ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್‌ರಿಗೆ ಕಾಂಗ್ರೆಸ್ ಉಳಿಸಿಕೊಳ್ಳುವ ಮತ್ತು ಪಕ್ಷವನ್ನು ಕಟ್ಟುವ ಶಕ್ತಿಯಿದೆ. ಸಿಂಗಪುರದಲ್ಲಿ ಕುಳಿತು ಕಾಂಗ್ರೆಸ್ ಪಕ್ಷವನ್ನು ಉರುಳಿಸುವ ಶಕ್ತಿ ಯಾರಿಗೂ ಇಲ್ಲ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಕೋಲಾರ (ಜು.25) : ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್‌ರಿಗೆ ಕಾಂಗ್ರೆಸ್ ಉಳಿಸಿಕೊಳ್ಳುವ ಮತ್ತು ಪಕ್ಷವನ್ನು ಕಟ್ಟುವ ಶಕ್ತಿಯಿದೆ. ಸಿಂಗಪುರದಲ್ಲಿ ಕುಳಿತು ಕಾಂಗ್ರೆಸ್ ಪಕ್ಷವನ್ನು ಉರುಳಿಸುವ ಶಕ್ತಿ ಯಾರಿಗೂ ಇಲ್ಲ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಎಚ್‌ಡಿ.ಕುಮಾರಸ್ವಾಮಿ(HD Kumaraswamy) ಅವರು ಸಿಂಗಪುರದಲ್ಲಿ ಕುಳಿತು ಕಾಂಗ್ರೆಸ್ ಪಕ್ಷವನ್ನು ಒಡೆಯುವ ಸಂಚು ರೂಪಿಸುತ್ತಿದ್ದಾರೆ ಎಂಬ ಆರೋಪಕ್ಕೆ ಕೆವೈ.ನಂಜೇಗೌಡ(KY Nanjegowda MLA) ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದರು.
undefined
‘ಸರ್ಕಾರ ಉರುಳಿಸಲು ಎಚ್‌ಡಿಕೆ ಅಪ್ಪನಿಂದಲೂ ಸಾಧ್ಯವಿಲ್ಲ’ ಕುಮಾರಸ್ವಾಮಿ ವಿರುದ್ಧ ಮೊಯ್ಲಿ ಕಿಡಿ
ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್(Siddaramaiah and Dk Shivakumar) ಅವರಿಗೆ ಕಾಂಗ್ರೆಸ್ ಉಳಿಸಿಕೊಳ್ಳುವ ಶಕ್ತಿಯಿದೆ. ಕಾಂಗ್ರೆಸ್‌ನಲ್ಲಿ ಯಾವುದೇ ಬಣಗಳಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆ.ಶಿವಕುಮಾರ್ ಒಟ್ಟಿಗೆ ಪಕ್ಷವನ್ನು ಕಟ್ಟುವ ಮೂಲಕ ಅಧಿಕಾರಕ್ಕೆ ತಂದಿದ್ದಾರೆ. ಚುನಾವಣೆಯಲ್ಲಿ ಕೊಟ್ಟಗ್ಯಾರೆಂಟಿ ಭರವಸೆಗಳನ್ನು ಈಡೇರಿಸಲು ಒಟ್ಟಿಗೆ ಪ್ರಯತ್ನಿಸುತ್ತಿದ್ದಾರೆ. ಎಲ್ಲ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದ ಜನತೆಯ ನಂಬಿಕೆ ಉಳಿಸಿಕೊಳ್ಳುವ ದಿಕ್ಕಿನಲ್ಲಿ ಸಾಗುತ್ತಿದ್ದಾರೆ ಎಂದೂ ಕೆವೈ.ನಂಜೇಗೌಡ ಹೇಳಿದ್ದಾರೆ.
ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಅಕಾರಕ್ಕೆ ಬಂದಾಗ ಕೋಲಾರ ಜಿಲ್ಲೆಗೆ ಕೆಸಿ ವ್ಯಾಲಿ ಯೋಜನೆಯನ್ನು ಜಾರಿಗೊಳಿಸಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಈಗಿನ ಬಜೆಟ್‌ನಲ್ಲಿ ಮಾಲೂರು ಕ್ಷೇತ್ರಕ್ಕೆ ಆರು ಪಥದ ರಸ್ತೆಯ ಅಭಿವೃದ್ದಿಗೆ ಅವಕಾಶ ಮಾಡಿಕೊಡಲಾಗಿದೆ. ಕೆಜಿಎಫ್ ಕ್ಷೇತ್ರಕ್ಕೆ ಕೈಗಾರಿಕಾ ವಲಯವನ್ನು ಮಂಜೂರು ಮಾಡಲಾಗಿದೆ. ಮುಂದಿನ ಬಜೆಟ್‌ನಲ್ಲಿ ಮತ್ತಷ್ಟುಉತ್ತಮವಾದ ಯೋಜನೆಗಳನ್ನು ಕೋಲಾರ ಜಿಲ್ಲೆಗೆ ಕೊಡುವ ವಿಶ್ವಾಸವಿದೆ ಎಂದೂ ಅವರು ಹೇಳಿದರು.
ನೈತಿಕತೆ ಬಗ್ಗೆ ಮಾತು ಸಾಲದು, ನೈಸ್ ಸದನ ಸಮಿತಿ ವರದಿ ಬಗ್ಗೆ ಕ್ರಮ ಏಕಿಲ್ಲ? ಸಿದ್ದುಗೆ ದೇವೇಗೌಡ ಚಾಟಿ
ಕಾಂಗ್ರೆಸ್ ನಾಯಕ ರಮೇಶ್‌ಕುಮಾರ್ ಅವರು ಸದನದಲ್ಲಿ ಇಲ್ಲದಿರುವುದು ಬೇಜಾರಿನ ಸಂಗತಿಯಾಗಿದೆ. ಸ್ಪೀಕರ್ ಮತ್ತು ಸಚಿವರಾಗಿದ್ದಾಗ ರಮೇಶ್‌ಕುಮಾರ್ ಅವರ ಮೌಲ್ಯಯುತವಾದ ಸಲಹೆ ಮತ್ತು ಮಾರ್ಗದರ್ಶನವನ್ನು ಕಂಡಿದ್ದೇನೆ. ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ರಮೇಶ್‌ಕುಮಾರ್ ಅವರು ಇದ್ದಿದ್ದರೆ ರಾಜ್ಯ ಮತ್ತು ಜಿಲ್ಲೆಗೆ ಅಪಾರವಾದ ಅನುಕೂಲ ಆಗುತ್ತಿತ್ತು ಎಂದೂ ನಂಜೇಗೌಡ ಅವರು ನೊಂದು ನುಡಿದರು.