ಯುಪಿಯಂತೆ ಬಂಗಾಳದಲ್ಲಿ ಬುಲ್ಡೋಜರ್‌ಗಳು ಓಡುತ್ತವೆ: ಬಿಜೆಪಿ ನಾಯಕ ಸುವೇಂದು ಅಧಿಕಾರಿ

By BK AshwinFirst Published Dec 21, 2022, 10:42 PM IST
Highlights

ನಾನು ಡಿಸೆಂಬರ್‌ನಲ್ಲಿ 3 ಪ್ರಮುಖ ದಿನಾಂಕಗಳನ್ನು ಉಲ್ಲೇಖಿಸಿದ್ದೇನೆ ಹೊರತು ರಾಜ್ಯ ಸರ್ಕಾರ ಬದಲಾಯಿಸುತ್ತೇವೆ ಎಂದು ನಾನು ಹೇಳಿಲ್ಲ ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ. 

ಉತ್ತರ ಪ್ರದೇಶದಂತೆಯೇ (Uttar Pradesh) ಪಶ್ಚಿಮ ಬಂಗಾಳದಲ್ಲಿ (West Bengal) ಬುಲ್ಡೋಜರ್‌ಗಳು (Bulldozers) ಓಡುತ್ತವೆ ಎಂದು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ (Opposition Leader) ಸುವೇಂದು ಅಧಿಕಾರಿ (Suvendu Adhikari) ಅವರು ಇಂದು ತಮ್ಮ ತವರು ಕಂಠಿಯಲ್ಲಿ ಸಭೆಯನ್ನು ಉದ್ದೇಶಿಸಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ (BJP) ಸರ್ಕಾರ ಅಧಿಕಾರಕ್ಕೆ ಬರಲಿದೆ. ಬಂಗಾಳದಲ್ಲಿ ರಾಷ್ಟ್ರೀಯವಾದಿ ಸರ್ಕಾರ ಬರಲಿದೆ. ಡಬಲ್ ಎಂಜಿನ್ (Double Engine) ಸರ್ಕಾರ ಇರುತ್ತದೆ. ಉತ್ತರ ಪ್ರದೇಶದಂತೆಯೇ ಬಂಗಾಳದಲ್ಲೂ ಬುಲ್ಡೋಜರ್‌ಗಳು ಓಡುತ್ತವೆ” ಎಂದೂ ಅವರು ಹೇಳಿದರು.

ಇನ್ನು, ಪಶ್ಚಿಮ ಬಂಗಾಳದ ಕಂಠಿಯಲ್ಲಿ ನಡೆದ ರ್‍ಯಾಲಿಯಲ್ಲಿ ಸುವೇಂದು ಅಧಿಕಾರಿ ಅವರ ಹೇಳಿದ್ದ ‘ಡಿಸೆಂಬರ್ ಮಿಸ್ಟರಿ’ ಬಯಲಾಗಿದೆ. ಹಾಗೂ, ಡಿಸೆಂಬರ್‌ನಲ್ಲಿ ಟಿಎಂಸಿ ಸರ್ಕಾರ ಪತನವಾಗಲಿದೆ ಎಂದು ಹೇಳಿಲ್ಲ ಎಂದೂ ಸುವೇಂದು ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ. “ನಾನು ಡಿಸೆಂಬರ್‌ನಲ್ಲಿ 3 ಪ್ರಮುಖ ದಿನಾಂಕಗಳನ್ನು ಉಲ್ಲೇಖಿಸಿದ್ದೇನೆ ಹೊರತು ರಾಜ್ಯ ಸರ್ಕಾರ ಬದಲಾಯಿಸುತ್ತೇವೆ ಎಂದು ನಾನು ಹೇಳಿಲ್ಲ. ಶಾಸಕರು ಸರ್ಕಾರ ಬೀಳಿಸಬೇಕಾ? ಅಥವಾ ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿ ಅಧಿಕಾರಕ್ಕೆ ಬರಬೇಕೇ? ಎಂದೂ ಸುವೇಂದು ಅಧಿಕಾರಿ ರ್‍ಯಾಲಿಯಲ್ಲಿ ನೆರೆದಿದ್ದ ಜನರನ್ನು ಕೇಳಿದ್ದಾರೆ.

ಇದನ್ನು ಓದಿ: ಡಿಸೆಂಬರ್‌ನಲ್ಲಿ Mamata Banerjee ಬಂಧನ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಭವಿಷ್ಯ

ಇತ್ತೀಚೆಗೆ, ಡಿಸೆಂಬರ್ (12, 14 ಮತ್ತು 21) 3 ದಿನಾಂಕಗಳನ್ನು ಘೋಷಿಸುವ ಮೂಲಕ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ರಾಜಕೀಯ ತಾಪಮಾನವನ್ನು ಹೆಚ್ಚಿಸಿದ್ದರು. ಈ ದಿನಗಳಲ್ಲಿ ದೊಡ್ಡ ಬೆಳವಣಿಗೆಗಳು ನಡೆಯಲಿವೆ ಎಂದೂ ಅವರು ಹೇಳಿದ್ದರು. ಈ ಮಧ್ಯೆ, ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ನಂದಿಗ್ರಾಮದ ಶಾಸಕರು ಮುಂದಿನ ವರ್ಷ ದೊಡ್ಡ ವಿಷಯಗಳು ನಡೆಯಲಿವೆ ಎಂದೂ ಸೂಚಿಸಿದ್ದಾರೆ. 

ಆದರೆ, ಆ ವಿಷಯಗಳು ಏನು ಎಂಬುದರ ಬಗ್ಗೆ ವಿವರ ನೀಡದ ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ದಿನಗಳು ಬದಲಾಗುತ್ತವೆ. ತಿಂಗಳು ಬದಲಾಗುತ್ತದೆ. ಆದರೆ ವರ್ಷ ಬದಲಾಗುವುದಿಲ್ಲ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ನನ್ನ ಸಂಪರ್ಕದಲ್ಲಿ 21 TMC ಶಾಸಕರು: ಬಿಜೆಪಿ ನಾಯಕ Mithun Chakraborty

ಡಿಸೆಂಬರ್‌ನಲ್ಲಿ ಮಮತಾ ಬಂಧನ ಎಂದಿದ್ದ ಬಿಜೆಪಿ..!

ತೃಣಮೂಲ ಕಾಂಗ್ರೆಸ್‌ ವಿರುದ್ದ ಸೆಪ್ಟೆಂಬರ್‌ ತಿಂಗಳಲ್ಲಿ ವಾಗ್ದಾಳಿ ನಡೆಸಿದ್ದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಮ್‌ದಾರ್‌, ‘ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಧನವಾಗಲಿದೆ’ ಎಂದು ಹೇಳಿದ್ದರು. ‘ಟಿಎಂಸಿ ಭ್ರಷ್ಟಾಚಾರದ ತನಿಖೆ ಈಗಾಗಲೇ ನಡೆಯುತ್ತಿದ್ದು, ಡಿಸೆಂಬರ್‌ನಲ್ಲಿ ಟಿಎಂಸಿ ಸರ್ಕಾರವು ಪತನವಾಗುತ್ತದೆ‘ ಎಂದು ಸುಕಾಂತ ಮಜುಮ್‌ದಾರ್‌ ಹೇಳಿದ್ದರು. ಈ ನಡುವೆ, ‘ಮುಂದಿನ 6 ತಿಂಗಳಲ್ಲಿ ಹೊಸ ಟಿಎಂಸಿ ಬರಲಿದೆ’ ಎಂದು ಆಡಳಿತ ಪಕ್ಷ ಹಾಕಿರುವ ಪೋಸ್ಟರ್‌ ಕುರಿತು ಟೀಕಿಸಿದ ವಿರೋಧ ಪಕ್ಷ ನಾಯಕ ಸುವೇಂದು ಅಧಿಕಾರಿ, ‘ಇಡಿ ಮತ್ತು ಸಿಬಿಐ ತಮ್ಮ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿವೆ. ಟಿಎಂಸಿಗೆ ಡಿಸೆಂಬರ್‌ನಲ್ಲಿ ಕೊನೆಗಾಲ ಬರಲಿದೆ’ ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಟಿಎಂಸಿ ವಕ್ತಾರ ಶುವೊಮಾಯ್‌ ಬಸು ‘ನಮಗೆ ಪೋಲಿಸ್‌ ತನಿಖೆಯ ಮೇಲೆ ನಂಬಿಕೆಯಿದೆ. ಬಿಜೆಪಿ ಯಾವಾಗಲೂ ಸುಳ್ಳು ಆರೋಪಗಳನ್ನು ಮಾಡುತ್ತಿರುತ್ತದೆ’ ಎಂದು ತಿರುಗೇಟು ಕೊಟ್ಟಿದ್ದರು. 

ಡಿಸೆಂಬರ್ ವೇಳೆಗೆ ಮಮತಾ ಬ್ಯಾನರ್ಜಿ ಅವರನ್ನು ಬಂಧಿಸಬಹುದು. 41 ಟಿಎಂಸಿ ನಾಯಕರ ಹೆಸರುಗಳು ಬಿಜೆಪಿ ಉನ್ನತ ನಾಯಕರ ಬಳಿ ಇದೆ. ಡಿಸೆಂಬರ್‌ನಲ್ಲಿ ಈ ಸರ್ಕಾರ ಪತನವಾಗಲಿದೆ”ಎಂದು ಸುಕಾಂತ ಮಜುಂದಾರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತ್ತು. 

ಇದನ್ನೂ ಓದಿ: Mamata Banerjee ಗೆ ಬಿಗ್ ಶಾಕ್, ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು!

ಇನ್ನೊಂದೆಡೆ, ಬಿಜೆಪಿ ನಾಯಕ ಮತ್ತು ಹಿರಿಯ ಚಲನಚಿತ್ರ ನಟ ಮಿಥುನ್ ಚಕ್ರವರ್ತಿ ಸಹ ಹಲವಾರು ಟಿಎಂಸಿ ಶಾಸಕರು ತನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೊಂಡಿದ್ದರು. “ನಾನು ಮಮತಾ ಬ್ಯಾನರ್ಜಿಯವರ ಪಕ್ಷದ 21 ಶಾಸಕರೊಂದಿಗೆ ಸಂಪರ್ಕದಲ್ಲಿದ್ದೇನೆ, ನಾನು ಇದನ್ನು ಮೊದಲೇ ಮತ್ತು ಮತ್ತೆ ಹೇಳಿದ್ದೇನೆ, ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಸ್ವಲ್ಪ ಸಮಯ ಕಾಯಿರಿ ಎಂದು ನಾನು ವಿನಂತಿಸುತ್ತೇನೆ” ಎಂದು ಮಿಥುನ್ ಚಕ್ರವರ್ತಿ ಮಾಧ್ಯಮಗಳಿಗೆ ಹೇಳಿದ್ದರು. 

click me!