ಹಾಸನ ಲೋಕಸಭಾ ಅಭ್ಯರ್ಥಿಯಾಗಿ ದೇವೇಗೌಡರು ನಿಲ್ಲಲಿ: ಶಾಸಕ ಎ.ಮಂಜು

By Govindaraj S  |  First Published Oct 20, 2023, 6:13 PM IST

ಹಾಸನ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಪಕ್ಷದಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಿಲ್ಲಬೇಕು ಎಂದು  ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಎ.ಮಂಜು ಹಾಸನದಲ್ಲಿ ಹೇಳಿದ್ದಾರೆ. 


ವರದಿ: ಕೆ.ಎಂ.ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ

ಹಾಸನ (ಅ.20): ಹಾಸನ ಲೋಕಸಭಾ ಕ್ಷೇತ್ರಕ್ಕೆ ನಮ್ಮ ಪಕ್ಷದಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನಿಲ್ಲಬೇಕು ಎಂದು  ಮಾಜಿ ಸಚಿವ ಹಾಗೂ ಜೆಡಿಎಸ್ ಶಾಸಕ ಎ.ಮಂಜು ಹಾಸನದಲ್ಲಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈಗಾಗಲೇ ಮೀಟಿಂಗ್‌ನಲ್ಲಿ ಮನವಿ ಮಾಡಿದ್ದೇನೆ, ದೇವೇಗೌಡರು ನಿಲ್ಲಬೇಕೆಂದು ಒತ್ತಾಯ ಮಾಡಿದ್ದೇನೆ, ಇವತ್ತೂ ಹೇಳುತ್ತಿದ್ದೇನೆ, ಅವರದ್ದು ಇದು ಕೊನೆ ಎಲೆಕ್ಷನ್, ಅವರು ಈ ಜಿಲ್ಲೆಯಿಂದ ನಿಲ್ಲಬೇಕು ಎನ್ನುವುದು ನನ್ನ ಒತ್ತಾಯ ಎಂದರು. ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್‌ನಿಂದ ಉಚ್ಛಾಟಿಸಿ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿರುವ ನಡೆಯನ್ನು ಎ. ಮಂಜು ಸಮರ್ಥಿಸಿಕೊಂಡರು. ಅವರವರ ಪಕ್ಷ, ಅವರವರು ತೀರ್ಮಾನ ತೆಗೆದುಕೊಳ್ಳೋದು ವಾಡಿಕೆ. 

Latest Videos

undefined

ಇಬ್ರಾಹಿಂ ಅವರು ಎನ್‌ಡಿಎ ಜೊತೆ ಹೋಗುವುದು ಇಷ್ಟ ಇಲ್ಲಾ ಎಂದಾಗ, ಸೂಕ್ತ ತೀರ್ಮಾನ ತೆಗೆದುಕೊಳ್ಳುವುದು ನಮ್ಮ ಪಕ್ಷದ ಜವಾಬ್ದಾರಿ, ಅಂತೆಯೇ ಕುಮಾರಸ್ವಾಮಿ ಅವರನ್ನು ನೇಮಿಸಿಕೊಂಡಿದ್ದೇವೆ ಎಂದರು. ಹೊಂದಾಣಿಕೆ ಎನ್ನುವುದು ಮೊದಲಿಂದಲೂ ರಾಜಕಾರಣದಲ್ಲಿ ಇರುವ ಪ್ರಕ್ರಿಯೆ, ಹಿಂದೆ ರಾಮಕೃಷ್ಣ ಹೆಗಡೆ, ಬಂಗಾರಪ್ಪ ಅವರು ಇದ್ದಾಗ ಬಿಜೆಪಿ ಜೊತೆ ಜನತಾದಳ ಹೊಂದಾಣಿಕೆ ಆಗಿರಲಿಲ್ವಾ, ಹೊಂದಾಣಿಕೆ ಮಾಡಿಕೊಳ್ಳುವುದು ಆ ಪಕ್ಷದ ಸಂಘಟನೆ, ಆ ಪಕ್ಷದ ಶಕ್ತಿಯನ್ನು ಹೆಚ್ಚಿಗೆ ಮಾಡಲು, ಹೊಂದಾಣಿಕೆ ಮಾಡಿಕೊಂಡ ತಕ್ಷಣ ಜಾತ್ಯಾತೀತ ತತ್ವ ಬದಲಾವಣೆ ಆಗಲ್ಲ ಎಂದು ತಿರುಗೇಟು ನೀಡಿದರು.

ಉಪ್ಪು ತಿಂದವ ನೀರು ಕುಡಿಬೇಕು: ಡಿಕೆಶಿಗೆ ಟಕ್ಕರ್ ಕೊಟ್ಟ ಸಿ.ಟಿ.ರವಿ

ನಮ್ಮ ದೇಶದ ದೃಷ್ಟಿಯಿಂದ, ಮುಂದಿನ ದೇಶದ ಹಿತಕ್ಕೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ತಪ್ಪೇನು ಇಲ್ಲಾ ಎನ್ನೋದು ನನ್ನ ಅಭಿಪ್ರಾಯ ಎಂದು ಹೇಳಿದರು. ಹೊಂದಾಣಿಕೆಗೂ ಮುನ್ನ ಹಲವು ಮೀಟಿಂಗ್ ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲೇ ನಡೆದವು. ನಾನೂ ಭಾಗಿಯಾಗಿದ್ದೆ.  ಯಾವ ಮೀಟಿಂಗ್‌ನಲ್ಲೂ ಬಿಜೆಪಿ ಜೊತೆ ಹೊಂದಾಣಿಕೆ ಆಗಬಾರದು ಎಂದು ಹೇಳಿಲ್ಲ, ಹಾಗಿದ್ದಾಗ ಒಪ್ಪಿಗೆ ಇದೆ ಅಂತ ಅಲ್ವಾ, ಒಂದು ವೇಳೆ ವಿರೋಧ ಇದ್ದಿದ್ದರೆ  ಸಭೆಯಲ್ಲೇ ಚರ್ಚೆ ಮಾಡಬೇಕಿತ್ತು, ಈಗ ಗೊತ್ತೆ ಇಲ್ಲಾ, ಹೇಳೇ ಇಲ್ಲಾ ಅನ್ನೋದು ಅವರ ವ್ಯಕ್ತಿತ್ವಕ್ಕೆ ಶೋಭೆಯಲ್ಲ ಎಂದು ಟಾಂಗ್ ನೀಡಿದರು. 

ನಾನೇ ಮೊದಲು ವಿರೋಧ ಇದ್ದೆ, ನಾನೇ ಅಡ್ಜೆಸ್ಟ್ ಆಗಿದ್ದೀನಿ, ಅದಕ್ಕಿಂತ ಉದಾಹರಣೆ ಏನು ಬೇಕುಇವತ್ತು ರಾಜಕೀಯದಲ್ಲಿ ಶಾಶ್ವತ ಶತ್ರೂನು ಇಲ್ಲ, ಮಿತ್ರನೂ ಇಲ್ಲ ಎಂದರು. ಡಿಸಿಎಂ ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ಪ್ರತಿಕ್ರಿಯಿಸಿ, ಯಾರು ಯಾರ ಮೇಲೆ ಬೇಕಾದರೂ ಕೇಸ್ ಹಾಕಬಹುದು. ಇದು ಹೊಸ ಕೇಸ್ ಅಲ್ಲಾ, ಹಳೆಯದೆ, ಯಾಕೆ ತನಿಖೆ ಮಾಡ್ತೀರಿ ಅಂತ ಸಿಬಿಐನವರನ್ನು ಕೇಳಲು ಯಾರಿಗೂ ಅಧಿಕಾರ ಇಲ್ಲಾ. ಸಿಬಿಐ ತನಿಖೆ ಮಾಡುವುದರ ಬಗ್ಗೆ ನಾನು ಕಮೆಂಟ್ ಮಾಡಲ್ಲ ಎಂದು ಹೇಳಿದರು.

ಅರಸೀಕೆರೆಗೆ ಸಚಿವರು ಭೇಟಿ ನೀಡುತ್ತಿರುವುದು ಸರಿಯಲ್ಲ. ನಾನು ಜಿಲ್ಲಾ ಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ನೀವು ತಾಲ್ಲೂಕು ಮಂತ್ರಿ ಅಲ್ಲಾ, ಜಿಲ್ಲಾ ಮಂತ್ರಿ, ರಾಜ್ಯಕ್ಕೆ ಮಂತ್ರಿ, ಎಲ್ಲಾ ತಾಲ್ಲೂಕುಗಳಿಗೆ ನೀವು ಬರಬೇಕು, ನಮ್ಮ ಪಕ್ಷದ ಶಾಸಕರು ಗೆದ್ದಿದ್ದಾರೆ ಅಂತ ಅತಿ ಪ್ರೀತಿ ತೋರಿಸುವುದು ಒಳ್ಳೆಯದಲ್ಲ, ಈಗಾಗಲೇ ಅವರಿಗೆ ಮನವಿ ಮಾಡಿದ್ದೇನೆ, ಇಡೀ ಜಿಲ್ಲೆಯನ್ನು ಸಮಗ್ರವಾಗಿ ತೆಗೆದುಕೊಂಡು ಹೋಗುವುದು ನಿಮ್ಮ ಜವಾಬ್ದಾರಿ, ನಾವು ಅವರಿಗೆ ಸಹಕಾರ ಕೊಡಲು ಸಿದ್ದರಿದ್ದೇವೆ  ಎಂದು ಶಾಸಕ ಎ.ಮಂಜು ಹೇಳಿದ್ದಾರೆ. 

ಮತ್ತೆ ಮಾಲ್ಡೀವ್ಸ್‌ ಫೋಟೋ ಶೇರ್ ಮಾಡಿದ Sonu Gowda: ಚೆಡ್ಡಿಲಿ ತುಂಬಾ ಸೆಕ್ಸಿಯಾಗಿ ಕಾಣಿಸ್ತೀರಾ ಅನ್ನೋದಾ!

ನಿನ್ನೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಗೆ ರೇವಣ್ಣ ಅವರು ಬಂದಿರಲಿಲ್ಲ.  ನಾವು ಮೀಟಿಂಗ್‌ನಲ್ಲಿ ನೀರು ಬಿಡಿಸಲು ತೀರ್ಮಾನ ಮಾಡಿದ್ದೇವೆ. ಆರು ದಿನ ಮೊದಲು ಹೈ ಲೆವೆಲ್ ನಾಲೆಗೆ ನೀರು ಬಿಡ್ತಾರೆ, ಮಿಕ್ಕಿದ ನಾಲೆಗಳಿಗೆ ಆರು ದಿನ ಆದ್ಮೇಲೆ ಬಿಡ್ತಾರೆ ಎಂದರು. ಈಗಾಗಲೇ ಸರ್ಕಾರ ಕೆರೆ ತುಂಬಿಸಲು ನೀರು ಬಿಡುತ್ತಿರುವುದು, ಯಾರು ಕೂಡ ಬೆಳೆ ಬೆಳೆಯಬಾರದು ಎಂದು ಹೇಳಿದೆ. ಮಾರ್ಚ್‌ವರೆಗೂ ಕುಡಿಯುವ ನೀರು ಇಟ್ಕಂಡು ಈಗಿರುವ ನೀರಿನಲ್ಲಿ ಮೂರು ಟಿಎಂಸಿ ನೀರನ್ನು ಕೆರೆ ತುಂಬಿಸಲು ಬಿಡ್ತಾರೆ ಎಂದು ಮಂಜು ತಿಳಿಸಿದರು.

click me!