ಡಿಕೆಶಿ ಸಿಎಂ ಆಗಲು ಪ್ಲಾನ್, ಸಿದ್ದರಾಮಯ್ಯ ಸುಮ್ಮನೆ ಕೂರಲ್ಲ: ಸಂಸದ ಜಗದೀಶ್ ಶೆಟ್ಟರ್

Published : Aug 28, 2025, 05:47 PM IST
DK Shivakumar

ಸಾರಾಂಶ

ಬಹಳಷ್ಟು ಕಾಂಗ್ರೆಸ್ ನಾಯಕರಲ್ಲಿ ಆರ್‌ಎಸ್‌ಎಸ್ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ. ರಾಹುಲ್ ಗಾಂಧಿ, ಖರ್ಗೆ ಅವರು ಕಲ್ಸಿದ್ದಕ್ಕೆ ವಿರೋಧ ಮಾಡ್ತಾರೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.

ಬೆಳಗಾವಿ (ಆ.28): ಡಿಕೆಶಿ ಅವರು ವಿಧಾನಸಭೆಯಲ್ಲಿ ಭಾವನೆಗಳನ್ನ ಹೊರ ಹಾಕಿದ್ದಾರೆ. ಮನಸ್ಸಿನ ಒಳಗೆ ಇದ್ದ ಭಾವನೆ ಹೊರ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಇದೀನಿ ಅಂತಾ ನಂತರ ನೆನಪಿಗೆ ಬಂದಿದೆ ಎಂದು ಸದನದಲ್ಲಿ ಡಿಸಿಎಂ ಡಿಕೆಶಿ ಆರ್‌ಎಸ್‌ಎಸ್ ಗೀತೆ ಹಾಡಿದ ವಿಚಾರವಾಗಿ ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದು ಹೀಗೆ. ನಂತರ ಮಾತನಾಡಿದ ಅವರು, ನಾನು ಹುಟ್ಟು ಕಾಂಗ್ರೆಸ್‌ನವನು ಅಂತಾ ಹೇಳಿದ್ರು. ಅದಕ್ಕೆ ಕ್ಷಮೆ ಕೇಳಬೇಕು ಅಂದ್ರೇ ಕ್ಷಮೆನೂ ಕೇಳ್ತೆನಿ ಅಂತಾ ಹೇಳಿದ್ರು. ಬಹಳಷ್ಟು ಕಾಂಗ್ರೆಸ್ ನಾಯಕರಲ್ಲಿ ಆರ್‌ಎಸ್‌ಎಸ್ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ. ರಾಹುಲ್ ಗಾಂಧಿ, ಖರ್ಗೆ ಅವರು ಕಲ್ಸಿದ್ದಕ್ಕೆ ವಿರೋಧ ಮಾಡ್ತಾರೆ ಎಂದರು.

ತುಷ್ಟೀಕರಣಕ್ಕಾಗಿ ವಿರೋಧ ಮಾಡಿಕೊಂಡು ಬರ್ತಿದ್ದಾರೆ. ಡಿಕೆ ಶಿವಕುಮಾರ್ ತಮ್ಮ ಮಾತನ್ನ ವಾಪಾಸ್ ಪಡೆದಿಲ್ಲ. ಬರೀ ಕ್ಷಮೆ ಕೇಳಿದ್ದಾರೆ ಎಂದರಲ್ಲದೇ ನಿಮ್ಮ ಮನಸ್ಸಿನಲ್ಲಿ ಎನಿದೆ ಅದರಂತೆ ನಡೆದುಕೊಳ್ಳಿ. ಯಾರದೋ ತುಷ್ಟಿಕರಣಕ್ಕಾಗಿ ಈ ರೀತಿ ಮಾಡಬೇಡಿ. ಮೋದಿಯವರು ಮಾಡಿದ ಯೋಜನೆ ಮುಸ್ಲಿಮರು ತಗೋಳ್ತಾರೆ. ಆದರೆ‌ ಕಾಂಗ್ರೆಸ್ ಅಲ್ಪಸಂಖ್ಯಾತರನ್ನ ವೋಟ್ ಸಲುವಾಗಿ ಇಟ್ಟುಕೊಂಡಿದೆ. ಕಾಂಗ್ರೆಸ್‌ನವರು ಕೂಡ ಈ ವರೆಗೂ ಅಲ್ಪಸಂಖ್ಯಾತರಿತೆ ಎನೂ ಮಾಡಿಲ್ಲ. ಡಿಕೆ ಶಿವಕುಮಾರ್ ಅವರು ಈ ರೀತಿ ಹೇಳಿಕೊಟ್ಟು ಕ್ಷಮೆ ಕೇಳಿಸುವುದು ಸರಿಯಲ್ಲ ಎಂದು ಹೇಳಿದರು

ಕಾಂಗ್ರೆಸ್ ನಲ್ಲಿ ಇನ್ ಫೈಟಿಂಗ್ ನಡೆಯುತ್ತಿದೆ. ಸಿದ್ದರಾಮಯ್ಯ ಅವರನ್ನ ಇಳಿಸಬೇಕು ಅಂತಾ ಪ್ಲ್ಯಾನ್ ನಡೆದಿದೆ. ಡಿಕೆಶಿ ಮುಖ್ಯಮಂತ್ರಿ ಆಗುವ ಪ್ರಯತ್ನ ನಡೆದಿದೆ. ಅವರು ಸಿಎಂ ಆಗಲು ಹೋದ್ರೇ ಸಿದ್ದರಾಮಯ್ಯ ಸುಮ್ಮನೆ ಕೂರಲ್ಲ. ಜೊತೆಗೆ ಇನ್ ಫೈಟಿಂಗ್ ನಡೆದಿದ್ದು ಯಾವಾಗ ಬೇಕಾದ್ರೂ ಸರ್ಕಾರ ಬೀಳಬಹುದು. ಕರ್ನಾಟಕದಲ್ಲಿ ಯಾರಾದ್ರೂ ಏಕನಾಥ ಶಿಂಧೆ ಆಗಬಹುದು. ನಾವು ಆಪರೇಷನ್ ಕಮಲ ಮಾಡಲು ಹೊರಟಿಲ್ಲ. ನಾವು ಅವರಿಗೆ ಅರಿಶಿನ ಕುಂಕುಮ ಕೊಟ್ಟಿಲ್ಲ. ಅವರೇ ಇನ್ ಫೈಟಿಂಗ್ ಮಾಡಿ ಅವರು ಕೋಲ್ಯಾಪ್ಸ್ ಆಗ್ತಿದ್ದಾರೆ ಎಂದು ಶೆಟ್ಟರ್ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!