ವಿಧಾನಸಭಾ ಚುನಾವಣೆಗೂ ಮುನ್ನವೇ ಜೆಡಿಎಸ್‌ನಲ್ಲಿ ಭಿನ್ನಮತ ಸ್ಫೋಟ..!

By Kannadaprabha News  |  First Published Dec 21, 2022, 11:00 PM IST

ಅಧಿಕೃತ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಹಿನ್ನೆಲೆ ಹುಮನಾಬಾದ ಕ್ಷೇತ್ರದ ಸ್ಥಳೀಯ 9 ಜನ ಅಕಾಂಕ್ಷಿಗಳು ಜೆಡಿಎಸ್‌ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. 


ಹುಮನಾಬಾದ(ಡಿ.21):  ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಮುನ್ನವೆ ಜೆಡಿಎಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅಧಿಕೃತ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಹಿನ್ನೆಲೆ ಹುಮನಾಬಾದ ಕ್ಷೇತ್ರದ ಸ್ಥಳಿಯ 9 ಜನ ಅಕಾಂಕ್ಷಿಗಳು ಜೆಡಿಎಸ್‌ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಪಟ್ಟಣದ ಜೆಡಿಎಸ್‌ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದಿ. ಮೀರಾಜೋದಿನ್‌ ಪಟೇಲ್‌ ಸಹೋದರ ಮುಜಿಬೊದ್ದಿನ್‌ ಪಟೇಲ್‌ ಮಾತನಾಡಿ, ಜೆಡಿಎಸ್‌ ಪಕ್ಷದ ರಾಜಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಪುತ್ರ ಸಿಎಂ ಫಯಾಜ್‌ ಅವರು ದಿ. ಮೀರಾಜೊದ್ದಿನ್‌ ಪಟೇಲ್‌ ಹೆಸರು ಬಳಸಿ ಪ್ರಚಾರ, ಜನ ಸಂಪರ್ಕ ಮಾಡುತ್ತಿದ್ದಾರೆ. ಅಲ್ಲದೆ ಸ್ಥಳಿಯ ಜೆಡಿಎಸ್‌ ನಾಯಕರನ್ನು ಬಿಟ್ಟು ಹೊರಗಿನಿಂದ ಬಂದ ಅಭ್ಯರ್ಥಿಗೆ ಟಿಕೆಟ್‌ ಘೋಷಣೆ ಮಾಡಿದ್ದು, ಜೆಡಿಎಸ್‌ನಲ್ಲಿ ಭಿನ್ನಮತ ಸ್ಪೋಟಗೊಂಡಿದೆ.

Latest Videos

undefined

ಧಮ್‌ ಇದ್ರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ: ಖಂಡ್ರೆಗೆ ಖೂಬಾ ಸವಾಲ್‌

ಜೆಡಿಎಸ್‌ ರಾಜ್ಯಾಧ್ಯಕ್ಷ ಪುತ್ರ ಸಿ.ಎಂ ಫಯಾಜ್‌ ಅವರಿಗೆ ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಹುಮನಾಬಾದ ಕ್ಷೇತ್ರದಿಂದ ಟಿಕೆಟ್‌ ನೀಡದಂತೆ ಸ್ಥಳಿಯರಿಗೆ ಟಿಕೆಟ್‌ ನೀಡುವಂತೆ ಕುಮಾರಸ್ವಾಮಿ ಹಾಗೂ ರಾಜಾಧ್ಯಕ್ಷರ ಗಮನಕ್ಕೆ ತರಲಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್‌ ನಾಯಕರು ಸ್ಥಳಿಯ ಅಕಾಂಕ್ಷಿಗಳಿಗೆ ಮಣೆ ಹಾಕದೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಪುತ್ರನಿಗೆ ಟಿಕೆಟ್‌ ಘೋಷಣೆ ಮಾಡಿರುವುದು ಯಾವ ಆಧಾರದ ಮೇಲೆ ತಿಳಿಯುತ್ತಿಲ್ಲ. ಬೆಂಗಳೂರಿನಿಂದ ಕ್ಷೇತ್ರಕ್ಕೆ ಬಂದ ವ್ಯಕ್ತಿ ಕ್ಷೇತ್ರದ ಕಷ್ಟ, ಸುಃಖದಲ್ಲಿ ಭಾಗಿಯಾಗಲು ಸಾಧ್ಯವೆ ಎಂದು ಪ್ರಶ್ನಿಸಿದರು.

ಈ ಹಿಂದೆ ಜೆಡಿಎಸ್‌ ವರಿಷ್ಠ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷರ ಸಹಾನುಭೂತಿ ಇದೆ. ಸ್ಥಳಿಯ ನಿಷ್ಠಾವಂತ ಕಾರ್ಯಕರ್ತರಿಗೆ ದೂರ ಮಾಡಲಾಗುತ್ತಿದೆ. ಒಂದು ವೇಳೆ ಸ್ಥಳಿಯರಿಗೆ ಟಿಕೆಟ್‌ ನೀಡಿದ್ದೆ ಆದಲ್ಲಿ ಜೆಡಿಎಸ್‌ಗೆ ವರದಾನವಾಗಲಿದೆ ಎಂದು ತಿಳಿಸಿದರು.

ಟಿಕೆಟ್‌ ಅಕಾಂಕ್ಷಿಗಳಾದ ಸತೀಷ ರಾಂಪೂರೆ ಮಾತನಾಡಿ, 9 ಜನ ಪೈಕಿ ನಮ್ಮಲ್ಲೆ ಯಾರಿಗಾದರೂ ಟಿಕೆಟ್‌ ನೀಡುವಂತೆ ಹೈಕಮಾಂಡ್‌ಗೆ ಆಗ್ರಹಿಸಿದ್ದೇವೆ. ಮತ್ತೊಮ್ಮೆ ಅಭ್ಯರ್ಥಿ ಕುರಿತು ಮರು ಪರಿಶೀಲಿಸಿ ಸೂಕ್ತ ಅಭ್ಯರ್ಥಿಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿದ್ದೇವೆ ಎಂದರು. ಆಕಾಂಕ್ಷಿಗಳಾದ ಫರವೇಜ್‌ ಪಟೇಲ್‌, ಅಬ್ದುಲ್‌ ರಹೇಮಾನ್‌ ಗೋರೆಮಿಯ್ಯಾ, ಮಹೇಶ ಅಗಡಿ, ದತ್ತು ವಡೆಯರ್‌, ಸಂಜುಕುಮಾರ ಸೇರಿದಂತೆ ಅನೇಕರಿದ್ದರು.

click me!