ಡಬಲ್‌ ಗೇಮ್‌ ಆಡಿದವರನ್ನು ಹತ್ತಿರ ಇಟ್ಟುಕೊಳ್ಳಲ್ಲ: ಶಾಸಕ ದೇಶಪಾಂಡೆ

By Kannadaprabha News  |  First Published Jul 17, 2023, 11:21 PM IST

ವಿಧಾನಸಭಾ ಚುನಾವಣೆಯ ಸಮಯದಲ್ಲಿ ನನಗೆ ಮೋಸ ವಂಚನೆ ಮಾಡಿದವರನ್ನು ಸುಳ್ಳು ಭರವಸೆ ನೀಡಿ ಕೈಕೊಟ್ಟವರನ್ನು, ನನ್ನೊಂದಿಗೆ ಡಬಲ್‌ ಗೇಮ್‌ ಆಡಿದವರನ್ನು ನಾನು ಇನ್ನೂ ಮುಂದೇ ನನ್ನ ಹತ್ತಿರ ಇಟ್ಟುಕೊಳ್ಳುವುದಿಲ್ಲ ಎಂದು ಮಾಜಿ ಸಚಿವ, ಶಾಸಕ ಆರ್‌.ವಿ. ದೇಶಪಾಂಡೆ ತಿಳಿಸಿದರು. 


ಹಳಿಯಾಳ (ಜು.17): ವಿಧಾನಸಭಾ ಚುನಾವಣೆಯ ಸಮಯದಲ್ಲಿ ನನಗೆ ಮೋಸ ವಂಚನೆ ಮಾಡಿದವರನ್ನು ಸುಳ್ಳು ಭರವಸೆ ನೀಡಿ ಕೈಕೊಟ್ಟವರನ್ನು, ನನ್ನೊಂದಿಗೆ ಡಬಲ್‌ ಗೇಮ್‌ ಆಡಿದವರನ್ನು ನಾನು ಇನ್ನೂ ಮುಂದೇ ನನ್ನ ಹತ್ತಿರ ಇಟ್ಟುಕೊಳ್ಳುವುದಿಲ್ಲ ಎಂದು ಮಾಜಿ ಸಚಿವ, ಶಾಸಕ ಆರ್‌.ವಿ. ದೇಶಪಾಂಡೆ ತಿಳಿಸಿದರು. ಪಟ್ಟಣದ ಕಸಬಾ ಗಲ್ಲಿಯಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ 2021-22ನೇ ಸಾಲಿನ ಬಂಡವಾಳ ಶೀರ್ಷಿಕೆ ಯೋಜನೆಯಡಿ 15ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಜಮಾತುಲ್‌ ಮುಸ್ಲಿಮನ್‌ ಮೊಹಲ್ಲಾ ಕಟ್ಟಡದ ಲೋಕಾರ್ಪಣೆ ಮಾಡಿ ಮಾತನಾಡಿದರು.

ಗುಡುಗಿದ ದೇಶಪಾಂಡೆ: ತಮ್ಮ ಭಾಷಣದುದ್ದಕ್ಕೂ ಚುನಾವಣೆಯ ಸಮಯದಲ್ಲಿ ತಮಗೆ ಮೋಸ ಮಾಡಿದವರ ಹೆಸರು ಬಹಿರಂಗಪಡಿಸದೇ ತೀವ್ರ ವಾಗ್ದಾಳಿ ಮಾಡಿದ ದೇಶಪಾಂಡೆ, ಯಾವಾಗಲೂ ಯಾರಿಗೂ ಮೋಸ ವಂಚನೆ ಮಾಡಬಾರದು. ಎಲ್ಲದಕ್ಕಿಂತ ಮಿಗಿಲಾಗಿ ಸುಳ್ಳು ಭರವಸೆ ನೀಡಬಾರದು, ಚುನಾವಣೆಯ ಸಮಯದಲ್ಲಿ ಯಾರು ನನ್ನ ಪರವಾಗಿ ಕೆಲಸ ಮಾಡಿದರು, ಯಾರು ಮುಖವಾಡ ಹಾಕಿ ಕೆಲಸ ಮಾಡಿದರು, ಯಾರು ಮೋಸ ಮಾಡಿದರು, ಯಾವ ವಾರ್ಡ್‌ನಲ್ಲಿ ನನಗೆ ಲೀಡ್‌ ಸಿಕ್ಕಿದೆ, ಯಾವ ವಾರ್ಡ್‌ ಕೈಕೊಟ್ಟಿದೆ ಎಂಬ ಎಲ್ಲಾ ಇತಿಹಾಸವೇ ನನ್ನ ಬಳಿ ಇದೆ. 

Tap to resize

Latest Videos

undefined

ನಿಂತು ನಿಂತು ಓಡುತ್ತಿರುವ ಮಂಡ್ಯದ ಮೈ ಶುಗರ್‌: ನುರಿತ ತಜ್ಞರಿಲ್ಲದೇ ಪದೇ ಪದೇ ತಾಂತ್ರಿಕ ಸಮಸ್ಯೆ

ನನಗೆ ಮೋಸ, ಅನ್ಯಾಯ ಮಾಡಿದವರ ಬಗ್ಗೆ ನನಗೆ ಯಾವತ್ತೂ ಸಿಟ್ಟಿಲ್ಲ, ಆದರೆ ನನಗೆ ಅವರು ಮಾಡಿದ ಮೋಸದ ಬಗ್ಗೆ ನೋವಿದೆ ಎಂದರು. ಅಭಿವೃದ್ಧಿ ಮತ್ತು ಬಡವರ ಕಲ್ಯಾಣದ ವಿಷಯ ಬಂದಾಗ ರಾಜಕೀಯ ಮಾಡಬಾರದು, ಚುನಾವಣೆ ಘೋಷಣೆಯಾಗುವ ಮುನ್ನ ಈ ಭಾಗದ ಜನರ ಬೇಡಿಕೆಯಂತೆ ನಾನು ರಸ್ತೆ ಕಾಮಗಾರಿ ಮಂಜೂರಿ ಮಾಡಿದ್ದಾಗ, ಅದಕ್ಕೂ ಕೆಲವರು ವಿರೋಧಿಸಿ, ಅಡ್ಡಿಪಡಿಸಿದರು. ಈಗ ರಸ್ತೆ ಕಾಮಗಾರಿ ಆದ ಮೇಲೆ ಹಿಂದೆ ವಿರೋಧ ಮಾಡಿದ್ದವರು ಆ ರಸ್ತೆಯನ್ನು ಬಳುಸುತ್ತಿಲ್ಲವೇ ಎಂದು ದೇಶಪಾಂಡೆ ಖಾರವಾಗಿ ಪ್ರಶ್ನಿಸಿದರು.

ಹಳಿಯಾಳದ ಕ್ಷೇತ್ರಕ್ಕೆ ನಾನೇ ಖಾಯಂ ಅಂತೇನೂ ಇಲ್ಲ. ಆದರೆ ನನ್ನಿಂದ ಉಪಕೃತರಾದವರೆಲ್ಲಾ ನನ್ನನ್ನು ಸೋಲಿಸಲು ಹರಸಾಹಸ ಪಟ್ಟರೂ, ಜನಬಲ ಹಾಗೂ ದೈವಬಲ ನನ್ನೊಂದಿಗೆ ಇದ್ದ ಕಾರಣ ನನ್ನ ವಿರೋಧಿಗಳ ಕನಸು ನನಸಾಗಲಿಲ್ಲ ಎಂದರು. ನನ್ನ ಕ್ಷೇತ್ರದ ಜನ ನನ್ನ ಮೇಲೆ ವಿಶ್ವಾಸವಿರಿಸಿ ಒಂಬತ್ತು ಬಾರಿ ನನ್ನನ್ನು ಆಯ್ಕೆ ಮಾಡಿದ್ದಾರೆ, ಅವರ ಋುಣ ತೀರಿಸಲು ನನಗೆ ಅಸಾಧ್ಯ ಎಂದರು.

ಬಿಜೆಪಿಯಿಂದ ಮತ್ತೆ ಕೋಮುಗಲಭೆ ಸೃಷ್ಟಿ: ಸಚಿವ ಈಶ್ವರ ಖಂಡ್ರೆ

ಪುರಸಭೆ ಮಾಜಿ ಅಧ್ಯಕ್ಷ ಅಜರ್‌ ಬಸರಿಕಟ್ಟಿ, ಉಮೇಶ ಬೊಳಶೆಟ್ಟಿಮಾತನಾಡಿದರು. ಪುರಸಭಾ ಸದಸ್ಯ ಫಯಾಜ್‌ ಶೇಖ್‌, ಪ್ರಭಾಕರ ಗಜಾಕೋಶ, ಮೊಹಲ್ಲಾ ಕಮೀಟಿಯ ಪ್ರಮುಖ ಹಸನಸಾಬ ದುರ್ಗಾಡಿ, ಜುಮ್ಮಾಸಾಬ ಲತೀಪಣ್ಣನವರ, ಅಂಜುಮನ್‌ ಸಂಸ್ಥೆ ಮಾಜಿ ಅಧ್ಯಕ್ಷ ಅಲಿಂ ಬಸರಿಕಟ್ಟಿ, ಇಮ್ತಿಯಾಜ್‌ ಶೇಖ್‌, ಮಾರುತಿ ಕಲಬಾವಿ, ಶಮೀಲ ಜಂಗೂಬಾಯಿ, ನಿರ್ಮಿತಿ ಎಂಜಿನಿಯರ್‌ ಕುಮಾರ ಇದ್ದರು.

click me!