ವಾರ್ಡ್‌ ಸಮಿತಿ ರಚಿಸದಿದ್ರೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ವಜಾ : ಡಿಕೆಶಿ ಎಚ್ಚರಿಕೆ

By Kannadaprabha News  |  First Published Aug 21, 2021, 8:14 AM IST
  • ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಲು ವಾರ್ಡ್‌ ಸಮಿತಿ ರಚನೆ ಅನಿವಾರ್ಯ
  • ಹೀಗಾಗಿ ತಿಂಗಳ ಅಂತ್ಯದೊಳಗಾಗಿ ವಾರ್ಡ್‌ ಸಮಿತಿಗಳನ್ನು ರಚಿಸಿ ಪಟ್ಟಿಕಳುಹಿಸಬೇಕು
  • ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ 

 ಬೆಂಗಳೂರು (ಆ.21):  ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಲು ವಾರ್ಡ್‌ ಸಮಿತಿ ರಚನೆ ಅನಿವಾರ್ಯ. ಹೀಗಾಗಿ ತಿಂಗಳ ಅಂತ್ಯದೊಳಗಾಗಿ ವಾರ್ಡ್‌ ಸಮಿತಿಗಳನ್ನು ರಚಿಸಿ ಪಟ್ಟಿಕಳುಹಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟಜಿಲ್ಲಾ ಸಮಿತಿಗಳನ್ನು ವಜಾ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್‌ಭವನದಲ್ಲಿ ಮಾಜಿ ಪ್ರಧಾನಮಂತ್ರಿ ರಾಜೀವ್‌ಗಾಂಧಿ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮದಿನದ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Latest Videos

undefined

ಅಚ್ಚೇ ದಿನ್‌ ಯಾರಿಗೆ, ಎಲ್ಲಿ ಬಂದಿದೆ ಅಂತ ಬಿಜೆಪಿಗರೇ ಹೇಳಬೇಕು: ಡಿಕೆಶಿ

ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿಗಳ ಮಟ್ಟಕ್ಕೆ ಹೋಗಿ ಪಕ್ಷ ಸಂಘಟಿಸಬೇಕು. ಕೊರೋನಾ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಬೇಕು. ಡೆತ್‌ ಆಡಿಟ್‌ ಮಾಡಿ ಕೊರೋನಾದಿಂದ ಮೃತಪಟ್ಟವರ ನಿಜವಾದ ಅಂಕಿ-ಅಂಶ ನೀಡಬೇಕು. ಇವೆಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು ಮುಂದಿನ ತಿಂಗಳು ನಡೆಯುವ ಅಧಿವೇಶನದಲ್ಲಿ ಇವರಿಗೆಲ್ಲ ಪರಿಹಾರ ಕಲ್ಪಿಸುವಂತೆ ಹೋರಾಟ ಮಾಡಲಾಗುವುದು. ಹೀಗಾಗಿ ಈ ತಿಂಗಳ ಒಳಗಾಗಿ ವಾರ್ಡ್‌ ಸಮಿತಿ ರಚಿಸಿ ಪಕ್ಷ ಸಂಘಟನೆಗೆ ಸಹಕರಿಸಬೇಕು ಎಂದು ಕರೆ ನೀಡಿದರು.

ಯುವಕರಿಗೆ ಶಕ್ತಿ ನೀಡಬೇಕು ಹಾಗೂ ತಳಮಟ್ಟದಲ್ಲಿ ಪಕ್ಷ ಸಂಘಟಿಸಬೇಕು ಎಂಬುದು ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ್‌ಗಾಂಧಿ ಅವರ ಬಯಕೆ. ನಾವೆಲ್ಲರೂ ಅವರ ದೂರದೃಷ್ಟಿ, ಚಿಂತನೆಯ ಫಲಾನು ಭವಿಗಳು ರಾಜೀವ್‌ಗಾಂಧಿ ಅವರು ಪ್ರಧಾನಿಯಾದ ಮೇಲೆ ರಾಮಲಿಂಗಾರೆಡ್ಡಿ ಸೇರಿದಂತೆ 63 ಮಂದಿ ಯುವಕರಿಗೆ ಟಿಕೆಟ್‌ ನೀಡಿದರು. ಹೀಗಾಗಿ ಅವರ ಮಾರ್ಗದರ್ಶನದಲ್ಲಿ ನಾವೆಲ್ಲಾ ನಡೆಯಬೇಕು ಎಂದರು.

click me!