Karnataka Politics: ಆಪರೇಷನ್‌ ಕಮಲದ ಭೀತಿ, ಬಳ್ಳಾರಿ ಕಾಂಗ್ರೆಸಿಗರು ರೆಸಾರ್ಟ್‌ಗೆ

By Kannadaprabha NewsFirst Published Mar 17, 2022, 6:06 AM IST
Highlights

* ಆಪರೇಷನ್‌ ಕಮಲದ ಭೀತಿ, ಬಳ್ಳಾರಿ ಕಾಂಗ್ರೆಸಿಗರು ರೆಸಾರ್ಟ್ ಗೆ
* ಪಾಲಿಕೆ ಮೇಯರ್  ಚುನಾವಣೆ ಹಿನ್ನೆಲೆ
* ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿರುವ ಪಕ್ಷೇತರರು
* ಬಳ್ಳಾರಿಯಲ್ಲಿ ಹೊಸ ರಾಜಕಾರಣ

ಬಳ್ಳಾರಿ(ಮಾ. 17)  ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣೆ ಮಾ.19ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಆಪರೇಷನ್‌ ಕಮಲ ಭೀತಿಯಲ್ಲಿರುವ ಕಾಂಗ್ರೆಸ್‌ (Congress) ತನ್ನ ಪಕ್ಷದ ಪಾಲಿಕೆ ಸದಸ್ಯರನ್ನು ಬೆಂಗಳೂರಿನ (Bengaluru) ಖಾಸಗಿ ರೆಸಾರ್ಟ್‌ಗೆ ಸ್ಥಳಾಂತರ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK Shivakumar) ಅವರ ಸೂಚನೆಯಂತೆ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಮಹ್ಮದ್‌ ರಫೀಕ್‌ ನೇತೃತ್ವದಲ್ಲಿ ಕಾಂಗ್ರೆಸ್‌ನ 21 ಮತ್ತು ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿರುವ 4 ಪಕ್ಷೇತರ ಸದಸ್ಯರನ್ನು ಬೆಂಗಳೂರಿನ ಗೋಲ್ಡ್‌ಫಿಂಚ್‌ ರೆಸಾರ್ಟ್‌ಗೆ ಬುಧವಾರ ಕಳುಹಿಸಿಕೊಡಲಾಯಿತು. ಮಾ.18ರಂದು ಪಾಲಿಕೆ ಸದಸ್ಯರನ್ನು ಬೆಂಗಳೂರಿನಿಂದ ಬಳ್ಳಾರಿಗೆ ಕರೆತರಲಾಗುವುದು.

Latest Videos

ಮಹಾನಗರ ಪಾಲಿಕೆಯಲ್ಲಿ 39 ಸದಸ್ಯ ಬಲವಿದೆ. ಈ ಪೈಕಿ 21 ಕಾಂಗ್ರೆಸ್‌ ಹಾಗೂ 13 ಬಿಜೆಪಿ ಸದಸ್ಯರಿದ್ದಾರೆ. ಐವರು ಪಕ್ಷೇತರರಿದ್ದಾರೆ. ಪಕ್ಷೇತರರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದು, ಕಾಂಗ್ರೆಸ್‌ ಸರಳ ಬಹುಮತದೊಂದಿಗೆ ಪಾಲಿಕೆ ಅಧಿಕಾರ ಹಿಡಿಯುವಷ್ಟುಶಕ್ತವಾಗಿದೆ. ಈ ನಡುವೆ ಮಾಜಿ ಸಚಿವ ಜನಾರ್ದನ ರೆಡ್ಡಿ ಆಪ್ತ ಸಹಾಯಕ ಆಲಿಖಾನ್‌ ಕಾಂಗ್ರೆಸ್‌ ಸದಸ್ಯರನ್ನು ಸೆಳೆಯಲು ಭಾರಿ ಮೊತ್ತದ ಹಣ ಹಾಗೂ ದುಬಾರಿ ಕಾರು ಗಿಫ್ಟ್‌ ನೀಡುವುದಾಗಿ ಆಮಿಷವೊಡ್ಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು. ಇನ್ನು ಕೆಲ ಕಾಂಗ್ರೆಸ್‌ ಸದಸ್ಯರೇ ಬಿಜೆಪಿ ನಾಯಕರನ್ನು ಸಂಪರ್ಕ ಮಾಡುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸದಸ್ಯರನ್ನು ಒಂದೆಡೆ ಇರಿಸಿಕೊಳ್ಳಲು ರೆಸಾರ್ಟ್‌ಗೆ ಕಳುಹಿಸಲಾಗಿದೆ.

Karnataka Congress: ಪಂಚರಾಜ್ಯ ಸೋಲಿನಲ್ಲೂ ಹಲವು ಸಕಾರಾತ್ಮಕ ಅಂಶ ಸಿಕ್ಕಿದೆ: ಡಿಕೆಶಿ

'ಕಾಂಗ್ರೆಸ್‌ ಹೆದರಿದೆ'  ಸಿದ್ದರಾಮಯ್ಯ ಗರಂ:  ಕರ್ನಾಟಕ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಕಾಂಗ್ರೆಸ್‌ ಸದಸ್ಯರ ಸಂಖ್ಯೆ ಕಡಿಮೆ ಇದ್ದ ಬಗ್ಗೆ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಭಯದಿಂದ ಯಾರೂ ಬಂದಿಲ್ಲ ವ್ಯಂಗ್ಯವಾಡಿದ್ದು, ಈ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಡಳಿತ ಪಕ್ಷದವರನ್ನು ತರಾಟೆಗೆ ತೆಗೆದುಕೊಂಡರು.

ಬುಧವಾರ ಭೋಜನ ವಿರಾಮದ ಬಳಿಕ ಸದನ ಸೇರಿದಾಗ ಕೆಲ ನಿಮಿಷಗಳ ಕಾಲ ಪ್ರತಿಪಕ್ಷದ ಮೊದಲ ಮೂರು ಸಾಲುಗಳು ಖಾಲಿ ಇತ್ತು. ಇದಕ್ಕೆ ಸಚಿವ ಆರ್‌.ಅಶೋಕ್‌, ನಾವು ಗೈರು ಹಾಜರಾಗಿದ್ದರೆ ಆಡಳಿತ ಪಕ್ಷದ ಸದಸ್ಯರು, ಸಚಿವರು ಬಂದಿಲ್ಲ ಎಂದು ವಿಪಕ್ಷದವರು ಟೀಕಿಸುತ್ತಾರೆ. ಇದೀಗ ಪಂಚರಾಜ್ಯ ಚುನಾವಣೆ ಫಲಿತಾಂಶ, ಸಿಎಂ ಉತ್ತರಕ್ಕೆ ಹೆದರಿ ಹೆಚ್ಚು ಮಂದಿ ಬಂದಿಲ್ಲ ಎಂದು ವ್ಯಂಗ್ಯವಾಡಿದರು.

ಈ ವೇಳೆ ಆಗಮಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಆರ್‌.ಅಶೋಕ್‌ ಅವರ ಹೇಳಿಕೆಯನ್ನು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿವರಿಸಿದರು. ಅಲ್ಲದೆ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಬಂದ ಮೇಲೆ ಪ್ರತಿಪಕ್ಷದ ಎಲ್ಲರೂ ಇದ್ದಂತೆ ಎಂದು ಸಮರ್ಥಿಸಿದರು.

ಇದಕ್ಕೆ ಸಿದ್ದರಾಮಯ್ಯ, ನಮಗೇಕೆ ಭಯ ಆಗುತ್ತದೆ ಮಿಸ್ಟರ್‌ ಅಶೋಕ್‌. ನಾವೇನು ಬಜೆಟ್‌ ಮಂಡಿಸಿದ್ದೇವೆ. ಬಜೆಟ್‌ ಹೆಸರಿನಲ್ಲಿ ಸುಳ್ಳು ಲೆಕ್ಕ ಕೊಟ್ಟಿದ್ದೀವಾ? ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸುತ್ತಿದ್ದೀವಾ? ಎಂದು ತರಾಟೆಗೆ ತೆಗೆದುಕೊಂಡರು.

ವಾರದಿಂದ ಒಬ್ಬ ಮಂತ್ರಿಯೂ ಪತ್ತೆ ಇರಲಿಲ್ಲ. ಮೊದಲ ಸಾಲು ಖಾಲಿ ಇರುವ ಬಗ್ಗೆ ನಾವೇ ಆಕ್ಷೇಪ ವ್ಯಕ್ತಪಡಿಸಿದ್ದೆವು. ನಿಮ್ಮ ಮುಖ್ಯ ಸಚೇತಕರು ಹುಡುಕಿಕೊಂಡು ಬಂದು ನಿಮ್ಮನ್ನು ಕೂರಿಸಬೇಕಾಗಿತ್ತು. ಸದನ ನಡೆಸಬೇಕೆಂಬ ಜವಾಬ್ದಾರಿ ಆಡಳಿತ ಪಕ್ಷದವರಿಗೆ ಇರಬೇಕೋ? ವಿಪಕ್ಷದವರಿಗೆ ಇರಬೇಕೋ? ನಮಗೇಕೆ ಭಯ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಪೀಕರ್‌ ಕಾಗೇರಿ ಸಮಾಧಾನ ಪಡಿಸಿದರು.

click me!