ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ, ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ಅಶ್ವತ್ಥ ನಾರಾಯಣ್

By Govindaraj S  |  First Published May 31, 2024, 7:42 PM IST

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದ ನೈತಿಕ ಹೊಣೆ ಹೊತ್ತು ಹಣಕಾಸು ಖಾತೆಯ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಆಗ್ರಹಿಸಿದರು. 
 


ಮೈಸೂರು (ಮೇ.31): ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದ ನೈತಿಕ ಹೊಣೆ ಹೊತ್ತು ಹಣಕಾಸು ಖಾತೆಯ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ್ ಆಗ್ರಹಿಸಿದರು. ನಗರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹದಿನೈದು ಬಾರಿ ಆಯವ್ಯಯ ಮಂಡಿಸಿರುವುದಾಗಿ ಹೇಳುತ್ತಾರೆ. ಆದರೆ ಹಣ ವರ್ಗಾವಣೆ ಆಗಿರುವುದು ಗೊತ್ತಿಲ್ಲವೇ?ನಿಮ್ಮ ಮೂಗಿನಡಿಯೇ ಭ್ರಷ್ಟಾಚಾರ ನಡೆದಿರುವುದರಿಂದ ಆತ್ಮಸಾಕ್ಷಿ ಇದ್ದರೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಪೇ ಸಿಎಂ ಎಂದು ಬಿಜೆಪಿ ವಿರುದ್ಧ ಸುಳ್ಳು ಹೇಳಿಕೊಂಡು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂತು. ಆದರೆ, ಕಾಂಗ್ರೆಸ್ ಆಡಳಿತದ ಒಂದು ವರ್ಷದಲ್ಲಿ ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆ ಮಾಡಿದೆ. ಗ್ಯಾರಂಟಿ ಹೆಸರಿನಲ್ಲಿ ಅನುದಾನ ದುರ್ಬಳಕೆ, ಭ್ರಷ್ಟಾಚಾರ, ಕೊಲೆ, ಸುಲಿಗೆ ಪ್ರಕರಣ ಹೆಚ್ಚಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

Latest Videos

undefined

ಮೈತ್ರಿಕೂಟದ ಅಭ್ಯರ್ಥಿ ರಿಯಲ್ ಎಸ್ಟೇಟ್ ಉದ್ಯಮಿ: ಸಚಿವ ಚಲುವರಾಯಸ್ವಾಮಿ ಲೇವಡಿ

ಕಾಂಗ್ರೆಸ್ ಆಡಳಿತದಲ್ಲಿ ಯಾವುದೇ ಕೆಲಸಗಳೂ ನಡೆಯದೆ ಸಂಪೂರ್ಣ ವಿಫಲವಾಗಿದೆ. ದಿನವೂ ಬೆಳಗ್ಗೆ ಎದ್ದಾಕ್ಷಣ ಬರೀ ಲೂಟಿ ಮಾಡುವುದಕ್ಕೆ ಸೀಮಿತವಾಗಿದೆ. ಅಧಿಕಾರಿಯ ಆತ್ಮಹತ್ಯೆ ಸಂಬಂಧ ಸಚಿವರ ವಿರುದ್ಧ ಸಿಎಂ ಸಾಕ್ಷಿ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಸಾಕ್ಷಿ ಕೇಳಿದರೂ ಕೂಡ ನೂರು ಸಾಕ್ಷಿ ಇದೆ. ಸಚಿವರ ವಿರುದ್ಧ ಸತ್ಯವನ್ನು ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಎಂ ಸಚಿವ ಸಂಪುಟದ ಸದಸ್ಯರು ಮಾಯವಾಗಿದ್ದಾರೆ. ಯಾಕೆ ಮೌನವಾಗಿದ್ದಾರೆ? ನಿಮ್ಮ ಧ್ವನಿ ಎಲ್ಲಿ ಹೋಯಿತು ಎಂದು ಅವರು ಪ್ರಶ್ನಿಸಿದರು. ಪೊಲೀಸ್ ಅಧಿಕಾರಿಗಳು ನೇರವಾಗಿ ಆರೋಪ ವಾಡಿದ ಅಧಿಕಾರಿಗಳ ಬಿಟ್ಟು ಬ್ಯಾಂಕ್ ಅಧಿಕಾರಿಗಳ ಮೇಲೆ ವಾತ್ರ ಎಫ್ ಐಆರ್ ದಾಖಲು. 

ಬಡವರ ಬಂಧು,ದಲಿತರ ಬಂಧು ಪ್ರಾವಾಣಿಕ ರಾಜಕಾರಣ ವಾಡಿಕೊಂಡು ಬಂದಿದ್ದೇನೆ ಅಂತ ಹೇಳುತ್ತಿರುವ ಸಿದ್ದರಾಮಯ ದಲಿತರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಅನುದಾನವನ್ನು ದುರುಪೋಂಗ ವಾಡಿಕೊಂಡಿದ್ದಾರೆ ಎಂದು ಹರಿಹಾಯ್ದರು. ಆರ್ಥಿಕ ಇಲಾಖೆುಂ ಗಮನಕ್ಕೆ ಬಾರದೆ ನಡೆುಂಲ್ಲ. ಸಿಎಂ ಮೇಲೆ ಆರೋಪ ಬರುತ್ತಿದೆ.ತಕ್ಷಣವೇ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು. ಆರ್ಥಿಕ ಇಲಾಖೆಯ ಗಮನಕ್ಕೆ ಬಾರದೆ ವ್ಯವಹಾರ ನಡೆುಂಲ್ಲ.ನೇರವಾಗಿ ಹಣ ಬಿಡುಗಡೆ ವಾಡಿರುವ ಕಾರಣ ಆತ್ಮಸಾಕ್ಷಿಗೆ ಅನುಗುಣವಾಗಿ ರಾಜೀನಾಮೆ ನೀಡಬೇಕು. ಜೂನ್ ಆರರೊಳಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.ಇಲ್ಲದಿದ್ದರೆ ಉಗ್ರ ಹೋರಾಟ ವಾಡಲಾಗುವುದು ಎಂದು ಎಚ್ಚರಿಸಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರನ್ನು ವಜಾಗೊಳಿಸಿ ಬಂಧಿಸಬೇಕು. ಭಂಡತನದಿಂದ ವರ್ತಿಸದೆ ನೈತಿಕತೆ ಪ್ರದರ್ಶಿಸಬೇಕು. ಇಲ್ಲವಾದರೆ ದಲಿತರು ಹಿಂದುಳಿದವರ ಹೆಸರನ್ನು ಹೇಳಲು ನಿಮಗೆ ನೈತಿಕತೆ ಇಲ್ಲ. ಇದು ಭಂಡಗೆಟ್ಟ, ನಾಚಿಗೆಟ್ಟ ಸರ್ಕಾರವಾಗಿದೆ. ಮಾತೆತ್ತಿದರೆ ಜೈಲಿಗೆ ಹೋದವರೆಂದು ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಯಾವಾಗ ಜೈಲಿಗೆ ಹೋಗುತ್ತಾರೆ ಎಂದು ಅವರು ಪ್ರಶ್ನಿಸಿದರು.

ರಾಜ್ಯದಲ್ಲಿ ಕೆಟ್ಟ ಸರ್ಕಾರ ಅಧಿಕಾರಕ್ಕೆ ಬಂದಿದೆ. ಚೆಂಬು ಹಿಡಿದುಕೊಂಡು ಹೋಗುವ ಪರಿಸ್ಥಿತಿ ಬರುತ್ತಿದೆ. ಅವರ ಪಾಪದ ಕೊಡ ತುಂಬಿಕೊಂಡು ಬಂದಾಗ ಅಧಿಕಾರದಿಂದ ಇಳಿಯುತ್ತಾರೆ. ಆದರೆ ಈಗ ಸರ್ಕಾರ ಬದುಕಿದೆಯೋ, ಸತ್ತಿದೆಯೋ ಗೊತ್ತಿಲ್ಲ. ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಕಾಂಗ್ರೆಸ್‌ ಗೆ ಮುಜುಗರವಾಗಬೇಕು ಅಷ್ಟೆ. ವಿದೇಶಕ್ಕೆ ಅವರೇ ಕಳುಹಿಸಿದ್ದಾರೆ. ಎಲ್ಲಾ ವಿಚಾರ ಗೊತ್ತಿದ್ದರೂ ಯಾಕೆ ಸುಮ್ಮನಿದ್ದರು. ವಿಡಿಯೋ ಮಾಡಿದ್ದು ಎಷ್ಟು ಗಂಭೀರ ವಿಷಯವೋ, ಹಾಗೆಯೇ ಹಂಚಿಕೆ ಮಾಡುವುದೂ ಕೂಡ ಅಷ್ಟೇ ಗಂಭೀರ ವಿಷಯ ಎಂದರು.

ಡಿಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ಎಲ್.ಅರ್. ಶಿವರಾಮೇಗೌಡರು ವಕೀಲ ದೇವರಾಜೇಗೌಡರ ಜೊತೆಗೆ ಮಾತನಾಡಿದ್ದಾರೆ. ವಿಡಿಯೋ ಹಂಚಿಕೆಯಲ್ಲಿ ಯಾರು ಯಾರು ಭಾಗಿ ಆಗಿದ್ದಾರೆ ಎಂಬ ಬಗ್ಗೆ ತನಿಖೆ ಆಗಬೇಕು. ಎಸ್‌ಐಟಿ ಅವರು ಡಿ.ಕೆ. ಶಿವಕುವಾರ್ ಸೇರಿದಂತೆ ಮತ್ತಿತರರನ್ನು ವಿಚಾರಣೆಗೆ ಒಳಪಡಿಸಬೇಕು. ಪ್ರಜ್ವಲ್ ಪ್ರಕರಣದಿಂದ ಬಿಜೆಪಿಗೆ ಯಾವುದೇ ಮುಜುಗರ ಇಲ್ಲ. ತಪ್ಪು ಮಾಡಿದ್ದರೆ ಯಾರೇ ಆಗಿದ್ದರೂ ಕ್ರಮಕೈಗೊಳ್ಳಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರದ ಕೊಡುಗೆ ಶೂನ್ಯ: ವಿಜಯೇಂದ್ರ

ಈ ಸಂಬಂಧ ಸಾಕ್ಷಿ ನಾಶಪಡಿಸಲಾಗುತ್ತಿದೆ. ನ್ಯಾಯಾಧೀಶರ ಅಧೀನದಲ್ಲಿ ಅಥವಾ ಸಿಬಿಐ ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ವಿಭಾಗೀಯ ಪ್ರಭಾರಿ ಮೈ.ವಿ. ರವಿಶಂಕರ್, ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು, ಸಹ ವಕ್ತಾರ ದೇವರಾಜು, ಮಹೇಶ್ ರಾಜೇ ಅರಸ್ ಇದ್ದರು.

click me!