ಹೈಕಮಾಂಡನ್ನು ಪ್ರಶ್ನಿಸುವಷ್ಟು ಎತ್ತರಕ್ಕೆ ಬೆಳೆದಿಲ್ಲ: ಸಚಿವ ಡಾ.ಎಂ.ಸಿ.ಸುಧಾಕರ್‌

Published : Mar 06, 2026, 08:21 PM IST
Dr MC Sudhakar

ಸಾರಾಂಶ

ನಾವು ಹೈಕಮಾಂಡನ್ನೇ ಪ್ರಶ್ನಿಸುವಷ್ಟು ದೊಡ್ಡವರಲ್ಲ. ಜ್ಯೋತಿಷ್ಯ ಹೇಳಲು ನನಗೆ ಬರುವುದಿಲ್ಲ. ಒಂದು ಮಾತು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು.

ಚಿಂತಾಮಣಿ (ಮಾ.06): ನಾವು ಹೈಕಮಾಂಡನ್ನೇ ಪ್ರಶ್ನಿಸುವಷ್ಟು ದೊಡ್ಡವರಲ್ಲ. ಜ್ಯೋತಿಷ್ಯ ಹೇಳಲು ನನಗೆ ಬರುವುದಿಲ್ಲ. ಒಂದು ಮಾತು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ಏನೇ ತೀರ್ಮಾನ ಕೈಗೊಳ್ಳಲಿದೆಯೋ ಅದಕ್ಕೆ ಅವರು ಬದ್ಧವಾಗಿರುವುದಾಗಿ ತಿಳಿಸಿದ್ದಾರೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು.

ನಗರದ ಮಹಿಳಾ ಕಾಲೇಜಿನ ನೂತನ ಕಟ್ಟಡ ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ 6 ವರ್ಷ ಪೂರೈಸಿದ್ದು ಈ ಹಿನ್ನೆಲೆಯಲ್ಲಿ ಔತಣಕೂಟವನ್ನು ಏರ್ಪಡಿಸಿದ್ದಾರೆಂಬ ವಿಚಾರವನ್ನು ನಾನು ಪತ್ರಿಕೆಗಳ ಮೂಲಕ ಹಾಗೂ ಮಾಧ್ಯಮಗಳ ಮೂಲಕ ತಿಳಿಸಿದ್ದೇನೆ. 5 ವರ್ಷ ಪೂರೈಸಿದಾಗಲೂ ಅವರು ಔತಣಕೂಟವನ್ನು ಏರ್ಪಡಿಸಿದ್ದರು. ಆದರಲ್ಲಿ ವಿಶೇಷತೆ ಏನೂ ಇಲ್ಲವೆಂದರು.

ಪೋನ್ ಕದ್ದಾಲಿಕೆ

ಪೋನ್ ಕದ್ದಾಲಿಕೆ ಬಗ್ಗೆ ಪ್ರಶ್ನಿಸಿದಾಗ ವಿರೋಧ ಪಕ್ಷದವರಿಗೆ ಏನಾದರೂ ಒಂದು ವಿಚಾರದ ಅವಶ್ಯಕತೆ ಇದ್ದು ಕಳೆದ ವರ್ಷವೂ ಈ ವಿಚಾರದ ಬಗ್ಗೆ ಸುದ್ದಿಗಳು ಬಿತ್ತರವಾಗಿದೆ. ಆದರೆ ಪೋನ್ ಕದ್ದಾಲಿಕೆ ಬಗ್ಗೆ ಗೃಹಮಂತ್ರಿಗಳು ಸ್ಪಷ್ಟನೆಯನ್ನು ಸಹಾ ನೀಡಿದ್ದರು ಎಂದರು.

ಪ್ರಧಾನಿ ಮೋದಿರ ನಿರ್ಧಾರಗಳು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಟಿಪ್ಪಣಿಗೆ ಗುರಿಯಾಗಿದೆ. ಅಮೇರಿಕಾ ದೇಶದ ಜೊತೆಗೆ ಪ್ರಧಾನಮಂತ್ರಿಗಳು ಶಿರಭಾಗಿ ಅವರ ಷರತ್ತುಗಳಿಗೆ ಒಪ್ಪಿಕೊಂಡು ದೇಶದ ಘನತೆ ಗೌರವವನ್ನು ಯಾವ ಮಟ್ಟಕ್ಕೆ ತಂದಿದ್ದಾರೆಂಬುದನ್ನು ಜನತೆಗೆ ತಿಳಿಸಲು, ಉತ್ತರಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಈ ವಿಚಾರವನ್ನು ಬೇರೆಡೆ ಸೆಳೆಯುವ ಪ್ರಯತ್ನವನ್ನು ನಡೆಯುತ್ತಿವೆ. ಭಾರತವೊಂದು ಜಾತ್ಯಾತೀತ ರಾಷ್ಟ್ರವಾಗಿದ್ದು ಇಲ್ಲಿನ ಜನತೆ ಶಾಂತಿ, ಗೌರವ, ನೆಮ್ಮದಿಯ ಜೀವನ ನಡೆಸಲು ಅಪೇಕ್ಷಿಸುತ್ತಾರೆಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು: ಡಿ.ಕೆ.ಶಿವಕುಮಾರ್
ಸಿದ್ದರಾಮಯ್ಯಗೆ ರಾಜಕೀಯ ಆಪತ್ತು ಬಂದಾಗ ಅಷ್ಟೇ ಅಹಿಂದ ನೆನಪು: ಎಚ್‌.ಡಿ.ಕುಮಾರಸ್ವಾಮಿ