲದ ಛಾಯೆಯಲ್ಲಿದ್ದು, ಪರಿಹಾರಕ್ಕೆ ಕೇಂದ್ರ ಸರ್ಕಾರದ ನಿರೀಕ್ಷೆಯಲ್ಲಿದ್ದೇವೆ. ಒತ್ತಡ ತಂದು ತರುವ ಕೆಲಸ ಮಾಡಬೇಕೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.
ಹಾಸನ (ನ.12): ರಾಜ್ಯವು ಬರಗಾಲದ ಛಾಯೆಯಲ್ಲಿದ್ದು, ಪರಿಹಾರಕ್ಕೆ ಕೇಂದ್ರ ಸರ್ಕಾರದ ನಿರೀಕ್ಷೆಯಲ್ಲಿದ್ದೇವೆ. ಒತ್ತಡ ತಂದು ತರುವ ಕೆಲಸ ಮಾಡಬೇಕೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ಹಾಸನಾಂಬೆ ದರ್ಶನದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಚಿವರು, ಹಾಸನಾಂಬೆ ದೇವಿ ದರ್ಶನಕ್ಕೆ ಮೊದಲ ಬಾರಿಗೆ ಆಗಮಿಸಿದ್ದೇನೆ. ನಮ್ಮ ನಾಡಿನ ಜನರಿಗೆ ಒಳ್ಳೆಯದಾಗಲಿ ಅಂತ ಪ್ರಾರ್ಥಿಸಿದ್ದೇನೆ. ಮಂತ್ರಿಯಾದ ಬಳಿಕ ಪ್ರಥಮ ಬಾರಿಗೆ ಹಾಸನಕ್ಕೆ ಆಗಮಿಸಿದ್ದೇನೆ. ನಾಡಿನಲ್ಲಿ ಬರಗಾಲದ ಛಾಯೆ ಇದೆ. ಮಳೆ ಎಲ್ಲ ಕಡೆ ಚೆನ್ನಾಗಿ ಆಗಲಿ ಅಂತಾ ಬೇಡಿದ್ದೇನೆ. ನಾಡಿನ ಜನರಿಗೆ ಒಳ್ಳೆಯ ಆಡಳಿತ ನಡೆಸುವ ಶಕ್ತಿ ಕೊಡಲಿ ಅಂತ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಪರಿಹಾರ ಏನು ಬಂದಿಲ್ಲ. ರಾಜ್ಯ ಸರ್ಕಾರ ಅಗತ್ಯವಾದ ಹಣವನ್ನು ಜಿಲ್ಲಾಧಿಕಾರಿ ಖಾತೆಯ ಹಣವನ್ನು ಬಳಸಿಕೊಂಡಿದ್ದೇವೆ. ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಏನು ಮಾಡಬೇಕೋ ಅವೆಲ್ಲವನ್ನೂ ಮಾಡಿದ್ದೇವೆ. ಪರಿಹಾರದ ಹಣಕ್ಕಾಗಿ ಕೇಂದ್ರ ಸರ್ಕಾರದ ನಿರೀಕ್ಷೆಯಲ್ಲಿದ್ದೇವೆ. ಬಿಜೆಪಿಯ ಸಚಿವರು ಕೇಂದ್ರ ಸರ್ಕಾರದಿಂದ ಹಣವನ್ನು ತರಿಸುವ ಪ್ರಯತ್ನ ಮಾಡಬೇಕು. ರಾಜಕಾರಣ ಮಾಡೋದಕ್ಕೆ ಹೇಳಬಾರದು ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್ ಮುಖಂಡರಾದ ಗೋಪಾಲಸ್ವಾಮಿ, ಎಚ್.ಕೆ. ಮಹೇಶ್, ಪಟೇಲ್ ಶಿವಪ್ಪ, ರಘು, ರಂಜಿತ್ ಉಪಸ್ಥಿತರಿದ್ದರು.
undefined
ಬಿಜೆಪಿಯಲ್ಲಿ ಬಿಎಸ್‌ವೈ, ಶೆಟ್ಟರ್, ಈಗ ಡಿವಿಎಸ್ ಕಡೆಗಣನೆ: ರೇಣುಕಾಚಾರ್ಯ ಕಿಡಿ
ಪರಿಹಾರ ನೀಡುವುದು ಕೇಂದ್ರದ ಜವಾಬ್ದಾರಿ: ಶೋಭಾ ಕರಂದ್ಲಾಜೆ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಚಿಕ್ಕಮಗಳೂರು ಎಂಪಿ ಆಗಿದ್ದಾರೆ ಅಲ್ಲಿಯೂ ಕೂಡ ಬರಗಾಲ ಇದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ತರಬೇಕು. ಬರಗಾಲಕ್ಕೆ ಹಣ ಕೊಡೋದು ಕೇಂದ್ರ ಸರ್ಕಾರದ ಜವಾಬ್ದಾರಿ. ಕರ್ನಾಟಕ ಕೇಂದ್ರಕ್ಕೆ ಹಣ ಕೊಡೋದರಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಆರೋಪಿಸಿದರು.
ಮನುಷ್ಯರಿಗೆ ಝೀಕಾ ಗಂಭೀರವಾಗಿ ಬಾಧಿಸಲ್ಲ: ರಾಜ್ಯದಲ್ಲಿ ಯಾರಿಗೂ ಝೀಕಾ ಸೋಂಕು ದೃಢಪಟ್ಟಿಲ್ಲ. ಸೊಳ್ಳೆಗಳಲ್ಲಿ ವೈರಸ್ ಪತ್ತೆಯಾಗಿದ್ದು, ಇದು ಮನುಷ್ಯರಲ್ಲಿ ಗಂಭೀರವಾಗಿ ಬಾಧಿಸುವುದಿಲ್ಲ. ಹೀಗಾಗಿ ಆತಂಕ ಬೇಡ. ಬದಲಿಗೆ ಎಚ್ಚರಿಕೆ ಇರಲಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಪಾ ವೈರಸ್‌ನಂತೆ ಝೀಕಾ ವೈರಸ್ ಗಂಭೀರವಾಗಿ ಕಾಡುವುದಿಲ್ಲ. ಸೋಂಕು ಪತ್ತೆಯಾಗಿರುವ ವ್ಯಾಪ್ತಿಯಲ್ಲಿ ಆಸ್ಪತ್ರೆಯಲ್ಲಿರುವವರಿಗೆ ಸೋಂಕು ಪರೀಕ್ಷೆ ನಡೆಸಲಾಗುವುದು. ಮುಂದಿನ ಮೂರು ದಿನದಲ್ಲಿ ವರದಿ ಬರುವ ಸಾಧ್ಯತೆಯಿದೆ. ಆರೋಗ್ಯ ಇಲಾಖೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿದ್ದು, ಆತಂಕ ಬೇಕಾಗಿಲ್ಲ ಎಂದು ಹೇಳಿದರು.
ಇವಿ ನೀತಿ ಕ್ಲೀನ್ ಮೊಬಿಲಿಟಿ ನೀತಿಯಾಗಿ ಮಾರ್ಪಾಟು: ಸಚಿವ ಎಂ.ಬಿ.ಪಾಟೀಲ್
ಝೀಕಾ ವೈರಸ್ ದೃಢಪಟ್ಟಿದೆ: ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮಾತನಾಡಿ, 10 ದಿನದ ಹಿಂದೆಯೇ ಚಿಕ್ಕಬಳ್ಳಾಪುರದಲ್ಲಿ ವೈರಸ್ ದೃಢಪಟ್ಟಿತ್ತು. ಇದ್ನು ಪುಣೆಯ ಪ್ರಯೋಗಾಲಯಕ್ಕೆ ಕಳಹಿಸಿದ್ದು, ಅಲ್ಲೂ ದೃಢಪಟ್ಟಿದೆ. ಹೀಗಾಗಿ ಮೂರು ಗ್ರಾಮಗಳ ವ್ಯಾಪ್ತಿಯಲ್ಲಿ ಈಗಾಗಲೇ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಅಲ್ಲಿನ 2 ಸಾವಿರ ಮನೆಗಳಿಂದ ಜ್ವರದ ಮಾದರಿಗಳನ್ನು ಸಂಗ್ರಹಿಸಿ ಪುಣೆಗೆ ಕಳಹಿಸಲಾಗಿದೆ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದರು.