ಕೋಲಾರ ಕ್ಷೇತ್ರಕ್ಕೆ ಅಲ್ಪ ಸಂಖ್ಯಾತ ಅಭ್ಯರ್ಥಿ ಬೇಡ, ಮುಸ್ಲಿಂ ಮುಖಂಡರಿಂದ ಮನವಿ

By Suvarna News  |  First Published Mar 22, 2022, 8:40 PM IST

* ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ
* ಆಗಲೇ ಕ್ಷೇತ್ರಗಳಲ್ಲಿ ರಾಜಕೀಯ ಲೆಕ್ಕಾಚಾರಗಳು ಶುರು
* ಕೋಲಾರ ಕ್ಷೇತ್ರಕ್ಕೆ ಅಲ್ಪ ಸಂಖ್ಯಾತ ಅಭ್ಯರ್ಥಿ ಬೇಡವೆಂದು ಮನವಿ


ವರದಿ ; ದೀಪಕ್ ,ಏಷ್ಯಾನೆಟ್ ಸುವರ್ಣ ನ್ಯೂಸ್ ಕೋಲಾರ

ಕೋಲಾರ, (ಮಾ.22):
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆಗಲೇ ಕ್ಷೇತ್ರಗಳಲ್ಲಿ ರಾಜಕೀಯ ಲೆಕ್ಕಾಚಾರಗಳು ಶುರುವಾಗಿದೆ.

ಹೌದು....ಕೋಲಾರದಲ್ಲಿ ವಿಧಾನ ಸಭೆ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತ ಅಭ್ಯರ್ಥಿಗಳು ಬೇಡ. ಬದಲಾಗಿ ಯಾರಾದ್ರು ಹಿಂದೂ ನಾಯಕರನ್ನೇ‌ ನೀಡಿ ಎಂದು ಕಾಂಗ್ರೆಸ್‌ ಹೈಕಮಾಂಡ್‌ಗೆ ಸಮಾನ ಮನಸ್ಕರರು ಮನವಿ ಮಾಡಿದ್ದಾರೆ.

Tap to resize

Latest Videos

Kolar: ಕ್ಲಾಕ್​ ಟವರ್​ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಬಹುದಿನಗಳ ಕನಸು ಕೊನೆಗೂ ನನಸು

ಕೋಲಾರ ವಿಧಾನ ಸಭೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳೇ ನಿರ್ಣಾಯಕ. ಆದ್ರೆ ಅಲ್ಪಸಂಖ್ಯಾತ ಅಭ್ಯರ್ಥಿಗಳು ಕಳೆದ ಮೂವತ್ತು ವರ್ಷಗಳಿಂದ ಅಲ್ಪ ಸಂಖ್ಯಾತ  ಅಭ್ಯರ್ಥಿ ಗಳು ಗೆಲುವು ಕಾಣುತ್ತಿಲ್ಲ.ಆದ್ದರಿಂದ ನಮಗೆ ಅಲ್ಪ ಸಂಖ್ಯಾತ ಅಭ್ಯರ್ಥಿಗಳು ಬೇಡ.ಬದಲಾಗಿ ಯಾರಾದ್ರು ಹಿಂದೂ ನಾಯಕರನ್ನೇ‌ ನೀಡಿ ಎಂದರು.

ನಮಗೆ‌ ಮುಸ್ಲಿಂ‌ ಅಭ್ಯರ್ಥಿ ಬೇಡ .ಕಾಂಗ್ರೆಸ್ ನಿಂದ ಸ್ಪರ್ಧಿ ಸಲು ಹಲವು ಮುಸ್ಲಿಂ ನಾಯಕರು ಮುಂದಾಗಿದ್ದಾರೆ. ಆದ್ರೆ ಪದೇ‌ಪದೇ ಸೋಲನ್ನೇ ಕಾಣುತಿದ್ದೇವೆ.ಇತ್ತೀಚೆಗೆ ಕ್ಷೇತ್ರಕ್ಕೆ ಬಂದ ಕೆಜಿಎಫ್ ಬಾಬು ಕೂಡ ಸಮಾಜ ಸೇವೆ ಮಾಡುವ ಮೂಲಕ‌ ರಾಜಕೀಯ ಪ್ರವೇಶ ಮಾಡುತಿದ್ದಾರೆ. ಆದ್ರೆ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗಳು ಗೆಲುವು ಕಷ್ಟವಾಗಿದೆ .ಈ ಹಿಂದೆ ಅನೇಕ ಭಾರಿ ಇದು ಸಾಬೀತಾಗಿದೆ. ಹಾಗಾಗಿ ನಮಗೆ ಹಿಂದು ಸಮೂದಾಯದ ಅಭ್ಯರ್ಥಿಗಳು ಬೇಕು ಎಂದು ಸಮಾನ ಮನಸ್ಕರು ಒತ್ತಾಯಿಸಿದ್ದದಾರೆ.

ಕೋಲಾರ ವಿಧಾನಸಭಾ ಕ್ಷೇತ್ರದ ವಿವರ
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ 2 ಲಕ್ಷ 30 ಸಾವಿರ ಜನ ಮತದಾರರಿದ್ದು ,ಇದರಲ್ಲಿ 52 ಸಾವಿರ ಮುಸ್ಲಿಂ, ಒಕ್ಕಲಿಗರು 70 ಸಾವಿರ,ಕುರುಬರು 26 ಸಾವಿರ ದಲಿತರು 1 ಲಕ್ಷಕ್ಕೂ ಹೆಚ್ಚು ಜನ,  15 ಸಾವಿರ ಇತರೆ ಸಮುದಾಯದ ಮತದಾರರು  ಇದ್ದಾರೆ.ಕೋಲಾರ ವಿಧಾನಸಭಾ ಚುನಾವಣೆಯ ಸ್ಪರ್ದೆಯಲ್ಲಿ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುತ್ತಾ, ಇದರ ಲಾಭವನ್ನು ಜೆಡಿಎಸ್ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಪಡೆದು ಗೆಲುವು ಸಾಧಿಸಿಕೊಳ್ತಿದ್ದಾರೆ. 

ಮುಸ್ಲಿಂ ಸಮುದಾಯದ ಮತದಾರರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ಮತ ಹಾಕುತ್ತಿದ್ದಾರೆ,ಇದರ ನಡುವೆ ಒಕ್ಕಲಿಗ ಸಮುದಾಯದವರು ಹೆಚ್ಚಾಗಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕುತ್ತಿದ್ದಾರೆ. ಇನ್ನುಳಿದ ಸಮುದಾಯದ ಮತದಾರರು ಎಲ್ಲ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕುತ್ತಿದ್ದಾರೆ. ಈಗಾಗಿ ಕಾಂಗ್ರೆಸ್ ಪ್ರತಿ ಬಾರಿಯೂ ಇಲ್ಲಿ ಸೋಲು ಅನುಭವಿಸುವಂತ್ತಾಗಿದೆ.

ಈಗಾಗಿ ಸ್ವತಃ ಮುಸ್ಲಿಂ ಸಮುದಾಯದ ಕಾಂಗ್ರೆಸ್ ಕಾರ್ಯಕರ್ತರೇ ಈ ಬಾರಿ ಗಟ್ಟಿಯಾಗಿ ನಿರ್ಧಾರ ಮಾಡಿದ್ದು,ಈ ಬಾರಿ ಹಿಂದೂಗಳಿಗೆ ಟಿಕೆಟ್ ನೀಡಿ ,ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಿದ್ರೆ ವೋಟ್ ಗಳು ಛಿದ್ರಗೊಂಡು ಬೇರೆ ಪಕ್ಷಗಳು ಲಾಭ ಪಡೆದುಕೊಳ್ಳುತದೆ ಎಂದು ಕೆಪಿಸಿಸಿ ಗೆ ಮನವಿ ಮಾಡ್ತಿದ್ದಾರೆ.ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸುವಂತೆ ಕಾರ್ಯಕರ್ತರು ಹಾಗೂ ಜಿಲ್ಲೆಯ ಶಾಸಕರು ಒತ್ತಾಯ ಮಾಡ್ತಿದ್ದು, ಸಿದ್ದರಾಮಯ್ಯ ಸಹ ಕೋಲಾರ ಕ್ಷೇತ್ರದಿಂದ ಸ್ಪರ್ದಿಸುವ ಬಗ್ಗೆ ತೀರ್ಮಾನದಲ್ಲಿದ್ದಾರೆ ಅಂತ ಜಿಲ್ಲೆಯಲ್ಲಿ ಚರ್ಚೆಗಳು ಆರಂಭವಾಗಿದೆ..

click me!