ಭಾರತ್ ಜೋಡೋ ನಡುವೆ ಡಿಕೆಶಿಗೆ ತಲೆನೋವು, ನಾಳೆ ದೆಹಲಿ ಇಡಿ ಕಚೇರಿಗೆ ಹಾಜರ್!

By Suvarna NewsFirst Published Sep 18, 2022, 7:56 PM IST
Highlights

ಮೈಸೂರಿನಲ್ಲಿರುವ ಡಿಕೆ ಶಿವಕುಮಾರ್ ನೇರವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದಲೇ ದೆಹಲಿಗೆ ತೆರಳಲಿದ್ದಾರೆ. ಇಡಿ ನೋಟಿಸ್ ನೀಡಿರುವ ಹಿನ್ನಲೆಯಲ್ಲಿ ಡಿಕೆ ಶಿವಕುಮಾರ್ ನಾಳೆ ವಿಚಾರಣೆ ಹಾಜರಾಗಲಿದ್ದಾರೆ.

ಬೆಂಗಳೂರು(ಸೆ.18): ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಕೇರಳದಲ್ಲಿ ಸಂಚರಿಸುತ್ತಿದೆ. ಕೇರಳದ ಬಳಿಕ ಗುಂಡ್ಲುಪೇಟೆ ಮೂಲಕ ಕರ್ನಾಟಕ ಪ್ರವೇಶಿಸಲಿದೆ. ಇದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದೆ. ಇದರ ನಡುವೆ ಡಿಕೆಶಿಗೆ ಇಡಿ ನೋಟಿಸ್ ತೀವ್ರ ಸಂಕಷ್ಟ ತಂದಿದೆ. ವಿಚಾರಣೆಗೆ ನೋಟಿಸ್ ನೀಡಿರುವ ಹಿನ್ನಲೆಯಲ್ಲಿ ಡಿಕೆ ಶಿವಕುಮಾರ್  ದೆಹಲಿಗೆ ತೆರಳಲಿದ್ದಾರೆ. ನಾಳಯೇ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ. ಸದ್ಯ ಭಾರತ್ ಜೋಡೋ ಯಾತ್ರೆ ಕುರಿತು ಮೈಸೂರಿನ ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಇದಕ್ಕಾಗಿ ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಜೊತೆ ಸತತ ಸಭೆ ನಡೆಸಿದ್ದಾರೆ. ಮೈಸೂರಿನಿಂದ ನೇರವಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಡಿಕೆ ಶಿವಕುಮಾರ್, ದೆಹಲಿಗೆ ತೆರಳಲಿದ್ದಾರೆ.  ಬಿಜೆಪಿ ಯಾವುದೇ ಅಸ್ತ್ರಕ್ಕೆ ಹೆದರುವುದಿಲ್ಲ. ಎಲ್ಲವನ್ನೂ ಎದುರಿಸುತ್ತೇನೆ ಎಂದು ಡಿಕೆ ಶಿವಕುಮಾರ್ ಗುಡುಗಿದ್ದಾರೆ. 

ಪಲಾಯನ ಮಾಡಲ್ಲ, ಇ.ಡಿ. ವಿಚಾರಣೆಗೆ ಹೋಗ್ತೀನಿ: ಡಿಕೆಶಿ
ಮೈಸೂರು ಪ್ರವಾಸ ಮುಗಿದ ಬಳಿಕ ದೆಹಲಿಗೆ(Delhi) ಹೋಗಿ ಜಾರಿ ನಿರ್ದೇಶನಾಲಯ (ED)ದ ತನಿಖೆ ಎದುರಿಸುತ್ತೇನೆ. ವಿಧಾನಮಂಡಲ ಅಧಿವೇಶನ ಹೆಸರು ಹೇಳಿ ವಿನಾಯಿತಿ ಕೇಳಬಹುದು. ಆದರೆ, ನಾನು ಪಲಾಯನ ಮಾಡಿದಂತಾಗುತ್ತದೆ. ನಾನೇನು ತಪ್ಪು ಮಾಡಿಲ್ಲ, ಹೀಗಾಗಿ ವಿಚಾರಣೆಗೆ ಹೋಗುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಹೇಳಿದ್ದಾರೆ.  ಇ.ಡಿ.(ED Notice) ಅವರು ಯಾವ ಕಾರಣಕ್ಕೆ ಕರೆದಿದ್ದಾರೆ ಎಂಬುದು ಗೊತ್ತಿಲ್ಲ. ಅಲ್ಲಿಗೆ ಹೋಗಿ ವಿಚಾರಣೆ ಎದುರಿಸಿದ ಮೇಲೆ ವಿಷಯ ತಿಳಿಯಲಿದೆ. ಯಡಿಯೂರಪ್ಪ ಅವರ ಸರ್ಕಾರ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐಗೆ(CBI) ನೀಡಿದ್ದು, ಅದನ್ನು ಪ್ರಶ್ನಿಸಿ ಹೈಕೋರ್ಚ್‌ನಲ್ಲಿ(High Court) ಅರ್ಜಿ ಹಾಕಿದ್ದೇನೆ. ಮೊದಲ ಬಾರಿಗೆ ಇ.ಡಿ. ನೋಟಿಸ್‌ ಬಂದಿದೆ. ನನ್ನ ಬಳಿ ಎಲ್ಲಾ ಮಾಹಿತಿ ಇದ್ದು, ವಿಚಾರಣೆಗೆ ಹಾಜರಾಗುತ್ತೇನೆ ಎಂದು ಸ್ಪಷ್ಟಪಡಿಸಿದರು. 

ಡಿಕೆಶಿಗೆ ಇ.ಡಿ ಸಮನ್ಸ್‌; ಭಾರತ ಏಕತಾ ಯಾತ್ರೆ, ಅಧಿವೇಶನದ ವೇಳೆ ಕಿರುಕುಳ ಎಂದ ಕಾಂಗ್ರೆಸ್‌ ಅಧ್ಯಕ್ಷ

ಅಧಿವೇಶನದ ಹಿನ್ನೆಲೆಯಲ್ಲಿ ವಿನಾಯಿತಿ ಕೇಳಬಹುದಲ್ಲ ಎಂಬ ಪ್ರಶ್ನೆಗೆ, ಅಧಿವೇಶನ ಕಾರಣದಿಂದ ವಿಚಾರಣೆಯಿಂದ ವಿನಾಯಿತಿ ಕೇಳಬಹುದು, ಕೇಳಿದರೆ ನಾನು ಪಲಾಯನ ಮಾಡಿದಂತೆ ಆಗುತ್ತದೆ. ನಾನು ಪಲಾಯನ ಮಾಡುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಮೇಲೆ ಯಾವುದೇ ಹಗರಣ ಇಲ್ಲ. ಹೀಗಾಗಿ ನಾನು ವಿಚಾರಣೆಗೆ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸಿದ್ದು, ಡಿಕೆಶಿ ಒಳಬೇಗುದಿ ಮತ್ತೆ ಬಹಿರಂಗ
ಕಾಂಗ್ರೆಸ್‌ನೊಳಗೆ(Congress) ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಡುವಿನ ಒಳಬೇಗುದಿ ಮತ್ತೆ ಬಹಿರಂಗವಾಗಿದೆ. ಮಂಡ್ಯದಲ್ಲಿ ನಡೆದ ಭಾರತ್‌ ಜೋಡೋ ಯಾತ್ರೆಯ ಪೂರ್ವಭಾವಿ ಸಭೆ ಉಭಯ ನಾಯಕರ ನಡುವಿನ ಬಿಗುಮಾನ ಪ್ರದರ್ಶನಕ್ಕೆ ಮತ್ತೊಮ್ಮೆ ವೇದಿಕೆಯಾಯಿತು.

click me!