ಡಿಕೆಶಿಗೆ ಸೋನಿಯಾ ಗಾಂಧಿ, ಬೊಮ್ಮಾಯಿಗೆ ಮೋದಿಯೇ ದೇವರು CT Ravi

By Suvarna News  |  First Published May 11, 2022, 5:38 PM IST
  • ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಶಾಸಕ ಸಿ.ಟಿ.ರವಿ ಟಾಂಗ್
  • ಡಿಕೆಶಿ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ಹೇಳಲ್ಲ, ರಾಜಕೀಯ ಸಾಮರ್ಥ್ಯ ಕನಕಪುರಕಷ್ಟೆ 
  • ಚಿಕ್ಕಮಗಳೂರಿನಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್  

ಚಿಕ್ಕಮಗಳೂರು (ಮೇ.11) : ಡಿ ಕೆ ಶಿವಕುಮಾರ್ ಗೆ (DK Shivakumar ) ಸೋನಿಯಾ ಗಾಂಧಿ , ಸಿಎಂ ಬೊಮ್ಮಾಯಿಗೆ ಮೋದಿಯೇ ದೇವರು ಎಂದು ಹೇಳಿಕೆ ನೀಡಿದ್ದ ಸಿ.ಎಂ.ಇಬ್ರಾಹಿಂಗೆ ಶಾಸಕ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿ ಇಬ್ರಾಹಿಂ ಅವರನ್ನ ರಾಜಕೀಯ ವಿಧೂಷಕ ಅಂತಾರೆ, ನಾನು ಹಾಗೇ ಹೇಳಲ್ಲ ಅವರನ್ನ ರಾಜಕೀಯದಲ್ಲಿ ಯಾರೂ ಗಂಭೀರವಾಗಿ ತಗಳಲ್ಲ ಎಂದು ಲೇವಡಿ ಮಾಡಿದ್ದಾರೆ. 

Tap to resize

Latest Videos

ಸಿಎಂ ಇಬ್ರಾಹಿಂ ಎಲ್ಲಿ, ಯಾವ ಪಾತ್ರಕ್ಕೆ ಬೇಕಾದ್ರು ಸೂಕ್ತವಾಗುವ ವ್ಯಕ್ತಿ : ಸಿಎಂ ಇಬ್ರಾಹಿಂ ಎಲ್ಲಿ, ಯಾವ ಪಾತ್ರಕ್ಕೆ ಬೇಕಾದ್ರು ಸೂಕ್ತವಾಗುವ ವ್ಯಕ್ತಿ ಎಂದು ವ್ಯಂಗ್ಯ ಮಾಡಿದರು. ಜನತಾ ಪಕ್ಷದಲ್ಲಿದ್ದಾಗ ಇಂದಿರಾಗಾಂಧಿ ಬಗ್ಗೆ  ಹೇಳಿದ್ದ ನೆನಪು ಮಾಡಲು ನನ್ನಿಂದ ಆಗಲ್ಲ , ಕಾಂಗ್ರೆಸ್ ಬಂದಾಗ ದೇವೇಗೌಡರ ಬಗ್ಗೆ ಮಾತನಾಡಿದ್ದ ಹಳೇ ಕ್ಯಾಸೆಟ್ ಹಾಕಿ ನೋಡಿ ಎಂದು ಇಬ್ರಾಹಿಂ ಸಲಹೆ ನೀಡಿದ್ದಾರೆ.

ಕ್ಯಾಸೆಟ್ ಹಾಕಿ ನೋಡಿದ್ದಾಗ ಆಗ ಇಬ್ರಾಹಿಂಗೆ ದೇವೇಗೌಡರ ಮೇಲಿರೋ ಪ್ರಾಮಾಣಿಕ ಭಾವನೆ ಏನೆಂದು ವ್ಯಕ್ತವಾಗುತ್ತೆ ಅಲ್ಲದೆ ನಮಗೆ ಭಾರತ ಮಾತೆಯೇ ದೇವರು, ಎಲ್ಲಾ ದೇವರಿಗಿಂತ ಭಾರತಮಾತೆಯೇ ದೊಡ್ಡವಳು ಎಂದು ಹೇಳಿದರು. ಅಟಲ್ ಜೀ, ಮೋದಿ, ಅಡ್ವಾಣಿ, ಅಮಿತ್ ಶಾ ನಮ್ಮ ನಾಯಕರು ನಾಯಕರನ್ನ ನಾಯಕರ ಸ್ಥಾನದಲ್ಲೇ ನೋಡುತ್ತೇವೆ, ದೇವರ ಸ್ಥಾನದಲ್ಲಿ ಅಲ್ಲ ಎಂದರು. 

ವಿನಯ ಕುಲಕರ್ಣಿ ಪೋಟೋ ಹಾಕಿಲ್ಲವೆಂದು ಪಂಚಮಸಾಲಿ ಮುಖಂಡರ ಪ್ರತಿಭಟನೆ

ತಪ್ಪು ಮಾಡದೆ ಜೈಲಿಗೋದರೆ ಶಕ್ತಿ, ತಪ್ಪು ಮಾಡಿದ್ದರೆ ರಾಜಕೀಯ ಅಂತ್ಯ: ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ಮಾತನಾಡಲ್ಲ. ಆದರೆ, ಅವರ ರಾಜಕೀಯ ಸಾಮರ್ಥ್ಯ ಕೇವಲ ಕನಕಪುರಕಷ್ಟೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ.ರವಿ ಡಿ.ಕೆ.ಶಿವಕುಮಾರ್ ಗೆ ಟಾಂಗ್ ಕೊಟ್ಟಿದ್ದಾರೆ. 2022 ಆಗಸ್ಟ್ ಬಳಿಕ ಬಿಜೆಪಿ ನನ್ನನ್ನ ಟಾರ್ಗೆಟ್ ಮಾಡುತ್ತದೆ ಎಂದಿದ್ದ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ದೇಶದ ಜನರೇ ಕಾಂಗ್ರೆಸನ್ನು ಟಾರ್ಗೆಟ್  ಮಾಡಿದ್ದಾರೆ. ನಮಗೆ ಡಿ.ಕೆ.ಶಿವಕುಮಾರ್ ಅವರನ್ನ ಟಾರ್ಗೆಟ್ ಮಾಡುವ ಅವಶ್ಯಕತೆ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು, ತಮ್ಮನ್ನ ತಾವು ವೈಭವೀಕರಿಸಿಕೊಳ್ಳಬಹುದು. ನಾನು ಅವರ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ಮಾತನಾಡಲ್ಲ. ಪ್ರಶ್ನೆ ಮಾಡಲ್ಲ. ಆದರೆ, ಅವರ ರಾಜಕೀಯ ಸಾಮರ್ಥ್ಯ ಸಾಬೀತು ಮಾಡಿರೋದು ಕೇವಲ ಕನಕಪುರದಲ್ಲಷ್ಟೆ ಎಂದರು. ಉಪ್ಪು ತಿಂದವರು ನೀರು ಕುಡಿಯುತ್ತಾರೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಅವರು ಏನೂ ತಪ್ಪು ಮಾಡಿಲ್ಲ ಎಂದಾದರೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು. ಒಂದು ರಾಜಕೀಯ ಪಕ್ಷದಲ್ಲಿ ಇದ್ದೇನೆ ಎಂದು ಶೆಲ್ಟರ್ ತೆಗೆದುಕೊಳ್ಳಲು ಆಗುವುದಿಲ್ಲ. ತಪ್ಪು ಮಾಡದೆ ಜೈಲಿಗೆ ಹೋದರೆ ಅದೊಂದು ಶಕ್ತಿಯಾಗುತ್ತದೆ. ತಪ್ಪು ಮಾಡಿದವರದ್ದು ರಾಜಕೀಯ ಅಂತ್ಯವಾಗುತ್ತೆ ಎಂದಿದ್ದಾರೆ. 

SHAURYA PURASKAR ಹುತಾತ್ಮನಾದ ಕರ್ನಾಟಕದ ಯೋಧನಿಗೆ ಮರಣೋತ್ತರ ಶೌರ್ಯಪ್ರಶಸ್ತಿ

ಡಿಕೆಶಿ ಟಾರ್ಗೆಟ್ ಮಾಡುವ ಅವಶ್ಯಕತೆ ಇಲ್ಲ : ಬಿಜೆಪಿಗೆ ಡಿಕೆಶಿಯವರನ್ನ ಟಾರ್ಗೆಟ್ ಮಾಡುವ ಅವಶ್ಯಕತೆ  ಇಲ್ಲ. ದೇಶದ ಜನರೇ ಕಾಂಗ್ರೆಸನ್ನ ಟಾರ್ಗೆಟ್ ಮಾಡಿದ್ದಾರೆ. ಉತ್ತರಪ್ರದೇಶದಲ್ಲಿ "ಮೈ ಲಡಕಿ ಹೂಂ, ಲಡ್ ಸಕ್ತಾ ಹೈ ಹೇ" ಎಂದು ಪ್ರಿಯಾಂಕ ಗಾಂಧಿ ಅವರೇ ಚುನಾವಣೆ ನೇತೃತ್ವ ವಹಿಸಿದ್ದರು. ವಾಟ್ ಹ್ಯಾಪನ್...? ಏನಾಯ್ತು. 387 ಕ್ಷೇತ್ರದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೋಳ್ತು ಎಂದು ಕಾಂಗ್ರೆಸ್ ಕಾಲೆಳೆದರು. ಅವರೇ ಅಧಿಕಾರದಲ್ಲಿದ್ದ ಪಂಜಾಬ್ ನಲ್ಲಿ ಹೀನಾಯವಾಗಿ ಸೋತರು. ಆಮ್ ಆದ್ಮಿ ಪಕ್ಷಕ್ಕೆ ರೆಡ್ ಕಾರ್ಪೆಟ್ ಹಾಸಿ ಕರ್ಕೊಂಡ್ ಬಂದು ಕೂರಿಸಿದ್ದಾರೆ. ದೇಶದ ಜನರೇ ಕಾಂಗ್ರೆಸ್ ಪಕ್ಷವನ್ನ ಟಾರ್ಗೆಟ್ ಮಾಡಿರುವಾಗ, ಡಿಕೆಶಿ ಟಾರ್ಗೆಟ್ ಮಾಡಿ ಏನಾಗಬೇಕೆಂದು ಪ್ರಶ್ನಿಸಿದ್ದಾರೆ.

click me!