'ಅಪ್ಪಾ.. ಒಂದ್ನಿಮಿಷ ತಾಳ್ರೋ.. ಸುಮ್ನೆ ಬಿಡ್ರಪ್ಪಾ..' ಮಾಧ್ಯಮಗಳ ಪ್ರಶ್ನೆಗೆ ಕೆರಳಿದ ಕೇಂದ್ರ ಸಚಿವ ವಿ ಸೋಮಣ್ಣ!

By Ravi Janekal  |  First Published Aug 16, 2024, 4:57 PM IST

"ಅಪ್ಪಾ.. ಒಂದು ನಿಮಿಷ ತಾಳ್ರೋ.. ನಮ್ಮನ್ನು ಸುಮ್ನೆ ಬಿಡ್ರಪ್ಪಾ.. ಯಾಕ್ರಯ್ಯ ನಮ್ಮನ್ನ ನೆಮ್ಮದಿಯಾಗಿ ಇರೋಕೆ ಬಿಡ್ತಿಲ್ಲ...' ಬಿಜೆಪಿ ಭಿನ್ನ ನಾಯಕರು ಪಾದಯಾತ್ರೆ ಮಾಡುತ್ತಿರುವ ವಿಚಾರ ಸಂಬಂಧ ಮಾಧ್ಯಮ ಪ್ರಶ್ನೆಗೆ ಕೇಂದ್ರ ಸಚಿವ ವಿ ಸೋಮಣ್ಣ ಸಿಟ್ಟಾದ ಘಟನೆ ನಡೆಯಿತು. 


ಚಿಕ್ಕಮಗಳೂರು (ಆ.16): "ಅಪ್ಪಾ.. ಒಂದು ನಿಮಿಷ ತಾಳ್ರೋ.. ನಮ್ಮನ್ನು ಸುಮ್ನೆ ಬಿಡ್ರಪ್ಪಾ.. ಯಾಕ್ರಯ್ಯ ನಮ್ಮನ್ನ ನೆಮ್ಮದಿಯಾಗಿ ಇರೋಕೆ ಬಿಡ್ತಿಲ್ಲ...' ಬಿಜೆಪಿ ಭಿನ್ನ ನಾಯಕರು ಪಾದಯಾತ್ರೆ ಮಾಡುತ್ತಿರುವ ವಿಚಾರ ಸಂಬಂಧ ಮಾಧ್ಯಮ ಪ್ರಶ್ನೆಗೆ ಕೇಂದ್ರ ಸಚಿವ ವಿ ಸೋಮಣ್ಣ ಸಿಟ್ಟಾದ ಘಟನೆ ನಡೆಯಿತು. 

ಇಂದು ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ವೇಳೆ ಬಿಜೆಪಿ ಬಂಡಾಯ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, 'ಇದರ ಬಗ್ಗೆ ನನ್ನ ಯಾಕೆ ಬಂದು ಕೇಳ್ತೀರಾ ನೀವು ಎಂದು ಪ್ರಶ್ನಿಸಿದರು. ಮುಂದುವರಿದು, 'ಒಂದು ತಿಳಿಯಿರಿ ಈ ದೇಶಕ್ಕೆ ಪ್ರಧಾನಿ ಮೋದಿ ದೊಡ್ಡ ಆಸ್ತಿ. ಪಕ್ಷಕ್ಕೆ ಅಂತ ಹೇಳಲ್ಲ ದೇಶಕ್ಕೇ ಅವರ ನಾಯಕತ್ವ ಬೇಕು. 370 ತೆಗೆಯುವ ಬಗ್ಗೆ ಯಾರಾದ್ರೂ ನಿರೀಕ್ಷೆ ಮಾಡಿದ್ರ? ಬದಲಾವಣೆ ಜಗದ ನಿಯಮ. ಇಂದು ನೀವು ಒಮ್ಮೆ ಜಮ್ಮು-ಕಾಶ್ಮೀರಕ್ಕೆ ಹೋಗಿ ಬನ್ನಿ ಹೇಗಾಗಿದೆ ನೋಡಿ. ಮೊದಲು ಹೇಗಿತ್ತು, ಮೋದಿ ಬಂದ ನಂತರ ಹೇಗೆ ಬದಲಾವಣೆ ಆಗಿದೆ ನೋಡಿ ಎಂದರು.

Tap to resize

Latest Videos

undefined

ನನ್ನ ಕಣ ಕಣದಲ್ಲೂ ಬಿಜೆಪಿ-ಹಿಂದೂತ್ವ ತುಂಬಿದೆ, ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ: ಎಂಪಿ ರೇಣುಕಾಚಾರ್ಯ

ಸಕಲೇಶಪುರದಲ್ಲಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಏಕಕಾಲದಲ್ಲಿ ಇಷ್ಟೊಂದು ಮಳೆಯಾಗಿದ್ದ ಇದೇ ಮೊದಲು. ಮೊದಲು ನಾಲ್ಕೈದು ದಿನ ಬರ್ತಿದ್ದ ಮಳೆ ಈಗ ಒಂದೆರಡು ಗಂಟೆಯೊಳಗೆ ಸುರಿಯುತ್ತಿದೆ. ಇದರ ಪರಿಣಾಮ ಅನಾಹುತಗಳಾಗುತ್ತಿವೆ. ಪ್ರಕೃತಿ ಮುಂದೆ ನಾವು ಏನೂ ಅಲ್ಲ ಎಂದರು.

click me!