ಚಿಕ್ಕಮಗಳೂರು ಕಾಂಗ್ರೆಸ್ ಸದಸ್ಯತ್ವದಲ್ಲಿ ಕಳಪೆ ಸಾಧನೆ, ತಾಯಿ, ಮಗಳಿಗೆ ಡಿಕೆಶಿ ಕ್ಲಾಸ್

By Ramesh B  |  First Published Mar 17, 2022, 8:27 PM IST

* ಮಾಜಿ ಸಚಿವೆ ಮೋಟಮ್ಮ ವಿರುದ್ಧ ಹರಿಹಾಯ್ದ ಡಿಕೆಶಿ
* ಕಾಫಿನಾಡು ಚಿಕ್ಕಮಗಳೂರು ಕಾಂಗ್ರೆಸ್ ಪಕ್ಷದ  ಡಿಜಿಟಲ್ ಸದಸ್ಯತ್ವದಲ್ಲಿ ಕಳಪೆ ಸಾಧನೆ
* ಸಭೆಯಲ್ಲಿ ಜಿಲ್ಲಾ ನಾಯಕರ ವಿರುದ್ದ ಕೆಪಿಸಿಸಿ  ಅಧ್ಯಕ್ಷರ ಅಸಮಾಧನ


ವರದಿ : ಆಲ್ದೂರು ಕಿರಣ್,  ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು, (ಮಾ.17):
ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಮಾತ್ರ ಬಾಕಿ ಇದ್ದು, ಈ ಬಾರಿ ತಮ್ಮ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.

ಅದರಲ್ಲಿ ಪ್ರಮುಖವಾಗಿ ಪಕ್ಷ ಸಂಘಟನೆಗೆ ಸಂಬಂಧಿಸಿಂತೆ ಕಾಂಗ್ರೇಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಶುರುಮಾಡಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಇದನ್ನು ಪಾಡಬೇಕು ಎಂದು ಖಡಕ್ ಸೂಚನೆ ರವಾನಿಸಿದ್ದಾರೆ. ಆದ್ರೆ, ಕಾಫಿನಾಡು ಚಿಕ್ಕಮಗಳೂರು ಕಾಂಗ್ರೆಸ್‌ ಪಕ್ಷದ  ಡಿಜಿಟಲ್ ಸದಸ್ಯತ್ವದಲ್ಲಿ ಕಳಪೆ ಸಾಧನೆ ಆಗಿದೆ.  ಹಿನ್ನೆಲೆಯಲ್ಲಿ ಕೆಪಿಸಿಸಿ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ.

Tap to resize

Latest Videos

Karnataka Congress: ಡಿಕೆಶಿ ದಿಲ್ಲಿಗೆ: ಪದಾಧಿಕಾರಿಗಳ ನೇಮಕ ಫೈನಲ್‌?

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ಪ್ರಗತಿ ಪರೀಶಿಲನಾ ಸಭೆ ಸ್ವ ಪಕ್ಷದ ಮುಖಂಡರಲ್ಲಿ ಇದ್ದ ಅಸಮಾಧಾನಕ್ಕೂ ಒಂದು ವೇದಿಕೆಯಾಗಿ ಪರಿಣಮಿಸಿತು. ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್ಸಿಗೆ ಹೊಸ ಹುಮ್ಮಸ್ಸು ನೀಡಲು ಬಂದಂತಹ ಕೆಪಿಸಿಸಿ ಅಧ್ಯಕ್ಷರಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಳಪೆ ಪ್ರದರ್ಶನ ತೀವ್ರ ಮುಜುಗರ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಜಿಲ್ಲೆಯ ಪ್ರಮುಖ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಹೌದು... ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ನಾರಾಯಣಗುರು ಸಭಾಭವನದಲ್ಲಿ ನಡೆದ  ಕಾಂಗ್ರೇಸ್ ಪಕ್ಷದ ಡಿಜಿಟಲ್ ಸದಸ್ಯತ್ವ ಅಭಿಯಾನದ ಪ್ರಗತಿಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯ ಮಟ್ಟದ ನಾಯಕರು ಸೇರಿದಂತೆ ಜಿಲ್ಲೆಯ ಎಲ್ಲಾ ಪ್ರಮುಖರು, ಪಕ್ಷದ ಮುಖಂಡರು ಭಾಗವಹಿಸಿದ್ದರು.

ಸಭೆಯಲ್ಲಿ ಪ್ರತಿ ತಾಲ್ಲೂಕಿನ ಕಾಂಗ್ರೇಸ್ ಪಕ್ಷದ ಸದಸ್ಯತ್ವ ನೋಂದಣಿ ಬಗ್ಗೆ ಸ್ವತ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪರಿಶೀಲನೆ ನಡೆಸಿದರು.ಈ ವೇಳೆಯಲ್ಲಿ ತರೀಕೆರೆ ತಾಲ್ಲೂಕ್ ಹೊರತುಪಡಿಸಿ ಉಳಿದ 8 ತಾಲ್ಲೂಕಿನಲ್ಲೂ ಕಾಂಗ್ರೇಸ್ ಡಿಜಿಟಲ್ ಸದಸ್ಯತ್ವ ಅಭಿಯಾನ ಕಳಪೆಯಾಗಿದೆ ಎಂದು  ಪಕ್ಷದ ನಾಯಕರ ವಿರುದ್ದವೇ ಅಸಮಾಧನವನ್ನು ಹೊರಹಾಕಿದರು.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿಡಿ ರಾಜೇಗೌಡರಿಗೆ ನೀವು ವಿಧಾನಸಭೆ ಕಲಾಪಗಳಿಗೆ ಹಾಜರಾಗದಿದ್ದರೆ ತೊಂದರೆ ಇಲ್ಲ ,ನೀವು ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವವನ್ನು ಅಭಿಯಾನದಲ್ಲಿ ಕ್ರಿಯಾಶೀಲರಾಗಿ ತೊಡಗಿಕೊಳ್ಳಬೇಕು ಎಂದು ಚಾಟಿ ಬೀಸಿದರು. ಇನ್ನು ಇಡೀ ಜಿಲ್ಲೆಯ ನಾಯಕರು ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿಯಲ್ಲಿ ಭಾರೀ ಹಿಂದೆದ್ದು ಈ ಬಗ್ಗೆ  ಮುಖಂಡರನ್ನ ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.

ಸದಸ್ಯತ್ವ ಅಭಿಮಾನದ ಬಗ್ಗೆ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶ್ ಮಂತ್ ಗೂ ಕ್ಲಾಸ್ ತೆಗೆದುಕೊಂಡು ನಿಮ್ಮ ಬಗ್ಗೆ ನಂಬಿಕೆ ಇತ್ತು, ಆದರೆ ಕಳೆದುಕೊಂಡು ಬಿಟ್ರಿ ,ಚಿಕ್ಕಮಗಳೂರಿನ ಜನರು ವಿದ್ಯಾವಂತರಿದ್ದಾರೆ, ಬುದ್ದಿವಂತರಿದ್ದಾರೆ, ಪ್ರಜ್ಞಾವಂತರಿದ್ದಾರೆ, ಆದರೆ ನಿಮಗೆ ಯಾಕೆ ಸದಸ್ಯತ್ವ ನೋಂದಣಿ ಮಾಡಿಸೋಕೆ ಆಗ್ತಿಲ್ಲ ಎಂದು ಅಸಮಾಧ ಹೊರ ಹಾಕಿದರು. 

ಈ ವೇಳೆಯಲ್ಲಿ ಮಾಜಿ ಸಚಿವ ಮೋಟಮ್ಮ ಮಗಳಾದ ನಯನ ಮೋಟಮ್ಮ ಎದ್ದುನಿಂತು ನನಗೆ ಜವಾಬ್ದಾರಿ ಕೊಟ್ಟರೆ ಸದಸ್ಯತ್ವ ನೋಂದಣಿ ಮಾಡುವೆ ಅಂದ್ರು. ಇದಕ್ಕೆ ಗರಂ ಆದ ಡಿಕೆಶಿ ನಯನ ಮೋಟಮ್ಮಗೆ ನಿಮ್ಮ ತಾಯಿಯನ್ನು ಎಂಎಲ್ಎ ಮಾಡಿದ್ದೇವೆ, ಎಂಎಲ್ಸಿ ಮಾಡಿದ್ದೇವೆ, ಇಷ್ಟಾದರೂ ನಾನು ಹಂಗೂ ಇಲ್ಲ ಹಿಂಗೂ ಇಲ್ಲ ಅಂತಾದ್ರೆ ಯಾರ್ ಕೇಳ್ತಾರೆ ಎಂದು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ್ರು.

ನಮ್ಮ ಪಕ್ಷಕ್ಕೆ ಆಧಾರಸ್ತಂಭ ಮೆಂಬರ್ ಶಿಪ್ ,ನಿಮ್ಮ ಕಳಪೆ ಸಾಧನೆ ಕಂಡು ನನಗೆ ದುಃಖ ಆಗುತ್ತಿದೆ, ನೋವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿ ಸದಸ್ಯತ್ವ ನೋಂದಣಿ ಮಾಡಿ ಎಂದರು.

ತದನಂತರಸಭೆ ಮುಗಿಸಿ ಹೊರ ಬರುವ ವೇಳೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಳಿಗೆ ತೆರಳಿದ ಮೋಟಮ್ಮ ಕ್ಷಮೆಯಾಚನೆ ಮಾಡಿದ್ರು. ಆ ವೇಳೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮಗೆ ಡಿಕೆಶಿ ಅವಮಾನ ಮಾಡಿದ್ರಾ ಎನ್ನು ಪ್ರಶ್ನೆಯೂ ಉದ್ಭವ ವಾಯಿತು. 

ಮೂಡಿಗೆರೆಯಲ್ಲಿ ಡಿಜಿಟಲ್ ಸದಸ್ಯತ್ವ ಹಿನ್ನಡೆ ಬಗ್ಗೆ ಸಮಾಜಾಹಿಷಿ ನೀಡಲು ಕಾರು ಬಳಿ ಬಂದು ಕ್ಷಮೆ ಕೇಳಿದ ಹಿರಿಯ ನಾಯಕಿ ಮೋಟಮ್ಮಗೆ ನೋ....ನೋ.... ಸಾರಿ... ಮಾತನಾಡಬೇಡಿ ಎಂದ ಡಿ.ಕೆ.ಶಿವಕುಮಾರ್  ಹೇಳಿ  ಕಾರು ಏರಿ ಮೊದಲು ಮೆಂಬರ್ಶಿಪ್ ಮಾಡಿ ಎಂದು ಹೊರಟರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೋಟಮ್ಮ ಪಕ್ಷದ ಅಧ್ಯಕ್ಷರಿಗೆ ಸಭೆ ಬರಲು ತಡವಾಗಿ ಬಂದ  ಬಗ್ಗೆ ಮಾಹಿತಿ ನೀಡಲು ಹೋಗಿದ್ದೆ ಎಂದು ಹೇಳಿ ಹೋದರು.

click me!