
ತುರುವೇಕೆರೆ (ಆ.21): ಜೆಡಿಎಸ್ ಬಾಗಿಲು ತೆರೆದಿದೆ. ಯಾರು ಬೇಕಾದರೂ ನಮ್ಮ ಪಕ್ಷಕ್ಕೆ ಬರಬಹುದು, ಯಾರು ಬೇಕಾದರೂ ಪಕ್ಷದಿಂದ ಹೋಗಬಹುದು. ನಾವು ಯಾವುದಕ್ಕೂ ತಲೆ ಕೆಡಿಸಿಕೊಳ್ಳೊಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಕೆಲವು ಜೆಡಿಎಸ್ ಮುಖಂಡರು ಪಕ್ಷ ಬಿಡುತ್ತಿದ್ದಾರೆ ಎಂಬ ಶಂಕೆ ಇದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾಯಕರಿಂದ ಜೆಡಿಎಸ್ ಇಲ್ಲ. ಸಾಮಾನ್ಯ ಕಾರ್ಯಕರ್ತರಿಂದ ಪಕ್ಷ ಇದೆ ಎಂದರು.
ಉತ್ತರಿಸಿದ ಅವರು ವಿಧಾನ ಪರಿಷತ್ ಸದಸ್ಯರೇ ಆಗಲಿ, ಹಾಲಿ ಶಾಸಕರೇ ಆಗಲಿ ಪಕ್ಷ ಬಿಟ್ಟರೇ ನಷ್ಟವೇನೂ ಇಲ್ಲ. ಪಕ್ಷದಿಂದ ಎಲ್ಲವನ್ನೂ ಪಡೆದು ಪಕ್ಷಕ್ಕೇ ದ್ರೋಹ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್ ಅವರ ಹೆಸರು ಹೇಳದೇ ಪರೋಕ್ಷವಾಗಿ ಟಾಂಗ್ ನೀಡಿದರು.
ಮುಂದಿನ ಚುನಾವಣೆಗೆ ಜೆಡಿಎಸ್ ಮಿಷನ್-123: ಎಚ್ ಡಿ ಕುಮಾರಸ್ವಾಮಿ
ಪಕ್ಷಕ್ಕೆ ದ್ರೋಹ ಮಾಡಿದವರು ಈಗ ಜೆಡಿಎಸ್ ಹೆಸರು ಹೇಳಿ ಬಂದರೆ ಜೆಡಿಎಸ್ ಕಾರ್ಯಕರ್ತರು ಸರಿಯಾಗಿ ಬುದ್ಧಿ ಕಲಿಸಲಿದ್ದಾರೆ. ಇವರಾರಯರಿಂದಲೂ ಪಕ್ಷ ಇಲ್ಲ. ಎಲ್ಲವೂ ಕಾರ್ಯಕರ್ತರಿಂದ ಎಂಬುದನ್ನು ಮನಗಾಣಲಿ ಎಂದರು.
ಇನ್ನು ನಮ್ಮ ಪಕ್ಷದ ಹಲವರು ಶಾಕ್ ಕೊಟ್ಟು ಬೇರೆ ಪಕ್ಷಕ್ಕೆ ಹೋಗ್ತಾರೆ ಅಂತೆಲ್ಲಾ ಸುದ್ದಿಯಾಗುತ್ತಿದೆ. ನಮ್ಮ ಪಕ್ಷ ಬಿಟ್ಟು ಹೋಗುತ್ತಿರುವವರ ಕರೆಂಟ್ ಅನ್ನು ನಾವು ಕಿತ್ತು ಹಾಕಿದ್ದೇವೆ. ಅವರಲ್ಲೇ ಕರೆಂಟ್ ಇಲ್ಲ. ಇನ್ನು ಶಾಕ್ ಎಲ್ಲಿಯ ಮಾತು ಎಂದು ನಗೆ ಎಬ್ಬಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.