ಲೋಕಸಭಾ ಚುನಾವಣೆಯಲ್ಲಿ ಡಾ.ಮಂಜುನಾಥ್ ಹರಕೆಯ ಕುರಿಯಾಗುತ್ತಿದ್ದಾರೆ: ಬಾಲಕೃಷ್ಣ

By Govindaraj SFirst Published Mar 14, 2024, 6:23 AM IST
Highlights

ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಡಾ.ಮಂಜುನಾಥ್ ಹರಕೆಯ ಕುರಿಯಾಗುತ್ತಿದ್ದಾರೆ ಎಂದು ಬಾಲಕೃಷ್ಣ ಟೀಕಿಸಿದರು. ಮಾಗಡಿಯಲ್ಲಿ ಮಾತನಾಡಿದ ಅವರು, ಡಾ. ಮಂಜುನಾಥ್ ಅವರ ಪತ್ನಿ ರಾಜಕೀಯಕ್ಕೆ ಬರುವುದು ಬೇಡ ಎಂದು ಕಣ್ಣೀರು ಹಾಕಿದ್ದರೂ ಹರಕೆ ಕುರಿಯಂತೆ ಅವರನ್ನು ರಾಜಕಾರಣಕ್ಕೆ ತರುತ್ತಿದ್ದಾರೆ. 
 

ಮಾಗಡಿ (ಮಾ.14): ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಯಲ್ಲಿ ಡಾ.ಮಂಜುನಾಥ್ ಹರಕೆಯ ಕುರಿಯಾಗುತ್ತಿದ್ದಾರೆ ಎಂದು ಬಾಲಕೃಷ್ಣ ಟೀಕಿಸಿದರು. ಮಾಗಡಿಯಲ್ಲಿ ಮಾತನಾಡಿದ ಅವರು, ಡಾ. ಮಂಜುನಾಥ್ ಅವರ ಪತ್ನಿ ರಾಜಕೀಯಕ್ಕೆ ಬರುವುದು ಬೇಡ ಎಂದು ಕಣ್ಣೀರು ಹಾಕಿದ್ದರೂ ಹರಕೆ ಕುರಿಯಂತೆ ಅವರನ್ನು ರಾಜಕಾರಣಕ್ಕೆ ತರುತ್ತಿದ್ದಾರೆ. 

ಎಚ್.ಡಿ.ಕುಮಾರಸ್ವಾಮಿ ಅವರಿಗಿಂತ ಮಂಜುನಾಥ್‌ ಅವರು ಬಲಿಷ್ಠರಾಗಿದ್ದಾರಾ? ಎಂದು ಪ್ರಶ್ನಿಸಿದರು. ರಾಜಕೀಯ ರಂಗವೇ ಬೇರೆ ವೈದ್ಯಕೀಯ ರಂಗವೇ ಬೇರೆಯಾಗಿದೆ. ಮನೆಮನೆಗೂ ಮಂಜುನಾಥ್ ಬರಲು ಸಾಧ್ಯವಿಲ್ಲ, ಸಂಸದ ಡಿ.ಕೆ.ಸುರೇಶ್ ಮನೆಮನೆಗೂ ಬಂದು ಯಾವ ರೀತಿ ಅಭಿವೃದ್ಧಿ ಮಾಡಬೇಕೆಂದು ತೋರಿಸಿದ್ದಾರೆ ಎಂದರು. ಡಾಕ್ಟರ್, ಇಂಜಿನಿಯರ್‌, ಕಾಂಪೌಂಡರ್, ಯಾರೇ ಬಂದರೂ ನಮ್ಮ ಚುನಾವಣೆಯನ್ನು ನಾವು ಸಮರ್ಥವಾಗಿ ಎದಿರುಸುತ್ತೇವೆ ಎಂದು ಹೇಳಿದರು.

ರಾಜ್ಯದ ಎಲ್ಲಾ ಬಿಜೆಪಿ ಸಂಸದರು ಕಳ್ಳೆತ್ತುಗಳು: ಸಿಎಂ ಸಿದ್ದರಾಮಯ್ಯ

ಮಾಗಡಿ ಕ್ಷೇತ್ರದಲ್ಲಿ 10 ಸಾವಿರ ನಿವೇಶನ ಹಂಚಿಕೆ ಗುರಿ: ತಾಲೂಕಿನಲ್ಲಿ 4 ವರ್ಷದಲ್ಲಿ 10 ಸಾವಿರ ನಿವೇಶನ ಹಂಚುವ ಗುರಿ ಇಟ್ಟುಕೊಂಡಿದ್ದು ಮೊದಲ ಹಂತವಾಗಿ ಕಲ್ಲುದೇವನಹಳ್ಳಿ ಗ್ರಾಮದಲ್ಲಿ 12 ಎಕರೆಯಲ್ಲಿ 260 ನಿವೇಶನಗಳನ್ನು ವಸತಿ ರಹಿತ ಕುಟುಂಬಗಳಿಗೆ ಹಂಚಲಾಗುತ್ತದೆಂದು ಸಂಸದ ಡಿ.ಕೆ.ಸುರೇಶ್ ಹೇಳಿದರು. ತಾಲೂಕಿನ ಸೀಗೇಕುಪ್ಪೆ ಗ್ರಾಪಂ ವ್ಯಾಪ್ತಿಯ ಕಲ್ಲುದೇವನಹಳ್ಳಿ ಗ್ರಾಮದಲ್ಲಿ ವಸತಿ ರಹಿತರಿಗೆ ಬಡಾವಣೆ ನಿರ್ಮಿಸಿ ಉಚಿತ ನಿವೇಶನ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾನು ಪ್ರವಾಸ ಬಂದಾಗ ಸಾಕಷ್ಟು ಫಲಾನುಭವಿಗಳು ಮನೆಗಾಗಿ ಅರ್ಜಿ ಸಲ್ಲಿಸಿದ್ದರು. ಆಗ ನಮ್ಮ ಕಾರ್ಯಕರ್ತರಿಗೆ ಹಾಗೂ ತಹಸೀಲ್ದಾರರಿಗೆ ಸರ್ಕಾರಿ ಜಾಗ ಹುಡುಕುವಂತೆ ಸೂಚನೆ ಕೊಟ್ಟಿದ್ದೆ. ಅದರಂತೆ ಕಲ್ಲುದೇವನಹಳ್ಳಿ ಗ್ರಾಮದಲ್ಲಿ 12 ಎಕರೆ ಜಾಗ ಹುಡುಕಿದ್ದು 30*30 ಅಳತೆಯ ನಿವೇಶನಗಳನ್ನು ಬಡವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. 60 ಅಡಿ ವಿಸ್ತಾರದ ರಸ್ತೆ, ಸುಸಜ್ಜಿತ ಬಡಾವಣೆ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ತಾಲೂಕಾದ್ಯಂತ 112 ಎಕರೆ ಜಾಗ ಗುರುತಿಸಿದ್ದು ನನಗೆ ಮಾಗಡಿ ತಾಲಕಿನಲ್ಲಿ 350 ಎಕರೆ ಜಾಗ ಗುರುತಿಸುವಂತೆ ತಹಶೀಲ್ದಾರ್ ಅವರಿಗೆ ತಿಳಿಸಲಾಗಿದೆ.

1 ಎಕರೆಗೆ 20 ಲಕ್ಷ ಇರಬಹುದು ಅಲ್ಲವಾ ಎಂದು ಸಾರ್ವಜನಿಕರನ್ನು ಕೇಳಿದಾಗ 50 ಲಕ್ಷ ಎಕರೆಗೆ ಮಾರಾಟವಾಗುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಂತೆ ರಾಮ ರಾಮ ಇಷ್ಟು ಬೆಲೆ ಬಾಳುತ್ತೆ ಎಂದರೆ 1 ಸೈಟಿಗೆ ಎಷ್ಟು ಬೆಲೆ ಬಾಳಬಹುದು ಮೊದಲು ಬಡವರಿಗೆ ಹಂಚಿ ನಂತರ ನಮ್ಮ ನಾಯಕರು ಹಂಚಿಕೊಳ್ಳಲಿ ಅಂದರೆ ನಾಯಕರು ಇಟ್ಟುಕೊಳ್ಳಿ ಎಂದು ಅರ್ಥವಲ್ಲ, ಬಡವರನ್ನು ಗುರುತಿಸಿ ಹಂಚಿ ಎಂದು ಹೇಳಿದ್ದೇನೆಂದು ಉತ್ತರಿಸಿದರು.

ಜೆಡಿಎಸ್ ಎಲ್ಲಿದೆ? ಬಿಜೆಪಿ ಸ್ಪೋಕ್ಸ್ ಪರ್ಸನ್ ಆದ ಕುಮಾರಸ್ವಾಮಿ: ಡಿ.ಕೆ.ಶಿವಕುಮಾರ್

ಕಾಂಗ್ರೆಸ್ ಪಕ್ಷ ಬಡವರ ಪಕ್ಷವಾಗಿದ್ದು, ಇಂದಿರಾ ಗಾಂಧಿಯವರ ಅವಧಿಯಿಂದ ಪಿಂಚಣಿ ಕೊಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳು ಜಾರಿಯಾದ ಮೇಲೆ ಪಿಂಚಣಿ ನಿಲ್ಲಿಸುತ್ತಾರೆಂದು ಬಿಜೆಪಿಯವರು ಹೇಳಿದ್ದರು. ನಮ್ಮ ಯಾವ ಯೋಜನೆಯೂ ನಿಲ್ಲುವುದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಡಳಿತದಲ್ಲಿ ಬಡವರ ಪರವಾಗಿ ನಿಲ್ಲುತ್ತೇವೆ. ರಾಮನಗರಲ್ಲಿ 350 ಎಕರೆ, ಕುಣಿಗಲ್ 250 ಎಕರೆ ಜಾಗ ಗುರುತಿಸಿ ನಿವೇಶನ ಹಂಚಲಾಗುತ್ತದೆ ಎಂದು ಸಂಸದರು ತಿಳಿಸಿದರು.

click me!