ಕಾಂಗ್ರೆಸ್‌ಗೆ ಮತ ನೀಡಿ; ಹಿಟ್ನಾಳ್ ಪರ ಅಜರುದ್ದೀನ್‌ ಭರ್ಜರಿ ಬ್ಯಾಟಿಂಗ್‌!

By Kannadaprabha NewsFirst Published May 5, 2023, 11:52 AM IST
Highlights

ಚುನಾವಣೆಯಲ್ಲಿ ಅನ್ಯ ಪಕ್ಷ ಟೀಕಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಮೈದಾನದಲ್ಲಿದ್ದೇವೆ ಎಂದರೆ ಸಿಕ್ಸ್‌-ಪೋರ್‌ ಬಾರಿಸುವ ಮೂಲಕ ರಾಘವೇಂದ್ರ ಹಿಟ್ನಾಳ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿಯ ಕಾರ್ಯಾಧ್ಯಕ್ಷ ಮಹಮ್ಮದ್‌ ಅಜರುದ್ದೀನ್‌ ಹೇಳಿದರು.

ಕೊಪ್ಪಳ (ಮೇ.5) : ಚುನಾವಣೆಯಲ್ಲಿ ಅನ್ಯ ಪಕ್ಷ ಟೀಕಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಮೈದಾನದಲ್ಲಿದ್ದೇವೆ ಎಂದರೆ ಸಿಕ್ಸ್‌-ಪೋರ್‌ ಬಾರಿಸುವ ಮೂಲಕ ರಾಘವೇಂದ್ರ ಹಿಟ್ನಾಳ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿಯ ಕಾರ್ಯಾಧ್ಯಕ್ಷ ಮಹಮ್ಮದ್‌ ಅಜರುದ್ದೀನ್‌(Muhammad Azharuddin) ಹೇಳಿದರು.

ನಗರದ ತೆಗ್ಗಿನಕೆರೆಯಲ್ಲಿ ಗುರುವಾರ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಮತಯಾಚನೆ ನಡೆಸಿ ಮಾತನಾಡಿದರು.

ಕೂಡ್ಲಿಗಿ ಕಣದಲ್ಲಿ ‘ಮೀಸೆ’ ಇಲ್ಲದ ಗಂಡಸರು ಸ್ಪರ್ಧೆ!

ನಾನು ಕೊಪ್ಪಳ(Koppal assembly constituency)ಕ್ಕೆ ಬರುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಕರ್ನಾಟಕದ ಕೊಪ್ಪಳದಲ್ಲೇ ನನ್ನ ಮೊದಲ ಪ್ರಚಾರ ಮಾಡಿದ್ದೇನೆ. ಈ ಹಿಂದಿನ ಸರ್ಕಾರದ ವೈಫಲ್ಯದ ಬಗ್ಗೆ ಹೆಚ್ಚೇನು ಮಾತನಾಡಲ್ಲ. ನಾವು ಏನು ಮಾಡಬೇಕು ಎಂಬುದನ್ನು ಯೋಚಿಸಿ ಮತ ಚಲಾಯಿಸಿ. ಜನರಿಗೆ ಬೇಕಾದ ಅಗತ್ಯ ಸೌಲಭ್ಯ ಕಾಂಗ್ರೆಸ್‌ ಸರ್ಕಾರ ನೀಡಿದೆ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್‌ ಅನೇಕ ಜನಪರ ಕಾರ್ಯಕ್ರಮ ಅನುಷ್ಠಾನಗೊಳಿಸಿ ಬಡಜನರಿಗೆ ಅನುಕೂಲ ಕಲ್ಪಿಸಿದೆ ಎಂದರು.

ಮೈದಾನದಲ್ಲಿ 100ರನ್‌ ಬಾರಿಸಬೇಕು ಎಂದರೆ ಕಷ್ಟಪಡಬೇಕು. ಚುನಾವಣೆಯಲ್ಲೂ ಸಹ ಎಲ್ಲರೂ ಗೆಲ್ಲೋಕೆ ಆಗಲ್ಲ. ಯಾರು ಜನರ ಪರ, ಅಭಿವೃದ್ಧಿ ಪರ ಇರುತ್ತಾರೋ ಅವರು ಗೆಲ್ಲುತ್ತಾರೆ. ರಾಘವೇಂದ್ರ ಹಿಟ್ನಾಳ ಕೊಪ್ಪಳದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಕರೆ ನೀಡಿದರು.

ಕೊಪ್ಪಳದ ಮಹಿಳೆಯರಿಗೆ ನಾನೊಂದು ವಿನಂತಿ ಮಾಡುವೆ ಎಲ್ಲರೂ ಮತದಾನ ಮಾಡಿ, ನಿಮ್ಮ ಪತಿಗೂ ಮತದಾನ ಮಾಡಲು ಹೇಳಿ. ಅವರು ಮತದಾನ ಮಾಡದಿದ್ದರೆ ಊಟ ಕೊಡಬೇಡಿ. ಮೊದಲು ಮತದಾನ ಮಾಡಲು ಹೇಳಿ ಎಂದ ಅವರು, ಒಂದೊಳ್ಳೆ ಕ್ಯಾಪ್ಟನ್‌ ಇದ್ದರೆ ಟೀಂ ಚೆನ್ನಾಗಿ ಇರುತ್ತೆ. ಮ್ಯಾಚ್‌ ಗೆಲ್ಲುತ್ತೆ. ನಾನು 99 ಮ್ಯಾಚ್‌ ಆಡಿರುವೆ. ನೀವು ರಾಘವೇಂದ್ರ ಹಿಟ್ನಾಳ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸಿದರೇ 100 ಮ್ಯಾಚ್‌ ಆಡಿದಂತಾಗುತ್ತದೆ. ಯಾವುದೇ ಕಾರಣಕ್ಕೂ ರನೌಟ್‌ ಮಾಡದೇ, ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ವಿನಂತಿಸಿದರು.

ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, 2023ರ ಚುನಾವಣೆ ಬಹಳ ಅಬ್ಬರದಿಂದ ನಡೆಯುತ್ತಿದ್ದು, ಕ್ಷೇತ್ರಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದೆ. .135 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜ್‌ ನಿರ್ಮಾಣ ಮಾಡುವ ಮೂಲಕ ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಿದ್ದೇವೆ. .168 ಕೋಟಿ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ಇದನ್ನು ಮುಂದಿನ ದಿನಗಳಲ್ಲಿ ಸಾವಿರ ಬೆಡ್‌ಗಳಿಗೆ ಹೆಚ್ಚಿಸುತ್ತೇನೆ.ನಗರದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ .168 ಕೋಟಿ ವೆಚ್ಚದ ಕಾಮಗಾರಿಯ ಡಿಪಿಆರ್‌ ಸಿದ್ಧಗೊಂಡಿದೆ.ಪ್ರತಿ ಮನೆಗೂ ಶುದ್ಧ ನೀರು ಪೂರೈಕೆ ಮಾಡುತ್ತೇನೆ ಎಂದರು.

ತೆಗ್ಗಿನಕೆರೆಯಲ್ಲಿ ಕಾರ್ಯಕ್ರಮ ನಡೆದರೇ ಅದು ವಿಜಯೋತ್ಸವ ಕಾರ್ಯಕ್ರಮವಾಗಲಿದೆ ಎಂಬ ಇತಿಹಾಸ ಇದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾಂಗ್ರೆಸ್‌ಗೆ ಮತ ಹಾಕಿ, ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತನ್ನಿ.ಮೊಹಮ್ಮದ್‌ ಅಜರುದ್ದೀನ್‌ ಅವರು ಈ ಹಿಂದೆ ಟೀಂ ಇಂಡಿಯಾದ ನೇತೃತ್ವ ವಹಿಸಿ ಭಾರತ ಗೆಲ್ಲಿಸಿದ್ದಾರೆ. ಇಂದು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಗೆಲ್ಲಬೇಕಂಬ ಉದ್ದೇಶದಿಂದ ಕೊಪ್ಪಳದಲ್ಲಿ ನಮ್ಮ ಪರ ಬ್ಯಾಟ್‌ ಬೀಸಿದ್ದಾರೆ ಎಂದರು.

ಸಿದ್ಧಗಂಗಾ ಶ್ರೀಗಳು ಕೊಟ್ಟ ವಾಚ್‌ ಧರಿಸಿ ಸಿಎಂ ಬೊಮ್ಮಾಯಿ ಪ್ರಚಾರ

ಈ ಸಂದರ್ಭದಲ್ಲಿ ಕೌನ್ಸಿಲ್‌ ಮುಖ್ಯ ಸಚೇತಕ ಪ್ರಕಾಶ ರಾಥೋಡ್‌, ವಕೀಲರಾದ ಅಸೀಫ್‌ ಅಲಿ,ಕೆ.ರಾಜಶೇಖರ್‌ ಹಿಟ್ನಾಳ, ಮಹೇಂದ್ರ ಚೋಪ್ರಾ,ಅಮ್ಜದ್‌ ಪಟೇಲ…, ಇಂದಿರಾ ಭಾವಿಕಟ್ಟಿ, ಲತಾ ಚಿನ್ನೂರು, ನವೋದಯ ವೀರುಪಣ್ಣ, ಕಾಟನ್‌ ಪಾಷ, ಮುತ್ತುರಾಜ್‌ ಕುಷ್ಟಗಿ,ವಿರೂಪಾಕ್ಷಪ್ಪ ಮೋರನಾಳ ಸೇರಿದಂತೆ ಇತರರಿದ್ದರು.

4ಕೆಪಿಎಲ್‌31 ಕೊಪ್ಪಳ ನಗರದ ತೆಗ್ಗಿನಕೆರಿ ಓಣಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ ಅವರ ಪರವಾಗಿ ಕ್ರಿಕೆಟ್‌ ಆಟಗಾರ ಮಹಮ್ಮದ್‌ ಅಜರುದ್ಧೀನ್‌ ಪ್ರಚಾರ ನಡೆಸಿ ಮಾತನಾಡಿದರು.

click me!