ಸೀಡಿ ತೋರಿಸಿ ಕಾಂಗ್ರೆಸ್‌ ಸೇರುವಂತೆ ಡಿಕೆಶಿ ಬೆದರಿಕೆ : ರಮೇಶ್ ಜಾರಕಿಹೊಳಿ

By Kannadaprabha News  |  First Published Mar 14, 2023, 6:33 AM IST

ಕಾಂಗ್ರೆಸ್‌ನ ಮಹಾನಾಯಕನಿಗೆ ಸಿಡಿ ಮಾಡುವುದೇ ಉದ್ಯೋಗ. ಈ ಹಿಂದೆ ನನ್ನ ಸಿಡಿ ಕೇಸ್‌ ಹೊರಬಂದಾಗ ನನ್ನದು ಅದೇ ಉದ್ಯೋಗ ಎಂದು ನನ್ನ ಮಗ ಅಮರನಾಥ ಬಳಿ ಆತನೇ ಸ್ಪಷ್ಟವಾಗಿ ಹೇಳಿದ್ದಾನೆ. ಬೇಕಿದ್ದರೆ ಈ ಬಗ್ಗೆ ದೇವಿ ಮೇಲೆ ಆಣೆ ಮಾಡಲು ಸಿದ್ಧ. ಸೀಡಿ ತೋರಿಸಿ ಕಾಂಗ್ರೆಸ್‌ ಸೇರಲು ನಾಯಕರಿಗೆ ಆತ ಬೆದರಿಕೆ ಹಾಕುತ್ತಾನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(KPCC president DK Shivakumar) ವಿರುದ್ಧ ಗೋಕಾಕ ಶಾಸಕ ರಮೇಶ ಜಾರಕಿಹೊಳಿ(Ramesh Jarkiholi) ಏಕವಚನದಲ್ಲಿಯೇ ಟೀಕಾಪ್ರಹಾರ ನಡೆಸಿದ್ದಾರೆ.


ಗೋಕಾಕ (ಮಾ.14) : ಕಾಂಗ್ರೆಸ್‌ನ ಮಹಾನಾಯಕನಿಗೆ ಸಿಡಿ ಮಾಡುವುದೇ ಉದ್ಯೋಗ. ಈ ಹಿಂದೆ ನನ್ನ ಸಿಡಿ ಕೇಸ್‌ ಹೊರಬಂದಾಗ ನನ್ನದು ಅದೇ ಉದ್ಯೋಗ ಎಂದು ನನ್ನ ಮಗ ಅಮರನಾಥ ಬಳಿ ಆತನೇ ಸ್ಪಷ್ಟವಾಗಿ ಹೇಳಿದ್ದಾನೆ. ಬೇಕಿದ್ದರೆ ಈ ಬಗ್ಗೆ ದೇವಿ ಮೇಲೆ ಆಣೆ ಮಾಡಲು ಸಿದ್ಧ. ಸೀಡಿ ತೋರಿಸಿ ಕಾಂಗ್ರೆಸ್‌ ಸೇರಲು ನಾಯಕರಿಗೆ ಆತ ಬೆದರಿಕೆ ಹಾಕುತ್ತಾನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(KPCC president DK Shivakumar) ವಿರುದ್ಧ ಗೋಕಾಕ ಶಾಸಕ ರಮೇಶ ಜಾರಕಿಹೊಳಿ(Ramesh Jarkiholi) ಏಕವಚನದಲ್ಲಿಯೇ ಟೀಕಾಪ್ರಹಾರ ನಡೆಸಿದ್ದಾರೆ.

ತಾಲೂಕಿನ ಅಂಕಲಗಿ ಪಟ್ಟಣದಲ್ಲಿ ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಲದಿಂದ ಹಮ್ಮಿಕೊಂಡ ಬೃಹತ್‌ ಬಿಜೆಪಿ ಸಮಾವೇಶ(Gokak BJP convention) ಉದ್ಘಾಟಿಸಿ ಅವರು ಮಾತನಾಡಿದರು. ‘ನೀ ಬರ್ತಿಯೋ, ಇಲ್ಲಾ ಸಿಡಿ ಬಿಡುಗಡೆ ಮಾಡಲೋ ಎಂದು ನಮ್ಮ ಕೆಲವು ಮಂತ್ರಿಗಳಿಗೆ ಹೆದರಿಸುತ್ತಿದ್ದಾನೆ. ನಮ್ಮ ಪಕ್ಷಕ್ಕೆ ಬಾಂಬೆಯಿಂದ ಬಂದವರಿಗೆ ಸಿಡಿ ಬಿಡುತ್ತೀನಿ ನೋಡು ಎಂದು ಹೆದರಿಸುತ್ತಿದ್ದಾನೆ. ಆತನ ಕೃತ್ಯದ ಬಗ್ಗೆ ನನ್ನ ಕಡೆಯೂ ದಾಖಲೆ ಇದೆ, ಆದರೆ, ಅದನ್ನು ಬಿಡುಗಡೆ ಮಾಡಲ್ಲ. ಅವನ ಪತ್ನಿಯೂ ನನ್ನ ತಂಗಿ, ಅವರ ಹಾಗೇ ಮನೆ ಮುರಿಯೋದು ಬೇಡ. ಇಂತಹ ಕೃತ್ಯಕ್ಕೆ ನಾನು ಮುಂದಾಗುವುದಿಲ್ಲ. ಬೇಕಿದ್ದರೆ ಕನಕಪುರಕ್ಕೆ ಬಾ ಅಂದ್ರೆ ಅಲ್ಲಿಗೇ ಹೋಗಲು ಸಿದ್ಧ. ಬಹಿರಂಗವಾಗಿ ಹೋರಾಟ ನಡೆಸೋಣ’ ಎಂದು ಸವಾಲು ಹಾಕಿದರು.

Tap to resize

Latest Videos

Prajadhwani yatre: 17ರಂದು ಗೋಕಾಕನಲ್ಲಿ ಪ್ರಜಾಧ್ವನಿ ಸಮಾವೇಶಕ್ಕೆ ಭರ್ಜರಿ ಸಿದ್ಧತೆ

ರಮೇಶ ಜಾರಕಿಹೊಳಿ ವಿರುದ್ಧ ಲಿಂಗಾಯತರು, ಮುಸ್ಲಿಂ, ಹಿಂದುಳಿದವರು ಸೇರಿದಂತೆ ಇತರರನ್ನು ಎತ್ತಿ ಕಟ್ಟುವುದು ಮಹಾನಾಯಕನ ಕೆಲಸವಾಗಿದೆ. ಆದರೆ, ನಾನು ಎಂದಿಗೂ ಯಾವುದೇ ಸಮಾಜದ ವಿರುದ್ಧ ಇಲ್ಲ. ನನಗೆ ಜಾತಿ, ಭೇದ ಎನ್ನುವುದು ಗೊತ್ತಿಲ್ಲ. ಚುನಾವಣೆ ಬಂದಾಗ ಹೀಗೆ ಎತ್ತಿಕಟ್ಟುವುದೇ ಆತನ ಕೆಲಸವಾಗಿದೆ. ಜಾತಿ, ಜಾತಿಗಳ ವಿರುದ್ಧ ಎತ್ತಿ ಕಟ್ಟುವುದೇ ಮಹಾನಾಯಕನ ಕೆಲಸ ಎಂದು ಕಿಡಿ ಕಾರಿದರು.

ಸುಳ್ಳು ಭರವಸೆ ನೀಡಿ ಮತ ಪಡೆಯಬೇಡಿ ಎನ್ನುವುದು ಬಿಜೆಪಿ ಸಿದ್ಧಾಂತ. ಈ ಬಗ್ಗೆ ನಮ್ಮ ನಾಯಕರಾದ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರು ನಮಗೆ ವಾರ್ನಿಂಗ್‌ ಮಾಡಿದ್ದಾರೆ. ಆದರೆ, ಕಾಂಗ್ರೆಸ್ಸಿನ ಸ್ವಯಂಘೋಷಿತ ನಾಯಕರು ಮತ್ತು ನಾಯಕಿಯರು ಗ್ಯಾರಂಟಿ ಕಾರ್ಡ್‌ ನೀಡುತ್ತಿದ್ದಾರೆ. ಅವರನ್ನು ಎಂದಿಗೂ ನಂಬಬೇಡಿ ಎಂದರು.

'ಮೈದಾನ ಖುಲ್ಲಾ ಹೈ' ಎಂದು ಹಿರೋಯಿನ್‌ ತರ ಹೇಳಿ ಈಗೇಕೆ ಅಳುತ್ತಿರುವೆ? ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಜಾರಕಿಹೊಳಿ ವಾಗ್ದಾಳಿ

ಮಾ.25ರೊಳಗೆ ಗೋಕಾಕ್‌ನಲ್ಲಿ 1 ಲಕ್ಷ ಜನ ಸೇರಿಸಿ ಬೃಹತ್‌ ಸಮಾವೇಶ ಮಾಡುತ್ತೇನೆ. ಮತ್ತೊಮ್ಮೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ. ಮುಂದಿನ ಲೋಕಸಭಾ ಚುನಾವಣೆಗೂ ಪ್ರಧಾನಿ ನರೇಂದ್ರ ಮೋದಿ ಆಯ್ಕೆಯಾಗುವುದು ಖಚಿತ. ಮೋದಿ ಅವರಿಂದಾಗಿ ಇಂದು ಇಡೀ ದೇಶದ ಚಿತ್ರಣವೇ ಬದಲಾಗಿದೆ. ಮುಂದಿನ ದಿನಗಳಲ್ಲಿ ಅಮೆರಿಕವನ್ನು ಹಿಂದಿಕ್ಕಿ ಭಾರತವೇ ವಿಶ್ವದ ದೊಡ್ಡಣ್ಣ ಆಗುವುದು ಖಚಿತ ಎಂದರು.

click me!