Haveri: ಈ ಬಾರಿ ಸಚಿವ ಸಂಪುಟದಲ್ಲಿ ನನಗೂ ಒಂದು ಅವಕಾಶ ಸಿಗುತ್ತೆ: ಶಾಸಕ ನೆಹರೂ ಓಲೆಕಾರ್

By Govindaraj S  |  First Published May 11, 2022, 3:20 PM IST

ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ವರಿಷ್ಠರ ಭೇಟಿಗೆ ಸಿಎಂ ತೆರಳುತ್ತಿದ್ದಂತೆ ಸಚಿವಾಕಾಂಕ್ಷಿ ಶಾಸಕರ ಆಕಾಂಕ್ಷೆಗಳು ಗರಿಗೆದರಿವೆ.ಹಲವು ವರ್ಷಗಳಿಂದ ಸಚಿವನಾಗಬೇಕೆಂಬ ತೀವ್ರ ಹಂಬಲ ಇಟ್ಟುಕೊಂಡಿರೋ ಬಿಜೆಪಿ ಹಿರಿಯ ಶಾಸಕ ನೆಹರೂ ಓಲೆಕಾರ್ ಈ ಬಗ್ಗೆ ಮಾತನಾಡಿದ್ದಾರೆ. 


ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ

ಹಾವೇರಿ (ಮೇ.11): ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಸೇರಿದಂತೆ ಬಿಜೆಪಿ (BJP) ವರಿಷ್ಠರ ಭೇಟಿಗೆ ಸಿಎಂ ತೆರಳುತ್ತಿದ್ದಂತೆ ಸಚಿವಾಕಾಂಕ್ಷಿ ಶಾಸಕರ ಆಕಾಂಕ್ಷೆಗಳು ಗರಿಗೆದರಿವೆ. ಹಲವು ವರ್ಷಗಳಿಂದ ಸಚಿವನಾಗಬೇಕೆಂಬ ತೀವ್ರ ಹಂಬಲ ಇಟ್ಟುಕೊಂಡಿರೋ ಬಿಜೆಪಿ ಹಿರಿಯ ಶಾಸಕ ನೆಹರೂ ಓಲೆಕಾರ್ (Neharu Olekar) ಈ ಬಗ್ಗೆ ಮಾತನಾಡಿದ್ದಾರೆ. ಈ ಬಾರಿ ಸಚಿವ ಸಂಪುಟದಲ್ಲಿ (Cabinet Expansion) ನನಗೂ ಒಂದು ಅವಕಾಶ ಸಿಗುತ್ತೆ ಅನ್ನೋ ವಿಶ್ವಾಸ ಇದೆ. ಈ ಸಲ ಗ್ಯಾರಂಟಿ ನನಗೆ ಸಚಿವ ಸ್ಥಾನ ಕೊಡ್ತಾರೆ. ಹೊಸಬರಿಗೆ ಅವಕಾಶ ನೀಡಿ ಹಿರಿಯ ಸಚಿವರನ್ನು ಕೈ ಬಿಡುವ ವಿಚಾರವಾಗಿ ಹೈಕಮಾಂಡ್ ನಿರ್ಣಯ ತಗೊಳುತ್ತೆ. 

Tap to resize

Latest Videos

undefined

ಹೊಸಬರಿಗೂ ಸಚಿವ ಸ್ಥಾನ ಕೊಡಬೇಕು ಅನ್ನೋ ಚಿಂತನೆ  ಹೈಕಮಾಂಡ್‌ಗಿದೆ. ಈ ಬಾರಿ ಹೊಸಬರಿಗೆ ಹೆಚ್ಚು ಅವಕಾಶ ಕೊಡ್ತಾರೆ. ಹಿರಿಯ ಸಚಿವರ ಮನವೊಲಿಸಿ ಪಕ್ಷ ಸಂಘಟನೆ ಕೆಲಸಕ್ಕೆ ಹಚ್ಚುತ್ತಾರೆ ಎಂದು ಹೇಳಿದ್ದಾರೆ. ಛಲವಾದಿ ಸಮುದಾಯದ ಏಕೈಕ ಶಾಸಕರಾಗಿರೋ ಹಾವೇರಿ ಶಾಸಕ ಓಲೆಕಾರ್‌ಗೆ ಈಗಾಗಲೇ ಹಲವು ಬಾರಿ ಸಚಿವ ಸ್ಥಾನ ಮಿಸ್ ಆಗಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ (Basavaraj Bommai) ಮೇಲೂ‌ ಮುನಿಸಿಕೊಂಡಿದ್ದ, ಓಲೆಕಾರ್ ಅವರನ್ನು ಸ್ವತಃ ಸಿಎಂ ಸಂತೈಸಿ‌ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. 

Haveri ಕಟೀಲ್ ಗೆ ಕೆಪಿಸಿಸಿ ಕಾರ್ಯದ್ಯಕ್ಷ ಸಲೀಂ ಅಹ್ಮದ್ ವಾರ್ನಿಂಗ್

ಹೀಗಾಗಿ ಈ ಬಾರಿ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ ಅನ್ನೋ ವಿಶ್ವಾಸದಲ್ಲಿದ್ದಾರೆ ಓಲೆಕಾರ್‌. ಆದರೆ ಹಾವೇರಿ ಜಿಲ್ಲೆಯಿಂದ ಹಿರೇಕೇರೂರಿನ ಶಾಸಕ ಬಿ.ಸಿ ಪಾಟೀಲ್ ಕೃಷಿ ಸಚಿವರಾಗಿದ್ದಾರೆ. ಇತ್ತ ಹಾವೇರಿ ಜಿಲ್ಲೆಯವರೇ ಮುಖ್ಯಮಂತ್ರಿಗಳಿರುವಾಗ ನೆಹರೂ ಓಲೆಕಾರ್ ಅವರಿಗೆ ಹಾವೇರಿ ಜಿಲ್ಲೆಯಿಂದ ಮಂತ್ರಿ ಸ್ಥಾನ ಸಿಗುತ್ತಾ ಅನ್ನೋ ಕುತೂಹಲ ಇದೆ. ಇತ್ತ ಮಾಜಿ ಸಚಿವ, ಎಂಎಲ್‌ಸಿ ಆರ್ ಶಂಕರ್ ಕೂಡಾ ಸಚಿವಕಾಂಕ್ಷಿ ಆಗಿದ್ದಾರೆ. ನಾವು ಬಿಜೆಪಿ ಸರ್ಕಾರ ಬರಲು ಕಾರಣರಾದವರು. ತ್ಯಾಗದ ಕೋಟಾದಲ್ಲಿ ನಮಗೆ ಸಚಿವ ಸ್ಥಾನ ಸಿಗಲಿದೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದಾರೆ. ಸದ್ಯ ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತೋ ಕಾಯ್ದು ನೋಡಬೇಕಿದೆ.

ಸಚಿವ ಸಂಪುಟ ವಿಸ್ತರಣೆ ನಿರೀಕ್ಷೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ದೆಹಲಿಗೆ ತೆರಳಿದ್ದಾರೆ. ಸಿಎಂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ತಮ್ಮ ಆರ್ ಟಿನಗರ ನಿವಾಸದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳಿದರು. ಸಿಎಂ ಅವರು ಜಾಗತಿಕ ಬಂಡವಾಳ ಹೂಡಿಕೆದಾರ ರಾಷ್ಟ್ರಗಳ ರಾಯಭಾರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದಾರೆ. ದೆಹಲಿಗೆ ಹೋಗುವ ಮೊದಲು ಸಿಎಂ ಮನೆಗೆ ಕೋಟಾ ಶ್ರೀನಿವಾಸ ಪೂಜಾರಿ, ಅರವಿಂದ್ ಬೆಲ್ಲದ್, ಹರತಾಳು ಹಾಲಪ್ಪ ಮೊದಲಾದವರು ಆಗಮಿಸಿ  ಮಾತುಕತೆ ನಡೆಸಿದರು. ಮಂಗಳವಾರ ದೆಹಲಿಯಲ್ಲೇ ವಾಸ್ತವ್ಯ ಹೂಡಲಿರುವ ಅವರು ಬುಧವಾರ ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಸಾಧ್ಯವಾದ್ರೆ ದೆಹಲಿಯಲ್ಲಿ ಕೇಂದ್ರ ನಾಯಕರನ್ನ ಭೇಟಿ ಮಾಡಲಿದ್ದಾರೆ. 

Haveri: ಶಿಗ್ಗಾವಿಯ ಟಾಕೀಸ್‌ನಲ್ಲಿ ಫೈರಿಂಗ್ ಪ್ರಕರಣ: ಆರೋಪಿಯನ್ನು ಬಂಧಿಸದಿದ್ದರೆ ಬೀದಿಗಿಳಿದು ಹೋರಾಟ

ಈ ವೇಳೆ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ತೆಗೆದುಕೊಂಡು ಬರುವ ಸಾಧ್ಯತೆಗಳಿವೆ. ಮೇ 3 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚಿಸಿ ಸಚಿವ ಸಂಪುಟ ಪುನಾರಚನೆ ಕುರಿತು ಮಾಹಿತಿ ನೀಡುವುದಾಗಿ ಮುಖ್ಯಮಂತ್ರಿ ಅವರಿಗೆ ತಿಳಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಇದರ ನಡುವೆಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೂರ್ನಾಲ್ಕು ದಿನಗಳಲ್ಲಿ ಸಂಪುಟ ಪುನಾರಚನೆಯಾಗುವ ವಿಶ್ವಾಸ ಇದೆ ಎಂಬ ಮಾತುಗಳನ್ನು ಆಡಿದ್ದಾರೆ. ಇದು ಸಂಪುಟ ಪುನಾರಚನೆಗೆ ಮತ್ತಷ್ಟು ಪುಷ್ಠಿ ನೀಡಿದ್ದು, ಈ ಬಾರಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಅನಿಶ್ಚಿತತೆಗೆ ತೆರೆ ಬೀಳುವ ಸಾಧ್ಯತೆ ಇದೆ.

click me!