Ticket fight: ಕಾರ್ಯಕರ್ತನಿಗೆ ಹಾಸನ ಟಿಕೆಟ್ ಹೇಳಿಕೆಗೆ ನಾನು ಬದ್ಧ: ಎಚ್‌ಡಿ ಕುಮಾರಸ್ವಾಮಿ

By Kannadaprabha News  |  First Published Mar 14, 2023, 5:38 AM IST

 ‘ಹಾಸನ ಕ್ಷೇತ್ರದಲ್ಲಿ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ, ಗೆಲ್ಲಿಸುವ ತಾಕತ್ತಿದೆ’ ಎಂಬ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ಮಾಚ್‌ರ್‍ 18ರೊಳಗೆ ಎಲ್ಲವೂ ಸುಗಮವಾಗಿ ತೀರ್ಮಾನವಾದರೆ ಅಂದು ಹಾಸನದಲ್ಲಿ ಪಂಚರತ್ನ ಕಾರ್ಯಕ್ರಮ ನಡೆಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ತಿಳಿಸಿದರು.


ಚನ್ನರಾಯಪಟ್ಟಣ (ಮಾ.14) : ‘ಹಾಸನ ಕ್ಷೇತ್ರದಲ್ಲಿ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ, ಗೆಲ್ಲಿಸುವ ತಾಕತ್ತಿದೆ’ ಎಂಬ ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ಮಾಚ್‌ರ್‍ 18ರೊಳಗೆ ಎಲ್ಲವೂ ಸುಗಮವಾಗಿ ತೀರ್ಮಾನವಾದರೆ ಅಂದು ಹಾಸನದಲ್ಲಿ ಪಂಚರತ್ನ ಕಾರ್ಯಕ್ರಮ ನಡೆಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ(HD Kumaraswamy) ತಿಳಿಸಿದರು.

ಪಂಚರತ್ನ ಯಾತ್ರೆ(Pancharatna rathayatre) ನಿಮಿತ್ತ ನಗರಕ್ಕೆ ಆಗಮಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಪಕ್ಷದ ಅಭ್ಯರ್ಥಿಗಳ ಅಂತಿಮ ಪಟ್ಟಿಸಿದ್ಧವಾಗುತ್ತಿದೆ. ಶೀಘ್ರವೇ ಪಟ್ಟಿಬಿಡುಗಡೆ ಮಾಡಲಾಗುವುದು ಎಂದರು. ಮಂಡ್ಯಕ್ಕೆ ಮೋದಿ(Narendra Modi) ಭೇಟಿ ವಿಚಾರವಾಗಿ ಮಾತನಾಡಿ, ಕೆಲವು ಮಾಧ್ಯಮಗಳಲ್ಲಿ ಮೋದಿಯವರು ಮಂಡ್ಯಕ್ಕೆ ಬಂದ ತಕ್ಷಣ ದಳಪತಿಗಳಲ್ಲಿ ತಳಮಳ ಎಂದು ಬರೆದಿದ್ದಾರೆ. ಮೋದಿಯವರು ಇನ್ನೂ ಹತ್ತು ಬಾರಿ ಬಂದರೂ ನಮಗೆ ಭಯವಿಲ್ಲ ಎಂದರು.

Latest Videos

undefined

Karnataka election 2023: ಮಾ.17ಕ್ಕೆ ಕಾಂಗ್ರೆಸ್‌ ಮೊದಲ ಪಟ್ಟಿಬಿಡುಗಡೆ: ಸಿದ್ದರಾಮಯ್ಯ...

ಮೋದಿಯವರಿಗೆ ಸಂಸದೆ ಸುಮಲತಾ ಅವರು ಮಂಡ್ಯ ಬೆಲ್ಲ ನೀಡಿರುವುದರಲ್ಲಿ ತಪ್ಪೇನಿಲ್ಲ. ಮಂಡ್ಯ ಜಿಲ್ಲೆಯ ಜನ ಯಾರೇ ಹೋದರು ಪ್ರೀತಿಯಿಂದ, ಅಭಿಮಾನದಿಂದ ಸ್ವಾಗತ ಕೊಡುವಂತವರು. ಪ್ರಧಾನಿಯವರು ಮಂಡ್ಯ ಬೆಲ್ಲದ ಸವಿ ನೋಡಲಿ, ಸವಿಯನ್ನು ನೋಡಿಯಾದರೂ ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಗೆ ಒಳ್ಳೆಯ ಕಾರ್ಯಕ್ರಮ ಕೊಡಲಿ ಎನ್ನುವ ದೃಷ್ಟಿಯಲ್ಲಿ ಅವರು ಬೆಲ್ಲ ಕೊಟ್ಟಿರಬಹುದು. ಬೆಲ್ಲದ ಸವಿ ನೋಡಿದ ಮೋದಿ, ಮುಂದಿನ ದಿನಗಳಲ್ಲಾದರೂ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಕಾರ್ಯಕ್ರಮ ಕೊಡ್ತಾರಾ ನೋಡೋಣ ಎಂದು ವ್ಯಂಗ್ಯವಾಡಿದರು.

ಉರಿಗೌಡ, ನಂಜೇಗೌಡ ಫ್ಲೆಕ್ಸ್‌ ವಿಚಾರವಾಗಿ ಪ್ರತಿಕ್ರಿಯಿಸಿ, ಆ ವ್ಯಕ್ತಿಗಳು ಟಿಪ್ಪುವನ್ನು ಕುತಂತ್ರದಿಂದ ಕೊಂದಿದ್ದಾರೆ ಎನ್ನುವುದಕ್ಕೆ ಯಾವುದೇ ರೀತಿಯ ಇತಿಹಾಸವಿಲ್ಲ. ಆ ಇತಿಹಾಸ ಸೃಷ್ಟಿಮಾಡಿರುವುದು ಬಿಜೆಪಿಯವರು. ಆ ಇತಿಹಾಸವನ್ನು ಸೃಷ್ಟಿಮಾಡಿ, ನಮ್ಮ ಸಮಾಜದ ಇಬ್ಬರು ವ್ಯಕ್ತಿಗಳ ಹೆಸರನ್ನು ಇಟ್ಟು, ಒಕ್ಕಲಿಗ ಸಮಾಜಕ್ಕೆ ಬಿಜೆಪಿ ನಾಯಕರು ಅಗೌರವ ಸಲ್ಲಿಸಿದ್ದಾರೆ. ಒಕ್ಕಲಿಗರು ಇವರ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ ಎಂದರು.

ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ: ಸಿದ್ದರಾಮಯ್ಯ

click me!