ಬಿಜೆಪಿಯಲ್ಲಿ ಭಿನ್ನಮತ ಸ್ಫೋಟದ ಮಧ್ಯೆ ಡಿಕೆ ಶಿವಕುಮಾರ್ ಮಾಸ್ಟರ್ ಪ್ಲಾನ್..!

By Suvarna News  |  First Published Jun 5, 2020, 3:00 PM IST

ರಾಜ್ಯಸಬಾ ಹಾಗೂ ವಿಧಾನಪರಿಷತ್ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕಾರಣ ರಂಗೇರಿದ್ದು, ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಇದರ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೊಸ ಆಟಕ್ಕೆ ಕೈಹಾಕಿದ್ದಾರೆ.


ಬೆಂಗಳೂರು, (ಜೂನ್.05): ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ನಲ್ಲಿ ರಾಜಕಾರಣ ಗರಿಗೆದರಿದೆ. ಒಂದೆಡೆ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ರೆ, ಜೆಡಿಎಸ್‌ನಲ್ಲಿ ವಿಧಾನಪರಿಷತ್ ಹಾಗೂ ರಾಜ್ಯಸಭಾ ಎಲೆಕ್ಷನ್‌ ಚರ್ಚೆ ಜೋರಾಗಿದೆ.

ಇನ್ನು ಕಾಂಗ್ರೆಸ್, ಪಕ್ಷ ಬಿಟ್ಟು ಹೋಗಿರುವ ನಾಯಕರನ್ನು ಮತ್ತೆ ವಾಪಸ್ ಕರೆತರಲು ಭರ್ಜರಿ ತಯಾರಿ ನಡೆಸುತ್ತಿದೆ. ಇದಕ್ಕೆ ಪೂರಕವೆಂಬಂತೆ ಕೆಪಿಸಿಸಿ ಸಾರಥಿಯಾಗಿರುವ ಡಿಕೆ ಶಿವಕುಮಾರ್ ಮೊದಲು ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರಿಗೆ ಗಾಳ ಹಾಕಿದ್ದಾರೆ.

Tap to resize

Latest Videos

ಕರ್ನಾಟಕ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಅಚ್ಚರಿ ಅಭ್ಯರ್ಥಿ ಘೋಷಣೆ

ಹೌದು...ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಫುಲ್ ಅಲರ್ಟ್ ಆಗಿದ್ದು, ಪಕ್ಷ ಸಂಘಟನೆ ಮಾಡಲು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡುತ್ತಿದ್ದಾರೆ.  ಕಾಂಗ್ರೆಸ್ ಪಕ್ಷವನ್ನು ತೊರೆದಿರುವ ಎಂಟಿಬಿ ನಾಗರಾಜ್ ಅವರ ಸ್ಥಾನಕ್ಕೆ ಪ್ರಬಲ ನಾಯಕ ಅವಶ್ಯವಿರುವುದರಿಂದ ಶರತ್ ಬಚ್ಚೇಗೌಡ ಅವರಿಗೆ ಡಿಕೆಶಿ ಗಾಳ ಹಾಕಿದ್ದಾರೆ.

ಘರ್ ವಾಪಸಿಗೆ ಸಮಿತಿ ರಚನೆ
ಕಾಂಗ್ರೆಸ್ ಪಕ್ಷ ಬಿಟ್ಟು ಹೋದವರನ್ನ ಮತ್ತೆ ಪಕ್ಷದ ಕಡೆ ಸೆಳೆಯಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭಾರೀ ಪ್ರಯತ್ನ ಮಾಡುತ್ತಿದ್ದಾರೆ. ಇದರ ಜೊತೆಗೆ ಬೇರೆ ರಾಜಕೀಯ ಪಕ್ಷದಿಂದ ಬರಲು ಆಸಕ್ತಿ ತೋರುವವರನ್ನು ಕೂಡ ಪಕ್ಷಕ್ಕೆ ಸೇರಿಸಿಕೊಳ್ಳಲು ಸಹ ಯೋಚನೆ ಮಾಡಲಾಗಿದೆ. ಹೀಗೆ ಆಸಕ್ತಿ ಇರುವವರನ್ನು ಸಂಪರ್ಕಿಸಿ ಮಾತುಕತೆ ನಡೆಸಲು ಸಮಿತಿಯೊಂದನ್ನು ಕೆಪಿಸಿಸಿ ಅಧ್ಯಕ್ಷರು ರಚನೆ ಮಾಡಿದ್ದಾರೆ. 

ಸಮಿತಿ ಇಂತಿದೆ

ಕೆಪಿಸಿಸಿ ಸಂಚಾಲಕ ಅಲ್ಲಂ ವೀರಭದ್ರಪ್ಪ ಅಧ್ಯಕ್ಷ, ಮುಖಂಡರಾದ ಬಿ.ಎ, ಹಸನಬ್ಬ, ಶಾಸಕ ಅಜಯ್ ಕುಮಾರ್ ಸರ್ ನಾಯಕ್,  ಮಾಜಿ ಶಾಸಕರಾದ ವಿ.ಮುನಿಯಪ್ಪ, ಅಭಯಚಂದ್ರ ಜೈನ್, ಮಾಜಿ ಸಂಸದರಾದ ಆರ್. ಧ್ರುವನಾರಾಯಣ, ಬಿ.ಎನ್.ಚಂದ್ರಪ್ಪ, ವಿ.ವೈ. ಘೋರ್ಪಡೆ, ಮಾಜಿ ಪ್ರಧಾನ ಕಾರ್ಯದರ್ಶಿ ಸಂಪತ್ ರಾಜ್, ಮಾಜಿ ಮೇಯರ್ ಸತೀಶ್ ಶೆಲ್, ಮಾಜಿ ಶಾಸಕಿ ಕೃಪಾ ಆಳ್ವ, ಕೆಪಿಸಿಸಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಪ್ರಫುಲ್ಲಾ ಮಧುಕರ್ ಸಮಿತಿ ಸದಸ್ಯರಾಗಿದ್ದಾರೆ.

ಯಾರ ಬೆಂಬಲಿಗರಿಗೆ ಪರಿಷತ್ ಸ್ಥಾನ? ಸಿದ್ದು ಕೈ vs ಡಿಕೆ ಖದರ್!

ಡಿಕೆಶಿ ಹೇಳಿದ್ದೇನು..?

ಸಮಿತಿ ರಚನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಬಹಳ ಜನ ನಮ್ಮ‌ಪಕ್ಷ ಬಿಟ್ಟು ಹೋಗಿದ್ದಾರೆ. ಬಿಟ್ಟು ಹೋದ ಹಲವರು ನನ್ನನ್ನ ಭೇಟಿ ಮಾಡಿದ್ದಾರೆ. ಪಕ್ಷಕ್ಕೆ ವಾಪಸ್ ಬರುವ ಬಗ್ಗೆ ಹೇಳಿದ್ದಾರೆ. ಹೀಗಾಗಿ ಪಕ್ಷದಿಂದ ಸಮಿತಿ ರಚನೆ ಮಾಡಿದ್ದೇವೆ. ಅಲ್ಲಂ ‌ವೀರಭದ್ರಪ್ಪ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಅವರು ಈ ಬಗ್ಗೆ ಪರಿಶೀಲನೆ ಮಾಡ್ತಾರೆ ಎಂದು ಹೇಳಿದರು.

ಜಿಲ್ಲಾ, ಬ್ಲಾಕ್ ಮಟ್ಟದಲ್ಲಿ ಎಲ್ಲಾ ಮಾತನಾಡುತ್ತಾರೆ. ಬಂದವರನ್ನೆಲ್ಲ ಸುಮ್ಮನೆ ಸೇರಿಸಿಕೊಳ್ಳೋಕೆ ಆಗಲ್ಲ. ಜಿಲ್ಲಾ, ಬ್ಲಾಕ್ ಮಟ್ಟದಲ್ಲೂ ಎಲ್ಲರ ಅಭಿಪ್ರಾಯ ಪಡೆಯಬೇಕು. ಎಲ್ಲರ ಜೊತೆ ಚರ್ಚೆ ಮಾಡಬೇಕು. ಈ ಬಗ್ಗೆ ನನಗೂ ಸಾಕಷ್ಟು ರಾಜಕೀಯ ಅನುಭವವಾಗಿದೆ. ಬರುವವರು ನಮ್ಮ ‌ಪಕ್ಷದ ಸಿದ್ಧಾಂತ ಒಪ್ಪಬೇಕು. ಅದಕ್ಕೆ ವಿಶ್ವಾಸಕ್ಕೆ ತೆಗೆದುಕೊಂಡು ಸೇರಿಸಿಕೊಳ್ಳಬೇಕು. ಹೀಗಾಗಿ ಸಮಿತಿಯನ್ನು ‌ರಚನೆ ಮಾಡಿದ್ದೇವೆ ಎಂದು ತಿಳಿಸಿದರು.

click me!