
ಬೆಂಗಳೂರು(ಏ.18): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ 21 ಮಂದಿ ಮುಖ್ಯ ವಕ್ತಾರರು, 36 ಮಂದಿ ವಕ್ತಾರರು ಹಾಗೂ ಐದು ಮಂದಿ ಮಾಧ್ಯಮ ಸಂಯೋಜಕರನ್ನು ನೇಮಕ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.
ಮುಖ್ಯ ವಕ್ತಾರರಾಗಿ ವಿ.ಆರ್. ಸುದರ್ಶನ್, ಡಾ.ಎಲ್. ಹನುಮಂತಯ್ಯ, ತೇಜಸ್ವಿನಿ ಗೌಡ, ಎಚ್.ಸಿ. ಬಾಲಕೃಷ್ಣ, ಐವಾನ್ ಡಿಸೋಜಾ, ಪಿ.ಆರ್. ರಮೇಶ್, ರಿಜ್ವಾನ್ ಅರ್ಷದ್, ಬೇಳೂರು ಗೋಪಾಲಕೃಷ್ಣ, ನಾಗರಾಜ್ ಯಾದವ್, ಲಾವಣ್ಯ ಬಲ್ಲಾಳ್, ಆಯನೂರು ಮಂಜುನಾಥ್, ಕೋನರೆಡ್ಡಿ, ಶಿವಾನಂದ ಕೌಜಲಗಿ, ಯು.ಬಿ. ವೆಂಕಟೇಶ್, ಡಾ.ಶಂಕರ್ ಗುಹಾ, ಆರ್.ವಿ. ವೆಂಕಟೇಶ್, ಡಾ.ಸಿ.ಎಸ್. ದ್ವಾರಕನಾಥ್, ಕುಸುಮಾ ಹನುಮಂತರಾಯಪ್ಪ, ಪಿ.ಎಂ. ನರೇಂದ್ರಸ್ವಾಮಿ, ಎಚ್.ಎಂ. ರೇವಣ್ಣ, ಪ್ರಕಾಶ್ ರಾಥೋಡ್ ಅವರನ್ನು ನೇಮಿಸಲಾಗಿದೆ.
ಕೆಪಿಸಿಸಿ ಪದಾಧಿಕಾರಿ ಪಟ್ಟೀಲಿ ನಾಸಿರ್ ಕೈಚಳಕಕ್ಕೆ ಆಕ್ರೋಶ
ವಕ್ತಾರರಾಗಿ ದಾವಣಗೆರೆ ಬಸವರಾಜು, ಮೈಸೂರು ವೆಂಕಟೇಶ್, ಎಂ.ಜಿ. ಹೆಗಡೆ, ಮಂಜುನಾಥ್ ಅದ್ದೆ, ಭವ್ಯ ನರಸಿಂಹಮೂರ್ತಿ, ಎಸ್.ಎ. ಹುಸೇನ್, ಅಗಾ ಸುಲ್ತಾನ್, ಎಚ್.ಎಚ್. ದೇವರಾಜ್, ನಿಜಾಮ್ ಫೌಜ್ದಾರ್, ಕಾರ್ನಿಲಿಯೊ ವೆರೊನಿಕಾ, ವಿನಯ್ ರಾಜ್, ರಮೇಶ್ ಹೆಗ್ಡೆ, ವಿಠಲ್ ಶೆಟ್ಟಿ, ರವೀಶ್ ಬಸಪ್ಪ, ಸೂರ್ಯ ಮುಕುಂದರಾಜ್, ನರಸಿಂಹಸ್ವಾಮಿ ಎಂ. ಮಾಲೂರ್, ಶೈಲಜಾ ಪಾಟೀಲ್, ಶೈಲಜಾ ಅಮರನಾಥ್, ಎಂ.ಜಿ. ಸುಧೀಂದ್ರ, ಬಿ.ಆರ್. ನಾಯ್ಡು, ಎಚ್.ಬಿ. ಚಾಂದ್ ಪಾಷ, ಸೌವದ್ ಗೊಂಡ್ಕ, ದಯಾನಂದ್, ಇರ್ಷಾದ್ ಅಹ್ಮದ್, ಮಹಾಂತೇಶ್ ಅಟ್ಟಿ, ಬಾಲಕೃಷ್ಣ ಯಾದವ್, ಪದ್ಮಪ್ರಸಾದ್ ಜೈನ್, ಅಶ್ವಿನ್, ಆಯಿಶಾ ಫರ್ಜಾನ, ಶತಾಭಿಷ್ ಶಿವಣ್ಣ, ಸಮೃದ್ಧ್ ಹೆಗ್ಡೆ, ಧ್ರುವಜತ್ತಿ, ಎನ್. ದಿವಾಕರ್, ಕಶ್ಯಪ್ ನಂದನ್, ಡಿ. ದರ್ಶನ್, ಸ್ವಾತಿ ಚಂದ್ರಶೇಖರ್ ಅವರನ್ನು ನೇಮಕ ಮಾಡಲಾಗಿದೆ.
ಮಾಧ್ಯಮ ಸಮನ್ವಯಕಾರರು:
ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಸಮನ್ವಯಕಾರರಾಗಿ ಜಿ.ಸಿ. ರಾಜುಗೌಡ, ಕೆಪಿಸಿಸಿ ಮಾಧ್ಯಮ ಸಮನ್ವಯಕಾರರಾಗಿ ರವಿ ಗೌಡ, ಅಬ್ದುಲ್ ಮುನೀರ್, ಇರ್ಫಾನ್ ಹಾಗೂ ಎಚ್. ಕುಮಾರ್ ಅವರನ್ನು ನೇಮಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.