
ಬೆಂಗಳೂರು: ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಕಟುವಾದ ಶಬ್ಧದಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಹಿರಂಗ ಚರ್ಚೆಗೆ ಹೋಗಲು ಡಿಕೆಗೆ ಯೋಗ್ಯತೆ ಇದೆಯಾ ಎಂಬ ಹೆಚ್ ಡಿಕೆ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ರಾಜಕೀಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ,ಚರ್ಚೆ ವಾದ ವಿವಾದ ಇರಬೇಕು. ನೀನೇನಾದ್ರೂ ಮಾಡಿದ್ದೀನಿ, ಸಾಧಿಸಿ ಗುಡ್ಡೆ ಇಟ್ಟಿದ್ದೀನಿ ಅಂದ್ರೆ ಜನಕ್ಕೆ ಏನಾದರೂ ಒಳ್ಳೆಯದು ಮಾಡಿದ್ದೀನಿ ಅಂದ್ರೆ, ಬಂದು ಹೇಳಪ್ಪ Come on tell you what is your commitment. ಜನ ನಿನಗೆ ವೋಟ್ ಕೊಟ್ಟಿದ್ದಾರೆ ತಾನೇ, ದೊಡ್ಡ ದೊಡ್ಡ ಸ್ಥಾನ ಬಂದಿದೆ ತಾನೇ, Come late as face. ಪಬ್ಲಿಕ್ ಮುಂದೆ ಉತ್ತರ ಕೊಡು. ನೀನು ಬರೀ ಹಿಟ್ ಆ್ಯಂಡ್ ರನ್ ಮಾಡೋದಲ್ಲ ಯಾವಾಗಲೂ ಬೇರೆಯವರಿಗೆ ಬ್ಲಾಕ್ ಮೇಲ್ ಮಾಡ್ಕೊಂಡು, ಹಿಟ್ ಆ್ಯಂಡ್ ರನ್ ಮಾಡೋದಲ್ಲ ಅಸೆಂಬ್ಲಿನಲ್ಲಿ ಅದೇನ್ ತಗೀತಿನಿ, ತಗಿತಿನಿ ಅಂದ್ರಲ್ಲ ಪ್ಲಿಸ್ ಕಂ. ಬನ್ನಿ ಏನ್ ಅವಮಾನ ಆಗೋದಿಲ್ಲ ಬರಲಿಲ್ವಾ ಸಾತನೂರಿಗೆ ನಾನು?
ನೀನ್ ಚೀಫ್ ಮಿನಿಸ್ಟರ್ ಆಗಿದ್ದಾಗಾ. ನೆನಪಿದೆಯಾ? Come face ನೀನ್ ಏನ್ ಮಾಡಿದ್ದೀಯಾ! ನಾವ್ ಏನ್ ಮಾಡಿದ್ದೀನಿ ಅಂತಾ ನಂದು ಏನ್ ಹುಳುಕು ಇದೆ ತಗಿ, ನಿಂದು ಏನ್ ಹುಕುಳು ಇದೆ ತಗಿಯೋಣ. ರಾಜಕೀಯ ದಲ್ಲಿ ಪ್ರಜಾಪ್ರಭುತ್ವ ದಲ್ಲಿ ವ್ಯವಸ್ಥೆ ಇದು. ಚರ್ಚೆವಾದ ವಿವಾದ ಇವೆಲ್ಲಾ ರಾಜಕಾರಣದಲ್ಲಿ ಇರಬೇಕು. ನೀನು ಏನಾದರೂ ಮಾಡಿದ್ದೀನಿ, ಸಾಕ್ಷಿ ಗುಡ್ಡೆ ಇಟ್ಟಿದ್ದೀನಿ ಅಂದ್ರೆ ಜನರಿಗೆ ಏನಾದರೂ ಒಳ್ಳೆಯದು ಮಾಡಿದ್ದೀನಿ ಅಂದ್ರೆ ಬಂದು ಹೇಳಲ್ಲಪ್ಪ. ಏನು ನಿನ್ನ ಕಮಿಂಟ್ಮೆಂಟ್? ಜನ ನಿನಗೆ ಮತ ಕೊಟ್ಟಿದ್ದಾರೆ ಅಲ್ವೇ? ದೊಡ್ಡ ದೊಡ್ಡ ಸ್ಥಾನ ಬಂದಿದ್ಯಾ ತಾನೇ ಕಮ್ , ಬಂದು ಫೇಸ್ ಮಾಡು, ಜನರಿಗೆ ಉತ್ತರ ನೀಡು ನೀನು ಬರೀ ಹಿಟ್ ಆ್ಯಂಡ್ ರನ್ ಮಾಡೋದು ಅಲ್ಲ. ಕೇವಲ ಹೆದರಿಸಿಕೊಂಡು, ಬ್ಲಾಕ್‌ಮೇಲೆ ಮಾಡೋದು ಅಲ್ಲ ಬಿಚ್ಚಿಲಿ ರೀ.. ಎಷ್ಟೋ ಜನ ಏನೇನೋ ಬಿಚ್ಚಿದ್ದಾರೆ ಈಗಲೂ ಬಿಚ್ಚಲಿ ಇಡೀ ಕೇಂದ್ರ ಸರ್ಕಾರನೇ ಇದೆ ಅಲ್ಲ ಇದಕ್ಕೆಲ್ಲಾ ಡಿಕೆ ಶಿವಕುಮಾರ್ ಹೆದರೋ ಮಗ ಅಲ್ಲ ಎಂದರು.
ಎರಡೂವರೆ ವರ್ಷ ಆದ್ಮೇಲೆ ನಮ್ಮ ಸರ್ಕಾರ ಬರುತ್ತೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರ ಇವೆಲ್ಲಾ ಎಷ್ಟು ಸಲ ಆಯ್ತು ಡೈಲಾಗ್ ಗಳು ಈಗ ಇವರ ಲೀಡರ್ ಶಿಪ್ ನಲ್ಲಿ ಎಷ್ಟಕ್ಕೆ ಇಳೀತು? 18ಕ್ಕೆ ಇಳಿತು . ಮುಂದೆ 8ಕ್ಕೆ ಇಳಿಯುತ್ತದೆ ಎಂದರು.
ನ್ಯಾಯಮಿತ್ರ ಸಹಕಾರಿ ಬ್ಯಾಂಕ್ ತನ್ನ ಬೆಳ್ಳಿ ಮಹೋತ್ಸವದ ಸಂಭ್ರಮವನ್ನು ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಆಚರಿಸಿತು. ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹಾಗೂ ಹಲವಾರು ಗಣ್ಯರು ಭಾಗವಹಿಸಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ನ್ಯಾಯಕ್ಕಾಗಿ ಹಗಲು-ರಾತ್ರಿ ಶ್ರಮಿಸುತ್ತಿರುವ ವಕೀಲರನ್ನು ಮೆಚ್ಚಿದರು. “ನೀವು ಸಮಾಜಕ್ಕೆ ನ್ಯಾಯ ನೀಡಲು ದುಡಿತ್ತಿದ್ದೀರಿ. 25 ವರ್ಷಗಳ ಹಿಂದೆ ಈ ಬ್ಯಾಂಕ್‌ನ ಉದ್ಘಾಟನೆ ಸಮಯದಲ್ಲಿ ಎಸ್.ಎಂ. ಕೃಷ್ಣ ಅವರ ಜೊತೆ ಸಹಕಾರ ಸಚಿವನಾಗಿ ಬಂದಿದ್ದೆ. ಇಂದು ಇದೇ ಬ್ಯಾಂಕ್‌ನ ಬೆಳ್ಳಿ ಮಹೋತ್ಸವದಲ್ಲಿ ಭಾಗಿಯಾಗಿರುವುದು ನನ್ನ ಭಾಗ್ಯ,” ಎಂದು ಅವರು ನೆನಪಿಸಿಕೊಂಡರು.
ಡಿಕೆ ಶಿವಕುಮಾರ್ ಮುಂದುವರಿಸಿ ಮಾತನಾಡುತ್ತಾ, ಸಹಕಾರಿ ಬ್ಯಾಂಕ್‌ಗಳಲ್ಲಿ ರಾಜಕಾರಣ ಮಿಶ್ರಣ ಮಾಡಬಾರದು. ಅನೇಕ ಸಹಕಾರಿ ಬ್ಯಾಂಕ್‌ಗಳು ದಿವಾಳಿ ಆಗಿವೆ. ನಮ್ಮ ರಾಜ್ಯದ ವಿಜಯ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್‌ಗಳೂ ರಾಷ್ಟ್ರೀಯ ಬ್ಯಾಂಕ್‌ಗಳಿಗೆ ಮರ್ಜ್ ಆಗಿವೆ. ಆದರೆ ಇಂದಿಗೂ ಕೆಲ ಸಹಕಾರ ಬ್ಯಾಂಕ್‌ಗಳು ಮತ್ತು ಸೊಸೈಟಿಗಳು ಉಳಿದುಕೊಂಡಿವೆ ಅಂದರೆ ಅದು ಜನರ ನಂಬಿಕೆಗಾಗಿ ಎಂದರು.ಅವರು ಇನ್ನೂ ಹೇಳಿದರು, ಸಹಕಾರ ಬ್ಯಾಂಕ್ ನಡೆಸಬೇಕಾದರೆ ಕೃಷ್ಣನ ತತ್ವ ತಿಳಿದಿರಬೇಕು. ಈ ಸಂಸ್ಥೆ ನಂಬಿಕೆಯ ಮೇಲೆ ನಡೆಯುತ್ತಿದೆ. ನಿಮ್ಮ ಬ್ಯಾಂಕ್ ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸುತ್ತೇನೆ.
ವಕೀಲರ ಪಾತ್ರದ ಬಗ್ಗೆ ಮಾತನಾಡುತ್ತಾ ವಕೀಲರ ಮಾತುಗಳೇ ಅವರ ಆಭರಣ. ನಾವು ಕಕ್ಷಿದಾರರು ನಿಮ್ಮ ಹತ್ತಿರ ಬರುವಾಗ ನಮ್ಮನ್ನು ಉಳಿಸಿ, ಜೈಲಿಗೆ ಹೋಗದಂತೆ ಕಾಪಾಡಿ ಎಂದು ಕೇಳಿಕೊಳ್ಳುತ್ತೇವೆ. ನಿಮ್ಮ ಮೇಲೆ ನಮಗೆ ನಂಬಿಕೆ ಇದೆ. ದೇವರ ಹತ್ತಿರ ಹೋಗಿದರೆ ಅರ್ಚಕರ ಮೂಲಕ ಬೇಡಿಕೊಳ್ಳುತ್ತೇವೆ, ಹಾಗೆಯೇ ವಕೀಲರು ಸಮಾಜದ ಅರ್ಚಕರಂತವರು ಎಂದು ಅವರು ಹೇಳಿದರು. ಮುಂದುವರಿಸಿ, ಸಮಾಜಕ್ಕೆ ನ್ಯಾಯ ಕೊಡಿಸುವುದು ನಿಮ್ಮ ಧರ್ಮ. ಸಂವಿಧಾನವೇ ನಿಮ್ಮ ಆಭರಣ. ನೀವು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರಿನ ಸಮಸ್ಯೆಗಳ ಕುರಿತು ಮಾತನಾಡಿದ ಉಪಮುಖ್ಯಮಂತ್ರಿಗಳು, ನಾನು ಬೆಂಗಳೂರಿನ ಸಚಿವನಾಗಿದ್ದೇನೆ. ನಗರದಲ್ಲಿ ಈಗ ಸುಮಾರು 1.30 ಕೋಟಿ ವಾಹನಗಳಿವೆ. ಪ್ರತಿದಿನ 70 ಲಕ್ಷ ಜನರು ಬೆಂಗಳೂರಿಗೆ ಬಂದು ಹೋಗುತ್ತಿದ್ದಾರೆ. ಎಷ್ಟೇ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಇದ್ದರೂ, ಜನರು ತಮ್ಮ ಕಾರುಗಳನ್ನು ತೆಗೆದುಕೊಂಡು ಬರುತ್ತಾರೆ. ಇಂತಹ ಸಂದರ್ಭಗಳಲ್ಲಿ ಟ್ರಾಫಿಕ್ ನಿಯಂತ್ರಣ ಬಹಳ ಕಷ್ಟ,” ಎಂದು ವಿವರಿಸಿದರು.
“ನಾವು ಫ್ಲೈಓವರ್‌ಗಳು, ಅಂಡರ್‌ಗ್ರೌಂಡ್ ರಸ್ತೆ ಯೋಜನೆಗಳು ಕೈಗೆತ್ತಿಕೊಂಡಿದ್ದೇವೆ. ಆದರೆ ಕೆಲವರು ನಾವು ದುಡ್ಡು ಬಾಚಲು ಯೋಜನೆ ಮಾಡ್ತಿದ್ದೇವೆ ಎಂದು ಪಿಐಎಲ್ ಹಾಕುತ್ತಾರೆ. ಅವರಿಗೆ ಅವಕಾಶ ಇದ್ದಾಗ ಏನೂ ಮಾಡಲಿಲ್ಲ. ಈಗ ನಾವು ಕೆಲಸ ಮಾಡುತ್ತಿದ್ದೇವೆ ಅಂದರೆ ಟೀಕೆ ಮಾಡುತ್ತಿದ್ದಾರೆ,” ಎಂದು ಅವರು ವಾಗ್ದಾಳಿ ನಡೆಸಿದರು.
ಡಿಕೆಶಿ ಹೇಳಿದರು, “ಸರ್ಕಾರದ ತಪ್ಪು ಇದ್ದರೆ ತಿದ್ದಬಹುದು, ಆದರೆ ಕೇವಲ ಪಿಐಎಲ್ ಮತ್ತು ಬ್ಲ್ಯಾಕ್‌ಮೇಲ್ ಮಾಡುವವರಿಂದ ಅಭಿವೃದ್ಧಿ ಅಡ್ಡಿಯಾಗಬಾರದು. ಬೆಂಗಳೂರು ಸಮಸ್ಯೆ ಬಗೆಹರಿಸಲು ನಾವು ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ರಚಿಸಿದ್ದೇವೆ. ಆಡಳಿತ ಸರಿಯಾಗಿ ನಡೆಯಬೇಕು ಎಂಬುದು ನಮ್ಮ ಉದ್ದೇಶ,” ಎಂದು ಹೇಳಿದರು.
ಅವರು ತಮ್ಮ ಮಗನ ವಿಷಯದಲ್ಲೂ ಹಾಸ್ಯಾತ್ಮಕವಾಗಿ ಹೇಳಿದರು, “ನನ್ನ ಮಗನನ್ನೂ ಲಾಯರ್ ಆಗಲು ಹಾಕಿದ್ದೇನೆ, ಆದರೆ ರಾಜಕೀಯಕ್ಕೆ ಬರಬಾರದು ಎಂದು ಹೇಳಿದ್ದೇನೆ,” ಎಂದು ಹೇಳಿದರು. ಬ್ಯಾಂಕ್‌ನ ಅಧ್ಯಕ್ಷರು ಹಾಗೂ ಗಣ್ಯ ಅತಿಥಿಗಳು ಈ ಸಂದರ್ಭದಲ್ಲಿ ಮಾತನಾಡಿ, ನ್ಯಾಯಮಿತ್ರ ಸಹಕಾರಿ ಬ್ಯಾಂಕ್‌ನ 25 ವರ್ಷದ ಯಶಸ್ವಿ ಪಯಣದ ಸ್ಮರಣಾರ್ಥವಾಗಿ ನೂತನ ಯೋಜನೆಗಳನ್ನೂ ಅನಾವರಣಗೊಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.