ಅದಷ್ಟು ಬೇಗ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಭವಿಷ್ಯ ನುಡಿದ ತುಳುನಾಡ ದೈವ

Published : Nov 08, 2025, 04:41 PM ISTUpdated : Nov 08, 2025, 04:45 PM IST
DK Shivakumar

ಸಾರಾಂಶ

ಡಿ.ಕೆ.ಶಿವಕುಮಾರ್ ಅದಷ್ಟು ಬೇಗ ಸಿಎಂ ಆಗ್ತಾರೆ ಎಂದು ತುಳುನಾಡ ದೈವ ಭವಿಷ್ಯ ನುಡಿದಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಶ್ರೀ ಗುರು ಗಿರಿ ಸಿದ್ದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಡಿಕೆಶಿ ಅಭಿಮಾನಿಯೊಬ್ಬರ ಪ್ರಶ್ನೆಗೆ ದೈವ ಉತ್ತರಿಸಿದೆ.

ತುಮಕೂರು (ನ.08): ಡಿ.ಕೆ.ಶಿವಕುಮಾರ್ ಅದಷ್ಟು ಬೇಗ ಸಿಎಂ ಆಗ್ತಾರೆ ಎಂದು ತುಳುನಾಡ ದೈವ ಭವಿಷ್ಯ ನುಡಿದಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಶ್ರೀ ಗುರು ಗಿರಿ ಸಿದ್ದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಡಿ.ಕೆ.ಶಿವಕುಮಾರ್ ಅಭಿಮಾನಿಯೊಬ್ಬರ ಪ್ರಶ್ನೆಗೆ ದೈವ, ಈಗಾಗಲೇ ಭವಿಷ್ಯ ನುಡಿದು ಆಗಿದೆ. ಕೆಲವು ವಿಚಾರ ಈಗಾಗಲೇ ಅವರಿಗೆ ತಿಳಿಸಿದೆ. ಅದರಂತೆ ನಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಅದಷ್ಟು ಬೇಗ ಸಿಎಂ ಸ್ಥಾನಕ್ಕೆ ಡಿಕೆಶಿ ಏರಲಿದ್ದಾರೆ ಎಂದು ಉತ್ತರಿಸಿದೆ. ಸದ್ಯ ದೈವದ ನುಡಿಗೆ ಅಭಿಮಾನಿಗಳು ಪುಲ್ ಖುಷ್ ಆಗಿದ್ದಾರೆ.

ನಮ್ಮ ಒಳ್ಳೆಯ ಕೆಲಸಗಳೇ ಶಾಶ್ವತ: ಮನುಷ್ಯನ ಹುಟ್ಟು ಆಕಸ್ಮಿಕವಾದದ್ದು, ಸಾವು ಎಂಬುದು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಬಹಳ ಮುಖ್ಯ " ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಅಬ್ಬಿಗೆರೆಯಲ್ಲಿ ನಡೆದ ಸೀತಾ ಲಕ್ಷ್ಮಣ ಹನುಮ ಸಮೇತ ಶ್ರೀ ರಾಮಚಂದ್ರಸ್ವಾಮಿ ದೇವಾಲಯ ಜೀರ್ಣೋದ್ಧಾರ ಪುನಃ ಪ್ರತಿಷ್ಠಾಪನಾ ಮತ್ತು ಶ್ರೀ ಪದ್ಮಾವತಿ ಸಮೇತ ಶ್ರೀ ವೇಂಕಟೇಶ್ವರ ಸ್ವಾಮಿಯವರ ನೂತನ ಸ್ಥಿರ ಬಿಂಬ ಪ್ರತಿಷ್ಠಾಪನಾ ಹಾಗೂ ವಿಮಾನ ಗೋಪುರ ಕಲಶ ಪ್ರತಿಷ್ಠಾಪನಾ ಮಹಾ ಕುಂಭಾಭಿಷೇಕ ಮಹೋತ್ಸವದಲ್ಲಿ ಮಾತನಾಡಿ, ಈ ದೇವಾಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಡಿ ನೀವೆ ದೇವಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಳ್ಳಿ ದೇವಸ್ಥಾನದ ಜೀರ್ಣೋದ್ಧಾಕ್ಕೆ ಯಾರು ಸಹಾಯ ಮಾಡಿದ್ದೀರಾ ಅವರಿಗೆ ಒಳ್ಳೆದಾಗಲಿ.

ನಾವು ಮಾಡಿದ ಕೆಲಸ ಶಾಶ್ವತವಾಗಿರುತ್ತದೆ

ಇದು ಒಂದು ಪವಿತ್ರ ಸ್ಥಳ. ಭವಿಷ್ಯದಲ್ಲಿ ಇಲ್ಲಿ ನಾವು ನೀವು ಯಾರು ಇರುವುದಿಲ್ಲ. ಆದರೆ ನಾವು ಮಾಡಿದ ಕೆಲಸ ಶಾಶ್ವತವಾಗಿರುತ್ತದೆ. ದೇವಾಸ್ಥಾನವು ತುಂಬಾ ಅದ್ಭುವಾಗಿ‌ ಮೂಡಿಬಂದಿದೆ. ನಾನುಂಟು ದೇವರುಂಟು. ನಾನುಂಟು ಭಕ್ತಿಯುಂಟು, ಭಕ್ತ ಹಾಗೂ ಭಗವಂತನಿಗೆ ವ್ಯವಹಾರ ನಡೆಯುವ ಸ್ಥಳ ದೇವಸ್ಥಾನ. ದೇವಾಲಯದಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದರು. ಇನ್ನು ಶಾಸಕ ಎಸ್.ಮುನಿರಾಜು ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೆನೆ. ನಾವು ಕೋಟಿ ಕೋಟಿ ಹಣ ಗಳಿಸಬಹುದು. ಆದರೆ, ಸೇವಾ ಮನೋಭಾವ, ಭಕ್ತಿ ಭಾವ ಎಲ್ಲರಲ್ಲೂ ಬರುವುದಿಲ್ಲ. ನಾಗಭೂಷಣ್ ಮತ್ತು ಅವರ ಕುಟುಂಬವರ್ಗದವರು ಸುಂದರವಾದ ದೇವಸ್ಥಾನ ಜೀವನೋದ್ಧಾರ ಮಾಡಿಸಿದ್ದಾರೆ. ಅವರಿಗೆ ದೇವರು ಆರೋಗ್ಯ ಐಶ್ವರ್ಯ ನೀಡಲಿ ಎಂದು ಹಾರೈಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ - ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ