ಬಿಜೆಪಿ ಶಾಸಕರಿಗೆ ಒಂದೇ ಕೋಟಿ ಅನುದಾನ!; ಕಾಂಗ್ರೆಸ್ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಬೆಲ್ಲದ್ ಗರಂ

Published : Aug 16, 2024, 05:31 PM IST
ಬಿಜೆಪಿ ಶಾಸಕರಿಗೆ ಒಂದೇ ಕೋಟಿ ಅನುದಾನ!; ಕಾಂಗ್ರೆಸ್ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಬೆಲ್ಲದ್ ಗರಂ

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾಋ ಅಧಿಕಾರಕ್ಕೆ ಬಂದು ಒಂದೂವರೆ ವರ್ಷಗಳೇ ಕಳೆದಿವೆ. ಆದರೆ ಶಾಸಕರುಗಳೀಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವೇ ಬಿಡುಗಡೆ ಮಾಡಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಅರವಿಂದ್ ಬೆಲ್ಲದ್ ಕಿಡಿಕಾರಿದ್ದಾರೆ.

ವರದಿ : ಪರಮೇಶ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ

ಧಾರವಾಡ (ಆ.16) ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 15 ತಿಂಗಳು ಕಳೆದಿವೆ ಆದರೆ ಬಿಜೆಪಿ ಶಾಸಕರುಗಳಿಗೆ ಅಭಿವೃದ್ಧಿಗೆ ಇದುವರೆಗೆ ಅನುದಾನ ಸಿಗ್ತಿಲ್ಲ, ಕೇವಲ ಗ‌್ಯಾರಂಟಿ ಯೋಜನಗಳ ಬಗ್ಗೆ ಒತ್ತು ಕೊಟ್ಟಿರುವ ಕಾಂಗ್ರೆಸ್ ಸರಕಾರ ಸದ್ಯ ವರ್ಷಕ್ಕೆ 60,000 ಕೋಟಿ ಹಣವನ್ನ ನೋಡುತ್ತಿದೆ ಐದು ಗ‌್ಯಾರಂಟಿ ಯೋಜನೆಗಳಿಂದ ಸರಕಾರದಲ್ಲಿ ಶಾಸಕರುಗಳಿಗೆ ಅನುದಾನ ಸಿಗ್ತಿಲ್ಲ, ಈ ಸರಕಾರ ದಿವಾಳಿ ಯಾಗಿದೆ ಎಂದು ವಿರೋಧ ಪಕ್ಷದ ವಿಪಕ್ಷ ನಾಯಕ ಅರವಿಂದ ಬೆಲ್ಲದ ಸರಕಾರದ ವಿರುದ್ದ ಆಕ್ರೋಶವನ್ನ ಹೊರಹಾಕಿದರು.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದು ಒಂದೂವರೆ ವರ್ಷ ಆಗೋಕೆ ಬಂತು. ಆದರೆ ಇನ್ನೂವರೆಗೂ ಶಾಸಕರಿಗೆ ಸಮರ್ಪಕವಾದ ಅನುದಾನವನ್ನೇ ಕೊಡುತ್ತಿಲ್ಲವಂತೆ.ಶಾಸಕರ ಅನುದಾನದ ಕುರಿತಾಗಿಯೇ ಧಾರವಾಡದಲ್ಲೀಗ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರುಗಳ ಮಧ್ಯೆ ವಾಕ್ಸಮರವೊಂದು ಶುರುವಾವಾಗಿದೆ ರಾಜ್ಯದಲ್ಲಿರೋ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿಯೇ ಮುಳುಗಿ‌ ಹೋಗಿದ್ರಿಂದ ಉಳಿದ ಯಾವುದೇ ಅಭಿವೃದ್ಧಿ ಯೋಜನೆಗೆ ಹಣವೇ ಇಲ್ಲದಂತಾಗಿದೆ ಅನ್ನೋ ಆರೋಪ ಸಾಮಾನ್ಯವಾಗಿದೆ. ಈ ಮಧ್ಯೆ ಎಂಎಲ್‌ಎ ಫಂಡ ಹೊರೆತು ಪಡಿಸಿ ಉಳಿದ ಯಾವ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಶಾಸಕರು ಸರಕಾರದ ವಿರುದ್ದ ಆರೋಪವನ್ನ ಮಾಡಿದ್ದಾರೆ

'ಅಪ್ಪಾ.. ಒಂದ್ನಿಮಿಷ ತಾಳ್ರೋ.. ಸುಮ್ನೆ ಬಿಡ್ರಪ್ಪಾ..' ಮಾಧ್ಯಮಗಳ ಪ್ರಶ್ನೆಗೆ ಕೆರಳಿದ ಕೇಂದ್ರ ಸಚಿವ ವಿ ಸೋಮಣ್ಣ!

ಇದೇ ವಿಷಯ ಈಗ ಧಾರವಾಡ ರಾಜಕೀಯದಲ್ಲಿ ಚರ್ಚೆ ಹುಟ್ಟುಹಾಕಿದೆ ಪ್ರತಿ ಶಾಸಕ ರಿಗೂ ಇಂತಿಷ್ಟು ಅಂತಾ ಎಂಎಲ್‌ಎ ಫಂಡ್ ಇದ್ದೇ ಇರುತ್ತದೆ. ಆದರೆ ಹದಿನೈದು ತಿಂಗಳ ಅವಧಿಯಲ್ಲಿ ಸರಿಯಾಗಿ ಒಂದು ಕೋಟಿ ರೂಪಾಯಿನೂ ನಮಗೆ ಬಂದಿಲ್ಲ. ಸರ್ಕಾರ ದಿವಾಳಿ ಎದ್ದಿದೆ. ಕಾಂಗ್ರೆಸ್ ಶಾಸಕರಿಗೂ ಅನುದಾನ ಸಿಗ್ತಿಲ್ಲ‌ ಅಂತಾ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಕೇವಲ 7 ಜನ ಶಾಸಕರಿಗೆ ಶಾಸಕರ ಫಂಡ್ ಒಬ್ಬೊಬ್ಬರಿಗೆ ಎರಡೂವರೆ ಕೋಟಿ ಅನುದಾನ ಮಾತ್ರ ಬಿಡುಗಡೆಯಾಗಿದೆ..

ಇನ್ನು ಅರವಿಂದ ಬೆಲ್ಲದ್ ಈ ರೀತಿ ಆರೋಪ ಮಾಡುತ್ತಿದ್ದಂತೆಯೇ ಜಿಲ್ಲೆಯ ಕಾಂಗ್ರೆಸ್ ಶಾಸಕರು ತಿರುಗಿ ಬಿದ್ದಿದ್ದಾರೆ ನಮಗಂತೂ ಭರಪುರ ಅನುದಾನ ಬರುತ್ತಿದೆ ಸಾಕಷ್ಟು ರಸ್ತೆಗಳನ್ನು ಮಾಡಿಸುತ್ತಿದ್ದೇವೆ ಎಂದು ಹೇಳಿರೋ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಬೆಲ್ಲದ್ ಕ್ಷೇತ್ರ ವ್ಯಾಪ್ತಿಯ ಮಹಾನಗರ ಪಾಲಿಕೆಗೆ ಎಷ್ಟು ಅನುದಾನ ಬಂದಿದೆ ನೋಡಿಕೊಳ್ಳಲಿ. ಬೇಕಿದ್ದರೆ ಅಂಕಿ ಸಂಖ್ಯೆಯನ್ನೇನಾವು ಕೆಡಿಪಿಯಲ್ಲಿ ತೆರದಿಡುತ್ತೇವೆ ಅಂತಾ ಸವಾಲು ಹಾಕಿದ್ದಾರೆ ಇದೇ ವಿಷಯಕ್ಕೆ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ಸಹ ಪ್ರತಿಕ್ರಿಯೆ ನೀಡಿದ್ದು, ಶಾಸಕರುಗಳಿಗೆ ಹೆಚ್ಚು-ಕಮ್ಮಿ ಅನುದಾನ ಬರುತ್ತಿರೋದು ನಿಜ ಹಾಗಂತ ಬಂದೇ ಇಲ್ಲ ಅಂತಾ ಹೇಳೋಕೆ ಆಗೋದಿಲ್ಲ ಅವರವರ ಪಕ್ಷದ ಸರ್ಕಾರ ಬಂದಾಗ ತಮ್ಮ ಪಕ್ಷದ ಶಾಸಕರಿಗೆ ಹೆಚ್ಚು ಅನುದಾನ ಕೊಡೊದು ಸಹಜ. ಅದೇನು ಕದ್ದುಮುಚ್ಚಿ ನಡೆಯೊದಲ್ಲ ಅಂದಿದ್ದಾರೆ.

ಇನ್ನು ಧಾರವಾಡ ಜಿಲ್ಲೆಯಲ್ಲಿ ಕೈ ಶಾಸಕರಿಗೆ ಮಾತ್ರ ಮುಖ್ಯಮಂತ್ರಿ ಅವರ ವಿಶೇಷ ಅನುದಾನ ಮಾತ್ರ ಬಿಡುಗಡೆಯಾಗಿದೆ. ಜೊತೆಗೆ ಧಾರವಾಡ ಗ್ರಾಮೀಣ ಕ್ಷೆತ್ರಕ್ಕೆ 50 ಕೋಟಿ, ನವಲಗುಂದ ವಿಧಾನಸಭಾ ಕ್ಷೇತ್ರಕ್ಕೆ 40 ಕೋಟಿ, ಕಲಘಟಗಿ ವಿಧಾನ ಸಭಾ ಕ್ಷೆತ್ರಕ್ಕೆ 25 ಕೋಟಿ, ಹುಬ್ಬಳ್ಳಿ_ಧಾರವಾಡ ಪೂರ್ವ ಕ್ಷೆತ್ರಕ್ಕೆ 30 ಕೋಟಿ ಸೇರಿದಂತೆ ಕೇವಲ ಕೈ ಶಾಸಕರು ಇರುವ ಕ್ಷೇತ್ರಕ್ಕೆ ಮಾತ್ರ ಅನುದಾನ ಬಿಡುಗಡೆಯಾಗಿದೆ. ಜೊತೆಗೆ ರಾಜ್ಯಾದ್ಯಂತ ಬಿಜೆಪಿ ಶಾಸಕರುಗಳು ಇರುವ ಕ್ಷೆತ್ರಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಅವರು ರಾಜ್ಯ ಸರಕಾರದ ವಿರುದ್ದ ಬೇಸರ ವ್ಯಕ್ತ ಪಡಿಸಿದ್ದಾರೆ..

ನನ್ನ ಕಣ ಕಣದಲ್ಲೂ ಬಿಜೆಪಿ-ಹಿಂದೂತ್ವ ತುಂಬಿದೆ, ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ: ಎಂಪಿ ರೇಣುಕಾಚಾರ್ಯ

ಒಟ್ಟಾರೆಯಾಗಿ ಧಾರವಾಡದಲ್ಲೀಗ ಬಿಜೆಪಿ ಶಾಸಕರು ಅನುದಾನ ಬರ್ತಿಲ್ಲ ಅಂತಾ ಹೇಳುತ್ತ ಹೊರಟಿದ್ರೆ, ಕಾಂಗ್ರೆಸ್ ಶಾಸಕರು ಮಾತ್ರ ಬರ್ತಾ ಇದೆ ಯಾವುದು ನಿಂತಿಲ್ಲ ಅಂತಾ ಹೇಳ್ತಾ ಇದಾರೆ. ಪರ-ವಿರೋಧದ ಈ ವಾದದಿಂದಾಗಿ ಯಾರ ಹೇಳುತ್ತಿರೋದು ಸತ್ಯ.ಯಾರ ಮಾತು ನಂಬಬೇಕು ಅನ್ನೋ ಗೊಂದಲ್ಲದಲ್ಲಿ ಜಿಲ್ಲೆಯ ಜನತೆ ಇದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಕ್ಕಿ ಅಕ್ರಮದಲ್ಲಿ ಬಿಜೆಪಿಯವರೇ ಶಾಮೀಲು: ಸಚಿವ ಪ್ರಿಯಾಂಕ್ ಖರ್ಗೆ
ಬಂಡವಾಳ ಆಕರ್ಷಣೆಗೆ ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ: ಸಚಿವ ಎಂ.ಬಿ.ಪಾಟೀಲ್‌