2 ತಿಂಗಳಲ್ಲಿ ಡಿ.ಕೆ. ಶಿವಕುಮಾರ ಸಿಎಂ : ದೇವಿ ಆರಾಧಕಿ ಭವಿಷ್ಯವಾಣಿ ವಿಡಿಯೋ ವೈರಲ್

Kannadaprabha News   | Kannada Prabha
Published : Nov 24, 2025, 07:55 AM IST
DK Shivakumar

ಸಾರಾಂಶ

"ಹುಲ್ಲಿಗೆಮ್ಮ ದೇವಿ ಹೇಳಿದ್ದಾಳೆ, ಡಿ.ಕೆ. ಶಿವಕುಮಾರ್, ನೀವು ಚಿಂತೆ ಮಾಡಬೇಡಿ. ಮುಖ್ಯಮಂತ್ರಿ ಆಗುತ್ತಾರೆ. ಅಲ್ಲದೇ, ಎರಡು ತಿಂಗಳ ಒಳಗಾಗಿ ಡಿ.ಕೆ. ಶಿವಕುಮಾರ ಅವರು ಸಿಎಂ ಆಗುತ್ತಾರೆ. ಅವರು ಮುಂದಿನ ಎರಡೂವರೆ ವರ್ಷಗಳ ಕಾಲ ರಾಜ್ಯವನ್ನು ಆಳುತ್ತಾರೆ " ಎಂದು ಭೈಲಮ್ಮ ಬಾಳಮಣ್ಣವರ ನುಡಿದಿದ್ದಾರೆ.

ಗದಗ: ರಾಜ್ಯ ರಾಜಕೀಯ ವಲಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ನಡುವಿನ ಮುಖ್ಯಮಂತ್ರಿ ಸ್ಥಾನದ ಹಂಚಿಕೆಯ ವಿವಾದ ಸದ್ದಿಲ್ಲದೆ ನಡೆಯುತ್ತಿರುವಾಗಲೇ, ಗದುಗಿನ ದೇವಿ ಆರಾಧಕಿ ಭೈಲಮ್ಮ ಬಾಳಮಣ್ಣವರ ಎಂಬವರು ಡಿ.ಕೆ. ಶಿವಕುಮಾರ ಅವರು ಸಿಎಂ ಆಗುತ್ತಾರೆ ಎಂದು ಹೇಳಿರುವ ಭವಿಷ್ಯವಾಣಿಯೊಂದು ವೈರಲ್‌ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಹುಲಿಗೆಮ್ಮದೇವಿ ಆರಾಧಕಿಯಾಗಿರುವ ಗದುಗಿನ ರಾಚೋಟೇಶ್ವರ ನಗರದ ನಿವಾಸಿ ಭೈಲಮ್ಮ ಬಾಳಮಣ್ಣವರ ಅವರು, ದೇವರ ಗದ್ದುಗೆ ಹಾಕಿ, ದೇವಿ ಕೊಡ(ಬಿಂದಿಗೆ) ಎತ್ತುವ ಮೂಲಕ ನುಡಿದಿರುವ ಭವಿಷ್ಯ ನುಡಿದಿದ್ದಾರೆ.

ಭೈಲಮ್ಮ ಬಾಳಮಣ್ಣವರ ನುಡಿದ ಭವಿಷ್ಯವಾಣಿ

"ಹುಲ್ಲಿಗೆಮ್ಮ ದೇವಿ ಹೇಳಿದ್ದಾಳೆ, ಡಿ.ಕೆ. ಶಿವಕುಮಾರ್, ನೀವು ಚಿಂತೆ ಮಾಡಬೇಡಿ. ಮುಖ್ಯಮಂತ್ರಿ ಆಗುತ್ತಾರೆ. ಅಲ್ಲದೇ, ಎರಡು ತಿಂಗಳ ಒಳಗಾಗಿ ಡಿ.ಕೆ. ಶಿವಕುಮಾರ ಅವರು ಸಿಎಂ ಆಗುತ್ತಾರೆ. ಅವರು ಮುಂದಿನ ಎರಡೂವರೆ ವರ್ಷಗಳ ಕಾಲ ರಾಜ್ಯವನ್ನು ಆಳುತ್ತಾರೆ " ಎಂದು ಭೈಲಮ್ಮ ಬಾಳಮಣ್ಣವರ ನುಡಿದಿದ್ದಾರೆ.

​ಸಿದ್ದರಾಮಯ್ಯನವರು ಡಿ.ಕೆ. ಶಿವಕುಮಾರ್ ಅವರನ್ನು ತಮ್ಮನಂತೆ ನೋಡಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಹತ್ತಿರ ಕಪಟ ಬುದ್ಧಿ ಇಲ್ಲ. ಹೀಗಾಗಿ ಅವರು ಖುಷಿ ಖುಷಿಯಿಂದಲೇ ಸ್ಥಾನ ಬಿಟ್ಟುಕೊಡುತ್ತಾರೆ ಎಂದು ಭವಿಷ್ಯ ಹೇಳಿದ್ದಾರೆ. ಕೆಲವೊಂದಿಷ್ಟು ಜನರು ಕಾಯ್ದು ಕುಳಿತಿದ್ದಾರೆ. ನಾನು ಸಿಎಂ ಆಗಬೇಕು, ನೀನು ಆಗಬೇಕು ಎಂದು. ಇಬ್ಬರ ಕಚ್ಚಾಟದಲ್ಲಿ ಮೂರನೆಯವರಿಗೆ ಲಾಭ ಆಗುವುದೆಂದು ಕುಳಿತಿದ್ದಾರೆ. ಆದರೆ, ಅವರ್ಯಾರು ಸಿಎಂ ಆಗುವುದಿಲ್ಲ. ಡಿ.ಕೆ. ಶಿವಕುಮಾರ್ ಅವರೇ ಸಿಎಂ ಆಗುವುದು ಗ್ಯಾರಂಟಿ ಎಂದು ಭೈಲಮ್ಮ ತಿಳಿಸಿದ್ದಾರೆ.

ತೀವ್ರ ಕುತೂಹಲ

ಹುಲಿಗೆಮ್ಮದೇವಿ ನೀಡಿರುವ ಭವಿಷ್ಯವಾಣಿ ಸುಳ್ಳು ಆಗುವುದಿಲ್ಲ ಎಂದು ಭೈಲಮ್ಮ ಬಾಳಮಣ್ಣವರ ದೃಢವಾಗಿ ಹೇಳಿದ್ದಾರೆ. ಸಿಎಂ ಆದ ಬಳಿಕ ಡಿ.ಕೆ. ಶಿವಕುಮಾರ್ ಅವರು ದೇವಿಯನ್ನು ನೆನಪಿಸಿಕೊಂಡು ಮುಂದಿನ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದ್ದಾರೆ. ​ಈ ಭವಿಷ್ಯವಾಣಿಯು ರಾಜ್ಯದ ಆಡಳಿತ ಮತ್ತು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ