
ಬೆಂಗಳೂರು (ಆ.29): ರಾಮಕೃಷ್ಣ ಹೆಗಡೆ ಅವರು ವಿಧಾನಸಭೆಗೆ ಸ್ಪರ್ಧಿಸಿದ್ರು. 1983ರಲ್ಲಿ ಅವರು ಸಿಎಂ ಆಗಿದ್ರು. ಅವರನ್ನ ಸೋಲಿಸಲು ಹೋರಾಟ ಮಾಡಿದೆ ಎಂದು ರಾಮಕೃಷ್ಣ ಹೆಗಡೆ ಅವರ 99 ಜನ್ಮ ದಿನಾಚರಣೆ ಹಿನ್ನಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ನಂತರ ಮಾತನಾಡಿದ ಅವರು, ಆಗ ರಾಮಕೃಷ್ಣ ಹೆಗಡೆ ಅವರೇ ನನ್ನ ಗುರುತಿಸಿ ಟಿಕೆಟ್ ಕೊಡಿಸಿದ್ರು. ನಂತರ ನನಗೆ ದೇವೇಗೌಡರ ವಿರುದ್ಧ ಟಿಕೆಟ್ ಕೊಡಿಸಿದ್ರು. ಆದ್ರೆ ನಾನು ಅಂದು ಸೋಲು ಕಂಡೆ ನಂತರ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ ಆಯ್ಕೆಯಾದೆ. ನಂತರ ನಾನು ಅವರ ಅಭಿಮಾನಿಯಾದೆ ಎಂದರು.
ರಾಜೀವ್ ಗಾಂಧಿ ಅವರು ಪ್ರಧಾನಿ ಆದ ವೇಳೆ ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ ಮಾಡಿದ್ರು. ಆಗ ನಾನು 74/75 ತಿದ್ದುಪಡಿ ಬಗ್ಗೆ ಅಧ್ಯಾಯನ ಮಾಡಲು ಬಂದಿದ್ರು. ನಾನು ವಿಧಾನಸಭೆಯಲ್ಲಿ ರಾಮಕೃಷ್ಣ ಅವರನ್ನ ನೋಡಿದ್ದೇನೆ. ಟೆಲಿಪೋನ್ ಟ್ಯಾಪಿಂಗ್ ವಿಚಾರ ಬಂದಾಗ ನಾನು ಅವರ ಸೌಮ್ಯ ಆಚಾರ ವಿಚಾರದ ಬಗ್ಗೆ ನೋಡಿದ್ದೇನೆ. ಅಂದು ರಾಮಕೃಷ್ಣ ಹೆಗಡೆಯವರು ಅಂದು ರಾಜಿ ಮಾಡಿಕೊಳ್ಳದೇ ವಾದ ಮಾಡಿದ್ರು. ಹುಟ್ಟು ಸಾವಿನ ಮಧ್ಯೆ ರಾಮಕೃಷ್ಣ ಹೆಗಡೆಯವರು ನಮಗೆ ಸಾಕಷ್ಟು ಆದರ್ಶಗಳನ್ನ ಬಿಟ್ಟು ಹೋಗಿದ್ದಾರೆ. ರಾಮಕೃಷ್ಣ ಹೆಗಡೆಯವರ ದೂರದ ಚಿಂತನೆ. ಕುಟುಂಬವನ್ನ ಅವರು ಯಾವತ್ತು ಬೆಳಸಲಿಲ್ಲ. ನೂರಾರು ರಾಜಕೀಯ ನಾಯಕರನ್ನ ಅವರು ಬೆಳಿಸಿದ್ರು ಎಂದು ತಿಳಿಸಿದರು.
ಕೆಲವರು ಏರಿದ ಎಣಿಯನ್ನ ಒದ್ದು ಹೋಗ್ತಾರೆ. ರಾಮಕೃಷ್ಣ ಹೆಗಡೆ ಅವರನ್ನ ಉಚ್ಛಾಟನೆ ಮಾಡಿದ ದಿನ ನಾನು ಅವರನ್ನ ಕೇಳಿದ್ದೆ. ಕೆಲವರು ಅಧಿಕಾರಕ್ಕಾಗಿ ಧ್ವನಿ ಎತ್ತಲಿಲ್ಲ. ಆದ್ರೆ ದೇಶಪಾಂಡೆ ಮಾತ್ರ ಮಾತನಾಡಿದ್ರು. ಸತ್ಯ ನುಡಿದ್ರೆ ಕಷ್ಟ ಆಗುತ್ತೆ. ರಾಮಕೃಷ್ಣ ಹೆಗಡೆ ಅವರು ಬೆಂಗಳೂರು ಅಭಿವೃದ್ಧಿ ಅವರ ಆಡಳಿತದ ಕಾರ್ಯಗಳು ಇಂದಿಗೂ ನೆನಪಿಗೆ ಉಳಿದಿವೆ. ರಾಜಕಾರಣದಲ್ಲಿ ಕಷ್ಟಗಳು ಬಂದೇ ಬರುತ್ತೆ. ಅಂದು ರಾಮಕೃಷ್ಣ ಅವರು ಸೇರಿದಂತೆ ಕೆಲವರು ಸಹಾಯ ಮಾಡಿದ್ರೆ ನಾನು ಸಂಸತ್ ಪ್ರವೇಶ ಮಾಡ್ತಾ ಇದ್ದೆ. ರಾಮಕೃಷ್ಣ ಹೆಗಡೆಯವರ ನಾಯಕತ್ವ. ಹೃದಯ ಶ್ರೀಮಂತಿಕೆ. ಇಂದು ಆದರ್ಶವಾಗಿದೆ ಎಂದರು.
ರಾಮಕೃಷ್ಣ ಹೆಗಡೆ ಅವರು ಎಂದೂ ದ್ವೇಷದ ರಾಜಕಾರಣ ಮಾಡಲಿಲ್ಲ. ಅವರ ಹೆಸರು ನೆನಪಾಗಿ ಉಳಿಯಲು ಏನಾದ್ರು ಮಾಡುವುದರ ಬಗ್ಗೆ ಚಿಂತನೆ ಮಾಡಲು ರೆಡಿ ಇದೀನಿ. ನಾನು ಬೆಂಗಳೂರು ಉಸ್ತುವಾರಿಯನ್ನ ಫ್ಯಾಶನ್ ಆಗಿ ತೆಗೆದುಕೊಂಡಿದ್ದೇನೆ. ನಾನು 6ನೇ ತರಗತಿಯಿದ್ದ ದಿನಗಳಿಂದಲೂ ನಾನು ಬೆಂಗಳೂರು ನೋಡಿದ್ದೇನೆ. ಇಲ್ಲಿನ ಕಸದ ಮಾಫಿಯಾ ದೊಡ್ಡದಿದೆ. ಅದನ್ನ ಬಗೆಹರಿಸಲು ಸಾಕಷ್ಟು ಪ್ರಯತ್ನ ಮಾಡ್ತಾ ಇದ್ದೀನಿ. ಟ್ರಾಫಿಕ್ ಸಹ ಹಾಗೆ ಇದೆ 1.14 ಕೋಟಿ ವಾಹನಗಳು ಬೆಂಗಳೂರಿನಲ್ಲಿ ರಿಜಿಸ್ಟರ್ ಆಗಿವೆ ಎಂದು ಡಿಕೆಶಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.